ಆಲ್ ಇಂಗ್ಲೆಂಡ್ ಓಪನ್: ಜಪಾನ್ ಆಟಗಾರ್ತಿ ವಿರುದ್ಧ ರೋಚಕ ಜಯ, ಸೆಮಿಫೈನಲ್ ಪ್ರವೇಶಿಸಿದ ಪಿವಿ ಸಿಂಧು
ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಜಪಾನ್ನ ಮೂರನೇ ಶ್ರೇಯಾಂಕದ ಅಕಾನೆ ಯಮಗುಚಿ ವಿರುದ್ಧ ರೋಚಕ ಗೆಲುವು ಸಾಧಿಸಿದ ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಸೆಮಿ ಫೈನಲ್ಸ್ ಗೆ ಲಗ್ಗೆ ಇಟ್ಟಿದ್ದಾರೆ.
Published: 20th March 2021 11:06 AM | Last Updated: 20th March 2021 11:06 AM | A+A A-

ಪಿವಿ ಸಿಂಧು
ಬರ್ಮಿಂಗ್ ಹ್ಯಾಮ್: ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿಜಪಾನ್ನ ಮೂರನೇ ಶ್ರೇಯಾಂಕದ ಅಕಾನೆ ಯಮಗುಚಿ ವಿರುದ್ಧ ರೋಚಕ ಗೆಲುವು ಸಾಧಿಸಿದ ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಸೆಮಿ ಫೈನಲ್ಸ್ ಗೆ ಲಗ್ಗೆ ಇಟ್ಟಿದ್ದಾರೆ.
ಐದನೇ ಶ್ರೇಯಾಂಕದ ಸಿಂಧು, ಆರಂಭಿಕ ಪಂದ್ಯವನ್ನು ಕಳೆದುಕೊಂಡ ನಂತರ ಗಮನಾರ್ಹ ಪುನರಾಗಮನ ಪಡೆದುಕೊಂಡರು. ಯಮಗುಚಿ ವಿರುದ್ಧ 16-21, 21-16, 21-19 ಅಂತರದ ಜಯ ದಾಖಲಿಸಿದ ಸಿಂಧು ಒಂದು ಗಂಟೆ 16 ನಿಮಿಷಗಳಲ್ಲಿ ಗೆಲುವು ಪಡೆಯುವಲ್ಲಿ ಸಫಲವಾದರು. ಸೆಮಿಫೈನಲ್ನಲ್ಲಿ ಥಾಯ್ಲೆಂಡ್ನ ಪಾರ್ನ್ಪಾವೀ ಚೊಚುವಾಂಗ್ ವಿರುದ್ಧ ಸಿಂಧು ಸೆಣೆಸಲಿದ್ದಾರೆ.
ಕಳೆದ ಮೂರು ಟೂರ್ನಿಗಳಲ್ಲಿ ಯಮಗುಚಿ ಎದುರು ಸೋಲುಂಡರೂ ಭಾರತೀಯ ಆಟಗಾರ್ತಿ ಜಪಾನ್ ನ ಬ್ಯಾಡ್ಮಿಂಟನ್ ಸ್ಟಾರ್ ವಿರುದ್ಧ ಇದೇ ಮೊದಲ ಬಾರಿಗೆ ಗೆಲುವು ದಾಖಲಿಸಿದ್ದಾರೆ.
The emotion of reaching the semi-finals #YAE2021 pic.twitter.com/pFLQz8zsRW
— Yonex All England Badminton Championships (@YonexAllEngland) March 19, 2021
ಇನ್ನೊಂದೆಡೆ ಭಾರತದ ಭರವಸೆಯ ಆಟಗಾರ ಲಕ್ಷ್ಯ ಸೇನ್ ಅವರು ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಸೇನ್ 17-21, 21-16, 17-21 ರಿಂದ ನೆದರ್ ಲ್ಯಾಂಡ್ ನ ಮಾರ್ಕ್ ಅವರ ವಿರುದ್ಧ 55 ನಿಮಿಷಗಳ ಕಾದಾಟದಲ್ಲಿ ಸೋಲು ಕಂಡಿದ್ದಾರೆ. ಮೊದಲ ಗೇಮ್ ನಲ್ಲಿ ಸೋಲು ಅನುಭವಿಸಿದ್ದ ಸೇನ್ ಎರಡನೇ ಗೇಮ್ ನಲ್ಲಿ ಭರ್ಜರಿ ಆಟ ಪ್ರದರ್ಶಿಸಿದ್ದರು. ಆದರೆ ಮೂರನೇ ಹಾಗೂ ಮಹತ್ವದ ಗೇಮ್ ನಲ್ಲಿ ಸೇನ್ ಅಂಕ ಕಲೆ ಹಾಕುವಲ್ಲಿ ವಿಫಲರಾದರು.