200 ಮೀಟರ್ ಓಟದಲ್ಲಿ ಪಿಟಿ ಉಷಾ ದಾಖಲೆ ಅಳಿಸಿದ ಧನಲಕ್ಷ್ಮಿ!
ನೂರು ಮೀಟರ್ ಓಟದಲ್ಲಿ ದುತಿ ಚಂದ್ ಅವರನ್ನು ಸೋಲಿಸಿದ ತಮಿಳುನಾಡಿನ ಎಸ್.ಧನಲಕ್ಷ್ಮಿ ಗುರುವಾರ ನಡೆದ 24 ನೇ ರಾಷ್ಟ್ರೀಯ ಫೆಡರೇಶನ್ ಕಪ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಮಹಿಳೆಯರ 200 ಮೀಟರ್ ಸೆಮಿಫೈನಲ್ಸ್ ನ್ನು 23.26 ಸೆಕೆಂಡುಗಳ ಕ್ರಮಿಸಿ ಹೊಸ ಕೂಟ ದಾಖಲೆಯನ್ನು ಸ್ಥಾಪಿಸಿದರು.
Published: 19th March 2021 09:34 AM | Last Updated: 19th March 2021 12:54 PM | A+A A-

ತರಬೇತುದಾರರೊಂದಿಗೆ ಧನಲಕ್ಶ್ಮಿ
ಪಟಿಯಾಲಾ: ನೂರು ಮೀಟರ್ ಓಟದಲ್ಲಿ ದುತಿ ಚಂದ್ ಅವರನ್ನು ಸೋಲಿಸಿದ ತಮಿಳುನಾಡಿನ ಎಸ್.ಧನಲಕ್ಷ್ಮಿ ಗುರುವಾರ ನಡೆದ 24 ನೇ ರಾಷ್ಟ್ರೀಯ ಫೆಡರೇಶನ್ ಕಪ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಮಹಿಳೆಯರ 200 ಮೀಟರ್ ಸೆಮಿಫೈನಲ್ಸ್ ನ್ನು 23.26 ಸೆಕೆಂಡುಗಳ ಕ್ರಮಿಸಿ ಹೊಸ ಕೂಟ ದಾಖಲೆಯನ್ನು ಸ್ಥಾಪಿಸಿದರು.
ಸೆಮಿಫೈನಲ್ಸ್ ನಲ್ಲಿ ಅಸ್ಸಾಂನ ಹಿಮಾ ದಾಸ್ ವಿರುದ್ಧ ಜಯಗಳಿಸಿದ್ದ ತಮಿಳುನಾಡಿನ ಎಸ್ ಧನಲಕ್ಷ್ಮಿ ಭಾರತದ ಸಾರ್ವಕಾಲಿನವರ ಪಟ್ಟಿಯಲ್ಲಿ ಅಗ್ರ 10 ರಲ್ಲಿ ಸ್ಥಾನ ಪಡೆದಿದ್ದಾರೆ. ತಮಿಳುನಾಡಿನ ಅರ್ಚನಾ ಸುಸೀಧರನ್ ಹೀಟ್ ನ ಸೆಮಿಫೈನಲ್ಸ್ ನಲ್ಲಿ 24.07 ಸೆಕೆಂಡುಗಳಲ್ಲಿ ಗೆದ್ದರು. ಹಿಮಾ ದಾಸ್ (23.10) ಮತ್ತು ಅರ್ಚನಾ (23.18) ಅವರ ವೇಗಕ್ಕಿಂತ, ಧನಲಕ್ಷ್ಮಿ ಅವರ ಹೆಚ್ಚಾಗಿತ್ತು. ಧನಲಕ್ಷ್ಮಿ ಅವರ ಸಮಯವು ಪಿಟಿ ಉಷಾ ಅವರ 23 ವರ್ಷದ ಕೂಟ ದಾಖಲೆಯನ್ನು (22.80 ಸೆಕೆಂಡುಗಳ) ಅಳಿಸಿದ್ದಾರೆ.
ಉಷಾ 1998 ರಲ್ಲಿ ಚೆನ್ನೈನಲ್ಲಿ 22.80 ಸೆಕೆಂಡುಗಳ ದಾಖಲೆಯನ್ನು ನಿರ್ಮಿಸಿದ್ದರು. ಈ ಹಿಂದೆ 100 ಮೀಟರ್ ಫೈನಲ್ನಲ್ಲಿ ಸ್ಟಾರ್ ಅಥ್ಲೀಟ್ ದುತಿ ಚಂದ್ ಅವರನ್ನು ಅಚ್ಚರಿಗೊಳಿಸಿದ್ದ ದ್ದ ಧನಲಕ್ಷ್ಮಿಗೆ ಇದು ಮತ್ತೊಂದು ಗರಿ.