ಐಎಸ್‌ಎಸ್‌ಎಫ್ ವಿಶ್ವಕಪ್: ಪುರುಷರ 10 ಮೀಟರ್ ಏರ್ ರೈಫಲ್ ಕೂಟ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ, ಮಹಿಳೆಯರಿಗೆ 4ನೇ ಸ್ಥಾನ

ನವದೆಹಲಿಯಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಭಾನುವಾರ ನಡೆದ ಪುರುಷರ 10 ಮೀಟರ್ ಏರ್ ರೈಫಲ್ ಟೀಮ್ ಸ್ವರೂಪದ ಸ್ಪರ್ಧೆಯಲ್ಲಿ ಭಾರತ ಬೆಳ್ಳಿ ಪದಕ ಗೆದ್ದಿದೆ. 

Published: 21st March 2021 01:47 PM  |   Last Updated: 21st March 2021 01:52 PM   |  A+A-


Posted By : Raghavendra Adiga
Source : ANI

ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಭಾನುವಾರ ನಡೆದ ಪುರುಷರ 10 ಮೀಟರ್ ಏರ್ ರೈಫಲ್ ಟೀಮ್ ಸ್ವರೂಪದ ಸ್ಪರ್ಧೆಯಲ್ಲಿ ಭಾರತ ಬೆಳ್ಳಿ ಪದಕ ಗೆದ್ದಿದೆ. ಈಶ್ವರಿ ಪ್ರತಾಪ್ ಸಿಂಗ್ ತೋಮರ್, ದೀಪಕ್ ಕುಮಾರ್ ಮತ್ತು ಪಂಕಜ್ ಕುಮಾರ್ ಅವರನ್ನೊಳಗೊಂಡ ಭಾರತೀಯ ತಂಡ ಈ ಸಾಧನೆ ಮಾಡಿದೆ. 

ಇದೇ ವಿಭಾಗದಲ್ಲಿ ಯುಎಸ್ಎ ತಂಡ ಚಿನ್ನದ ಪದಕ ಗಳಿಸಿಕೊಂಡಿದ್ದರೆ ದಕ್ಷಿಣ ಕೊರಿಯಾ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು.

ಮಹಿಳೆಯರ 10 ಮೀಟರ್ ಏರ್ ರೈಫಲ್ ಟೀಮ್ ಸ್ಪರ್ಧೆಯಲ್ಲಿ ಭಾರತ ನಾಲ್ಕನೇ ಸ್ಥಾನ ಗಳಿಸಿತು. ಪೋಲೆಂಡ್ ಗೆ 17-7ರಿಂದ ಮಣಿದ ಭಾರತ ತಂಡದಲ್ಲಿ ಅಪೂರ್ವಿ ಚಾಂಡೇಲಾ ಶ್ರೀಯಂಕಾ ಸದಂಗಿ ಮತ್ತು ನಿಶಾ ಕನ್ವಾರ್ ಅವರುಗಳಿದ್ದರು.

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp