ಶೂಟಿಂಗ್ ವಿಶ್ವಕಪ್: ಭಾರತದ ಎಲವೆನಿಲ್, ದಿವ್ಯಾಂಶ್ ಗೆ ಚಿನ್ನ

ದೆಹಲಿಯ ಕರ್ಣಿ ಸಿಂಗ್ ಶೂಟಿಂಗ್ ರೇಂಜ್ ನಲ್ಲಿ ನಡೆದ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ ನ 10 ಮೀಟರ್ ಏರ್ ರೈಫಲ್ ಮಿಕ್ಸೆಡ್ ಟೀಂ ಸ್ಪರ್ಧೆಯಲ್ಲಿ ಭಾರತದ ಎಲವೆನಿಲ್ ವಲರಿವನ್ ಮತ್ತು ದಿವ್ಯಾಂಶ್ ಸಿಂಗ್ ಪನ್ವಾರ್ ಚಿನ್ನದ ಪದಕ ಜಯಿಸಿದ್ದಾರೆ.

Published: 22nd March 2021 01:10 PM  |   Last Updated: 22nd March 2021 01:10 PM   |  A+A-


ಶೂಟಿಂಗ್ ನಲ್ಲಿ ಭಾರತದ ಎಲವೆನಿಲ್ , ದಿವ್ಯಾಂಶ್ ಗೆ ಚಿನ್ನ

Posted By : Raghavendra Adiga
Source : ANI

ನವದೆಹಲಿ: ದೆಹಲಿಯ ಕರ್ಣಿ ಸಿಂಗ್ ಶೂಟಿಂಗ್ ರೇಂಜ್ ನಲ್ಲಿ ನಡೆದ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ ನ 10 ಮೀಟರ್ ಏರ್ ರೈಫಲ್ ಮಿಕ್ಸೆಡ್ ಟೀಂ ಸ್ಪರ್ಧೆಯಲ್ಲಿ ಭಾರತದ ಎಲವೆನಿಲ್ ವಲರಿವನ್ ಮತ್ತು ದಿವ್ಯಾಂಶ್ ಸಿಂಗ್ ಪನ್ವಾರ್ ಚಿನ್ನದ ಪದಕ ಜಯಿಸಿದ್ದಾರೆ.

ಅಂತಿಮ ಸುತ್ತಿನಲ್ಲಿ ಅವರು ಒಟ್ತಾಗಿ 16 ಅಂಕ ಗಳಿಸಿದ್ದರು. ಈ ಮೂಲಕ ಹಂಗೇರಿಯ ಇಸ್ತವಾನ್‌ ಪೆನಿ  ಮತ್ತು ಎಸ್ಜ್ಟರ್ ಡೆನೆಸ್ ಅವರನ್ನು ಹಿಂದಿಕ್ಕಿದ್ದರು.

ಅಂತಿಮ ಹಂತದ ಶೂಟಿಂಗ್ ನಲ್ಲಿ ವಲರಿವನ್ ಮತ್ತು ಪನ್ವಾರ್ ತಲಾ 10.4 ರಲ್ಲಿ ಚಿನ್ನದ ಪದಕ ಖಚಿತ ಮಾಡಿಕೊಂಡಿದ್ದರು.ಹಂಗೇರಿಯನ್ ಜೋಡಿ 10.7 ಮತ್ತು 9.9 ಗಳಿಸಿತು.

ಅದಕ್ಕೂ ಮೊದಲು, ಭಾರತೀಯ ಶೂಟರ್ ಗಳು ತಲಾ ಮೂರು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗಳಿಸಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು..

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp