ಶೂಟಿಂಗ್ ವಿಶ್ವಕಪ್: ಅವಳಿ ಬಂಗಾರ ಗೆದ್ದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಭಾರತ

ನವದೆಹಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ತೇ<ಜ್ ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್ಎಸ್ಎಫ್) ವಿಶ್ವಕಪ್ ರೈಫಲ್ / ಪಿಸ್ತೂಲ್ / ಶಾಟ್ಗನ್ ಹಂತದಲ್ಲಿ ಆತಿಥೇಯ ಭಾರತ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 

Published: 22nd March 2021 09:23 AM  |   Last Updated: 22nd March 2021 09:29 AM   |  A+A-


ಶೂಟಿಂಗ್ ಚಿನ್ನ ಗೆದ್ದ ಮಹಿಳಾ ತಂಡ

Posted By : Raghavendra Adiga
Source : PTI

ನವದೆಹಲಿ: ನವದೆಹಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ತೇ<ಜ್ ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್ಎಸ್ಎಫ್) ವಿಶ್ವಕಪ್ ರೈಫಲ್ / ಪಿಸ್ತೂಲ್ / ಶಾಟ್ಗನ್ ಹಂತದಲ್ಲಿ ಆತಿಥೇಯ ಭಾರತ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಒಟ್ಟೂ ಎರಡು ಚಿನ್ನ, ಮಹಿಳಾ ಸ್ಕೀಟ್‌ನಲ್ಲಿ ಐತಿಹಾಸಿಕ ಕಂಚು ಸೇರಿದಂತೆ ಒಟ್ಟಾರೆ ಒಂಬತ್ತು ಪದಕಗಳೊಂದಿಗೆ ಈಗ ಚಿನ್ನ, ಬೆಳ್ಳಿ ಹಾಗೂ ಕಂಚು ತಲಾ ಮೂರು ಪದಕ ಗಳಿಸಿಕೊಂಡಿದೆ.  ಭಾರತದಷ್ಟೇ ಸಂಖ್ಯೆಯ ಚಿನ್ನದೊಂದಿಗೆ ಯುಎಸ್ಎ ಎರಡನೇ ಸ್ಥಾನದಲ್ಲಿದೆ. 

ಭಾನುವಾರ ಭಾರತ ಪುರುಷರ ಮತ್ತು ಮಹಿಳೆಯರ 10 ಎಂ ಏರ್ ಪಿಸ್ತೂಲ್ ತಂಡದ ಈವೆಂಟ್‌ಗಳಲ್ಲಿ ಎರಡು ಬಂಗಾರದ ಪದಕ ಗಳಿಸಿಕೊಂಡಿದೆ. ಫೈನಲ್‌ನಲ್ಲಿ ಮನು ಭಾಕರ್, ಯಶಸ್ವಿನಿ ದೇಸ್ವಾಲ್ ಮತ್ತು ಶ್ರೀನಿವೇತಾ ಮೂವರನ್ನೊಳಗೊಂಡ ತಂಡ 16-8 ಅಂತರದಿಂದ ಪೋಲೆಂಡ್ ತಂಡವನ್ನು ಮಣಿಸಿ ಅಗ್ರಸ್ಥಾನಕ್ಕೇರಿದ್ದರು.

ಪುರುಷರ 10 ಎಂ ಏರ್ ಪಿಸ್ತೂಲ್ ಫೈನಲ್‌ನಲ್ಲಿಸೌರಭ್ ಚೌಧರಿ, ಅಭಿಷೇಕ್ ವರ್ಮಾ ಮತ್ತು ಶಹಜಾರ್ ರಿಜ್ವಿ 17-11ರಿಂದ ವಿಯೆಟ್ನಾಂ ಅನ್ನು ಹಿಂದಿಕ್ಕಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 

ಮಹಿಳಾ ಸ್ಕೀಟ್‌ನಲ್ಲಿ ಐಎಸ್‌ಎಸ್‌ಎಫ್ ವಿಶ್ವಕಪ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಗನೇತ್ ನೆಹಾನ್ ಎಂಬ ಹೆಗ್ಗಳಿಕೆಗೆ ಪಾತ್ರವಾದರು.  ಶಾಟ್‌ಗನ್ ಶ್ರೇಣಿಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಅವರು 40 ಅಂಕದೊಡನೆ ಕಂಚು ಗೆದ್ದರು.  ಇದಕ್ಕೂ ಮೊದಲು, ಅವರು ಅರ್ಹತಾ ವಿಭಾಗದಲ್ಲಿ 125 ರಲ್ಲಿ 117 ಅಂಕ ಗಳಿಸಿ  ವೃತ್ತಿಜೀವನದ ಅತ್ಯುತ್ತಮ ಸ್ಕೋರ್ ಮಾಡಿದ್ದರು.

ಇದಕ್ಕೆ ಮುನ್ನ ಭಾರತ ಪುರುಷರ 10 ಎಂ ಏರ್ ರೈಫಲ್‌ ಟೀಂ ಇವೆಂಟ್ ನಲ್ಲಿ ಬೆಳ್ಳಿ ಪದಕ ಗಳಿಸಿಕೊಂಡಿತ್ರ್ತು.

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp