12 ಪಂದ್ಯಗಳ ಅಜೇಯ ಓಟಕ್ಕೆ ಬ್ರೇಕ್: ಬಾಕ್ಸರ್ ವಿಜೇಂದರ್ ಸಿಂಗ್ ಗೆ ಮಣ್ಣು ಮುಕ್ಕಿಸಿದ ಲೋಪ್ಸನ್
ವೃತ್ತಿಪರ ಬಾಕ್ಸಿಂಗ್ ನಲ್ಲಿ ಅಜೇಯ ಓಟವನ್ನು ನಡೆಸಿದ್ದ ಭಾರತದ ನಾಕ್ ಔಟ್ ಕಿಂಗ್ ಎಂದು ಪರಿಗಣಿಸಲ್ಪಟ್ಟ ವಿಜೇಂದರ್ ಸಿಂಗ್, ರಷ್ಯಾದ ಬಾಕ್ಸರ್ ಲೋಪ್ಸನ್ ಅವರ ವಿರುದ್ಧ ಆರ್ಟಿಯುಶ್ ಸೋಲು ಕಂಡರು.
Published: 20th March 2021 05:07 PM | Last Updated: 20th March 2021 05:07 PM | A+A A-

ವಿಜೇಂದರ್ ಸಿಂಗ್-ಆರ್ಟಿಯುಶ್ ಲೋಪ್ಸನ್
ಪಣಜಿ: ವೃತ್ತಿಪರ ಬಾಕ್ಸಿಂಗ್ ನಲ್ಲಿ ಅಜೇಯ ಓಟವನ್ನು ನಡೆಸಿದ್ದ ಭಾರತದ ನಾಕ್ ಔಟ್ ಕಿಂಗ್ ಎಂದು ಪರಿಗಣಿಸಲ್ಪಟ್ಟ ವಿಜೇಂದರ್ ಸಿಂಗ್, ರಷ್ಯಾದ ಬಾಕ್ಸರ್ ಆರ್ಟಿಯುಶ್ ಲೋಪ್ಸನ್ ಅವರ ವಿರುದ್ಧ ಸೋಲು ಕಂಡರು.
ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಐದನೇ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆರ್ಟಿಯುಶ್, ವಿಜೇಂದರ್ ಸಿಂಗ್ ಅವರ 12 ಪಂದ್ಯಗಳ ಅಜೇಯ ಓಟಕ್ಕೆ ಬ್ರೇಕ್ ಹಾಕಿದರು.
ಭಾರತದಲ್ಲಿ ಮೊದಲ ಬಾರಿಗೆ ಕ್ಯಾಸಿನೊ ಹಡಗಿನ ಮೇಲೆ ಆಡಿದ ಪಂದ್ಯದಲ್ಲಿ ಅಜೇಯರಾಗಬೇಕೆಂಬ ವಿಜೇಂದರ್ ಅವರ ಕನಸನ್ನು ರಷ್ಯಾ ಮೂಲದ 26 ವರ್ಷದ ಲೋಪ್ಸನ್ ಚೂರುಚೂರು ಮಾಡಿದರು.
ಮೊದಲಿನಿಂದಲೂ ಲೋಪ್ಸನ್ ಪ್ರಾಬಲ್ಯ ಮೆರೆದರು. ಈ ಪಂದ್ಯದಲ್ಲಿ ವಿಜೇಂದರ್ಗೆ ಮೇಲುಗೈ ಸಾಧಿಸಲು ಅವಕಾಶಗಳು ಸಿಗಲಿಲ್ಲ. ಲೋಪ್ಸನ್ ಎತ್ತರ ಮತ್ತು ಚುರುಕುತನದ ಆಟ ಅವರ ಕೈ ಹಿಡಿಯಿತು.
ನಾಲ್ಕನೇ ಸುತ್ತಿನಲ್ಲಿ ವಿಜೇಂದರ್ಗೆ ಅವಕಾಶ ಸಿಕ್ಕರೂ ಅವರ ಲಾಭ ಪಡೆಯಲು ಸಾಧ್ಯವಾಗಲಿಲ್ಲ.
ಪಂದ್ಯವನ್ನು ಸೋತ ನಂತರ ಸೋಲು ಮತ್ತು ಗೆಲುವು ಒಂದು ನಾಣ್ಯದ ಎರಡು ಮುಖಗಳು ಎಂದು ವಿಜೇಂದರ್ ಹೇಳಿದರು.