ಐಎಸ್ಎಸ್ಎಫ್ ವಿಶ್ವಕಪ್: ಯಶಸ್ವಿನಿಗೆ ಸ್ವರ್ಣ, ಮನು ಭಾಕರ್ ಗೆ ಬೆಳ್ಳಿ ಪದಕ
ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್ಎಸ್ಎಫ್) ವಿಶ್ವಕಪ್ ರೈಫಲ್ / ಪಿಸ್ತೂಲ್ / ಶಾಟ್ಗನ್ನ ಮಹಿಳಾ 10 ಎಂ ಏರ್ ಪಿಸ್ತೂಲ್ ಫೈನಲ್ನಲ್ಲಿ ಯಶಸ್ವಿನಿ ದೇಸ್ವಾಲ್ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ತಂದು ಕೊಟ್ಟಿದ್ದಾರೆ.
Published: 21st March 2021 09:00 AM | Last Updated: 22nd March 2021 12:57 PM | A+A A-

ನವದೆಹಲಿ: ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್ಎಸ್ಎಫ್) ವಿಶ್ವಕಪ್ ರೈಫಲ್ / ಪಿಸ್ತೂಲ್ / ಶಾಟ್ಗನ್ನ ಮಹಿಳಾ 10 ಎಂ ಏರ್ ಪಿಸ್ತೂಲ್ ಫೈನಲ್ನಲ್ಲಿ ಯಶಸ್ವಿನಿ ದೇಸ್ವಾಲ್ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ತಂದು ಕೊಟ್ಟಿದ್ದಾರೆ. ದೇಸ್ವಾಲ್ 238.8 ಅಂಕಗಳನ್ನು ಗಳಿಸಿ ಬಂಗಾರದ ಪದಕ ಗಳಿಸಿಕೊಂಡಿದ್ದಾರೆ.
ಭಾರತದ ಇನ್ನೊಬ್ಬ ಶೂಟರ್ ಮನು ಭಾಕರ್ 236.7 ಅಂಕಗಳೊಂದಿಗೆ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.ಬೆಲಾರಸ್ ನ ವಿಕ್ಟೋರಿಯಾ ಚೈಕಾ ಈ ವಿಭಾಗದ ಕಂಚಿನ ಪದಕ ಗಳಿಸಿಕೊಂಡಿದ್ದಾರೆ.
ಭಾರತದ ಯಶಸ್ವಿನಿ ಹಾಗೂ ಮನು ಭಾಕರ್ ಇದಾಗಲೇ ಟೋಕಿಯೋ ಒಲಂಪಿಕ್ಸ್ ಗೆ ಅರ್ಹತೆ ಗಿಟ್ಟಿಸಿದ್ದಾರೆ.
ಹಿಂದಿನ ದಿನ, ವಿಶ್ವದ ನಂಬರ್ ಒನ್ ಶೂಟರ್ ದಿವ್ಯಾಂಶ್ ಸಿಂಗ್ ಪನ್ವಾರ್ 10 ಮೀಟರ್ ಏರ್ ರೈಫಲ್ (ಪುರುಷರ ವಿಭಾಗ) ದಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮೆರೆದಿದ್ದರು.ಅವರು ಈ ಮೂಲಕ ಭಾರತದ ಪದಕ ಖಾತೆಯನ್ನು ತೆರೆದಿದ್ದರು. ದಿವ್ಯಾಂಶ್ 228.1 ಅಂಕ ಪಡೆದಿದ್ದರು. ಭಾರತದ ಇನ್ನೊಬ್ಬ ಶೂಟರ್ ಅರ್ಜುನ್ ಬಬುಟಾ ಇದೇ ವಿಭಾಗದಲ್ಲಿ ಐದನೇ ಸ್ಥಾನ ಗಳಿಸಿ ಪದಕದಿಂದ ವಂಚಿತರಾದರು. ಯುಎಸ್ಎ ನ ಲ್ಯೂಕಾಸ್ ಕೊಜೆನಿಸ್ಕಿ ಚಿನ್ನದ ಪದಕ ಗೆದ್ದರೆ, ಹಂಗೇರಿಯನ್ ಶೂಟರ್ ಇಸ್ತಾನ್ ಪನಿ ಮೆಗಾ ಈವೆಂಟ್ನಲ್ಲಿ ಬೆಳ್ಳಿ ಪದಕ ಗಳಿಸಿದ್ದರು.