ಐಎಸ್‌ಎಸ್‌ಎಫ್ ವಿಶ್ವಕಪ್: ಭಾರತಕ್ಕೆ ತ್ರಿವಳಿ ಸ್ವರ್ಣ ಸಂಭ್ರಮ

ನವದೆಹಲಿಯಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಸೋಮವಾರ ಭಾರತ ಇನ್ನೂ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದು, ಆರು ಚಿನ್ನ, ನಾಲ್ಕು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳೊಂದಿಗೆ ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

Published: 23rd March 2021 09:40 AM  |   Last Updated: 23rd March 2021 12:35 PM   |  A+A-


ಐಎಸ್‌ಎಸ್‌ಎಫ್ ವಿಶ್ವಕಪ್:ಭಾರತಕ್ಕೆ ತ್ರಿವಳಿ ಸ್ವರ್ಣ ಸಂಭ್ರಮ

Posted By : Raghavendra Adiga
Source : PTI

ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಸೋಮವಾರ ಭಾರತ ಇನ್ನೂ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದು, ಆರು ಚಿನ್ನ, ನಾಲ್ಕು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳೊಂದಿಗೆ ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್ ನಲ್ಲಿ ಅತಿಥೇಯರು ಒಂದೇ ದಿನ ಐದು ಪದಕಗಳನ್ನು ಗೆದ್ದಿದ್ದಾರೆ, ಇದುವರೆಗೆ ಗೆದ್ದ 14 ಪದಕಗಳೊಡನೆ ಅಗ್ರಸ್ಥಾನ ಪಡೆಇದ್ದಾರೆ. ದಿನದ ಕೊನೆಯ ಫೈನಲ್‌ನಲ್ಲಿ ಸ್ಕೀಟ್ ಪುರುಷರ ತಂಡವು ಚಿನ್ನದ ಪದಕ ಗಳಿಸಿದೆ. ಇದಕ್ಕೆ ಮುನ್ನ ಭಾರತವು 10 ಮೀ ಏರ್ ರೈಫಲ್ ಮಿಕ್ಸೆಡ್ ಟೀಂ ಸ್ಪರ್ಧೆಯನ್ನು ಗೆಲ್ಲುವ ಮೂಲಕ 4 ನೇ ದಿನ ಪ್ರಾರಂಭ ಮಾಡಿದೆ.

ಮಹಿಳೆಯರ ಸ್ಕೀಟ್ ತಂಡದ ಸ್ಪರ್ಧೆಯಲ್ಲಿ ಭಾರತ ಬೆಳ್ಳಿ ಮತ್ತು 10 ಎಂ ಏರ್ ಪಿಸ್ತೂಲ್ ಮಿಕ್ಸೆಡ್ ಟೀಂ ಕಂಚು ಗೆದ್ದಿದೆ. 10 ಮೀಟರ್ ಏರ್ ಪಿಸ್ತೂಲ್ ಮಿಕ್ಸೆಡ್ ಟೀಂ ಯುವ ಪಿಸ್ತೂಲ್ ಏಸ್‌ಗಳಾದ ಮನು ಭಾಕರ್ ಮತ್ತು ಸೌರಭ್ ಚೌಧರಿ ಚಿನ್ನಕ್ಕೆ ಗುರಿಯಿಟ್ತರು. ಇದಲ್ಲದೆ ಇದೇ ವಿಬಾಗದಲ್ಲಿ ಕಂಚಿನ ಪದಕ ಸಹ ಬಾರತದ ಪಾಲಾಗಿದೆ. ಕಂಚಿನ ಪದಕ ಪಂದ್ಯದಲ್ಲಿ ಯಶಸ್ವಿನಿ ದೇಸ್ವಾಲ್, ಮತ್ತು ಅಭಿಷೇಕ್ ವರ್ಮಾ ಇದ್ದರು.

ಚಿನ್ನದ ಪದಕ ಪಂದ್ಯದಲ್ಲಿ ಮೈರಾಜ್ ಅಹ್ಮದ್ ಖಾನ್, ಅಂಗದ್ ವೀರ್ ಸಿಂಗ್ ಬಜ್ವಾ ಮತ್ತು ಗುರ್ಜೋತ್ ಖಂಗುರಾ ಅವರನ್ನೊಳಗೊಂಡ ಪುರುಷರ ಸ್ಕೀಟ್ ತಂಡವು 6-2 ಅಂಕಗಳಿಂದ ಕತಾರ್ ತಂಡವನ್ನು ಮಣಿಸಿದೆ. ಮಹಿಳಾ ಸ್ಕೀಟ್ ತಂಡದ ಸ್ಪರ್ಧೆಯಲ್ಲಿ ಕಝಕಿಸ್ಥಾನಕ್ಕೆ ಮಣಿದ ಭಾರತ ಬೆಳ್ಳಿ ಪದಕ ಗಳಿಸಿದೆ.

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp