ಜಾಕೋವಿಚ್, ನಡಾಲ್, ಫೆಡರರ್ ಬಳಿಕ ಮಿಯಾಮಿ ಓಪನ್’ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದ ಸೆರೆನಾ ವಿಲಿಯಮ್ಸ್
ನುವಾಕ್ ಜಾಕೋವಿಚ್, ರಾಫೆಲ್ ನಡಾಲ್ ಮತ್ತು ರೋಜರ್ ಫೆಡರರ್ ಬಳಿಕ ಇದೀಗ ಅಮೆರಿಕದ ಸೆರೆನಾ ವಿಲಿಯಮ್ಸ್ ಮಿಯಾಮಿ ಓಪನ್ ಟೆನ್ನಿಸ್ ಟೂರ್ನಿಯಿಂದ ಹೆಂದೆ ಸರಿದಿದ್ದಾರೆ.
Published: 23rd March 2021 01:05 AM | Last Updated: 23rd March 2021 12:35 PM | A+A A-

ಸೆರೆನಾ ವಿಲಿಯಮ್ಸ್ (ಟ್ವಿಟರ್ ಚಿತ್ರ)
ನ್ಯೂಯಾರ್ಕ್: ನುವಾಕ್ ಜಾಕೋವಿಚ್, ರಾಫೆಲ್ ನಡಾಲ್ ಮತ್ತು ರೋಜರ್ ಫೆಡರರ್ ಬಳಿಕ ಇದೀಗ ಅಮೆರಿಕದ ಸೆರೆನಾ ವಿಲಿಯಮ್ಸ್ ಮಿಯಾಮಿ ಓಪನ್ ಟೆನ್ನಿಸ್ ಟೂರ್ನಿಯಿಂದ ಹೆಂದೆ ಸರಿದಿದ್ದಾರೆ.
ಇದೇ ಸೋಮವಾರದಿಂದ ಆರಂಭವಾಗಿರುವ ಮಿಯಾಮಿ ಓಪನ್ ಟೆನಿಸ್ ಪಂದ್ಯಾವಳಿಯಿಂದ ಸೆರೆನಾ ವಿಲಿಯಮ್ಸ್ ಹಿಂದೆ ಸರಿದಿದ್ದು, ಇತ್ತೀಚೆಗೆ ನಡೆದ ಬಾಯಿಯ ಶಸ್ತ್ರಚಿಕಿತ್ಸೆಯಿಂದಾಗಿ ಈ ನಿರ್ಧಾರಕ್ಕೆ ಬರಬೇಕಾಯಿತು ಎಂದು 39 ವರ್ಷದ ಸೆರೆನಾ ವಿಲಿಯಮ್ಸ್ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಸೆರೆನಾ, 'ಮಿಯಾಮಿ ಟೂರ್ನಿ ನನ್ನ ಪಾಲಿಗೆ ಯಾವತ್ತೂ ಸ್ಪೆಷಲ್. ಕಾರಣ, ಇದು ನನ್ನ ಮನೆಯಂಗಳದ ಪಂದ್ಯಾವಳಿ. ಈ ಬಾರಿ ತವರಿನ ಅಭಿಮಾನಿಗಳನ್ನು ಕಾಣಲಾಗದು ಎಂಬ ಬೇಸರವಿದೆ ಎಂದು ಸೆರೆನಾ ಹೇಳಿದ್ದಾರೆ. ದಾಖಲೆಯ 8 ಬಾರಿ ಮಿಯಾಮಿ ಓಪನ್ ಪ್ರಶಸ್ತಿ ಜಯಿಸಿದ ಹೆಗ್ಗಳಿಕೆ ಸೆರೆನಾ ಹೆಸರಿನಲ್ಲಿದೆ.
ಇನ್ನು ಈ ಹಿಂದೆ ನೊವಾಕ್ ಜಾಕೋವಿಚ್, ರಾಫೆಲ್ ನಡಾಲ್, ರೋಜರ್ ಫೆಡರರ್ ಮೊದಲಾದ ಪ್ರಮುಖ ಟೆನಿಸ್ ಆಟಗಾರರು ಟೂರ್ನಿಯಿಂದ ಹಿಂದೆ ಸರಿದಿದ್ದರು.