ಕಮಲ್‌ಪ್ರೀತ್ ಕೌರ್ ಕೂಟ ದಾಖಲೆ, ಓಲಿಂಪಿಕ್ಸ್ ಗೆ ಅರ್ಹತೆ

ಶುಕ್ರವಾರ ನಡೆದ 24 ನೇ ರಾಷ್ಟ್ರೀಯ ಫೆಡರೇಶನ್ ಕಪ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಡಿಸ್ಕಸ್ ಥ್ರೋದಲ್ಲಿ ಕಮಲ್‌ಪ್ರೀತ್ ಕೌರ್ ಹೊಸ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿ, ಈ ವರ್ಷದ ಜುಲೈನಲ್ಲಿ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

Published: 19th March 2021 09:03 PM  |   Last Updated: 19th March 2021 09:03 PM   |  A+A-


Kamalpreet Kaur

ಕಮಲ್ ಪ್ರೀತ್ ಕೌರ್

Posted By : Vishwanath S
Source : Online Desk

ಪಟಿಯಾಲ: ಶುಕ್ರವಾರ ನಡೆದ 24 ನೇ ರಾಷ್ಟ್ರೀಯ ಫೆಡರೇಶನ್ ಕಪ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಡಿಸ್ಕಸ್ ಥ್ರೋದಲ್ಲಿ ಕಮಲ್‌ಪ್ರೀತ್ ಕೌರ್ ಹೊಸ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿ, ಈ ವರ್ಷದ ಜುಲೈನಲ್ಲಿ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಪಂಜಾಬ್‌ ಬಾದಲ್‌ನ 25 ವರ್ಷದ ಕಮಲ್‌ಪ್ರೀತ್ 2014 ರ ಏಷ್ಯನ್ ಗೇಮ್ಸ್ ಚಾಂಪಿಯನ್ ಸೀಮಾ ಪುನಿಯಾ ಅವರನ್ನು ಹಿಂದಿಕ್ಕಿದರು. ಕಮಲ್‌ಪ್ರೀತ್ ಓಲಿಂಪಿಕ್ಸ್ ಅರ್ಹತಾ ಗೆರೆಯನ್ನು ದಾಟಿ ಸಂಭ್ರಮಿಸಿದರು. 

ಟೋಕಿಯೊಗೆ ಅವಕಾಶ ಪಡೆಯಲು 63.5 ಮೀಟರ್ ಎಸೆಯಬೇಕಿತ್ತು. ಕಮಲ್ ಪ್ರೀತ್ 65.06 ಮೀಟರ್ ಎಸೆದು ಕೂಟ ದಾಖಲೆ ನಿರ್ಮಿಸಿದರು. ಈ ಮೊದಲು 2012ರಲ್ಲಿ ಕೃಷ್ಣಾ ಪೂನಿಯಾ 64.76 ದೂರ್ ಡಿಸ್ಕಸ್ ಎಸೆದಿದ್ದರು. 

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp