ಜೊಕೊವಿಚ್‌ ವಿರುದ್ದ ಭಾರಿ ಸಂಚು: ಹನಿ ಟ್ರಾಪ್‌ ಬಲೆಗೆ ಬೀಳಿಸಲು ಮಾಡೆಲ್‌ ಗೆ ಭಾರಿ ಆಫರ್

ವಿಶ್ವದ ನಂಬರ್ ಒನ್ ಸರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ವಿರುದ್ಧ ಭಾರಿ ಪಿತೂರಿ ನಡೆದಿರುವಂತೆ ಕಂಡುಬರುತ್ತಿದೆ. ಅಗ್ರ ಟೆನಿಸ್ ತಾರೆಯನ್ನು ಹನಿ ಟ್ರ್ಯಾಪ್ ಬಲೆಗೆ ಬೀಳಿಸಲು ನಡೆದಿರುವ ಪ್ರಯತ್ನಗಳು ಬೆಳಕಿಗೆ ಬಂದಿವೆ.

Published: 24th March 2021 03:28 PM  |   Last Updated: 24th March 2021 03:28 PM   |  A+A-


novak

ನೊವಾಕ್ ಜೊಕೊವಿಕ್ - ಮಾಡೆಲ್

Posted By : Lingaraj Badiger
Source : UNI

ಬೆಲ್‌ ಗ್ರೇಡ್‌: ವಿಶ್ವದ ನಂಬರ್ ಒನ್ ಸರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ವಿರುದ್ಧ ಭಾರಿ ಪಿತೂರಿ ನಡೆದಿರುವಂತೆ ಕಂಡುಬರುತ್ತಿದೆ. ಅಗ್ರ ಟೆನಿಸ್ ತಾರೆಯನ್ನು ಹನಿ ಟ್ರ್ಯಾಪ್ ಬಲೆಗೆ ಬೀಳಿಸಲು ನಡೆದಿರುವ ಪ್ರಯತ್ನಗಳು ಬೆಳಕಿಗೆ ಬಂದಿವೆ.

ಜೊಕೊವಿಚ್‌ ಬೆಳವಣಿಗೆಯನ್ನು ಸಹಿಸದ ಕೆಲವರು ಅವರ ಹೆಸರಿಗೆ ಮಸಿಬಳಿಯಲು ಯುವತಿಯೊಬ್ಬಳಿಗೆ ಈ ಆಫರ್‌ ನೀಡಿದ್ದರು. ಸ್ವತಃ ಆ ಯುವತಿಯೇ ಈ ಅಂಶವನ್ನು ಬಹಿರಂಗಪಡಿಸಿದ್ದಾಳೆ. 

ಜೊಕೊವಿಚ್‌ ಅವರನ್ನು ಬುಟ್ಟಿಗೆಹಾಕಿಕೊಂಡು, ಅವರೊಂದಿಗೆ ಕಳೆದ ರಸ ನಿಮಿಷಗಳನ್ನು ವಿಡಿಯೋದಲ್ಲಿ ಸೆರೆ ಹಿಡಿದರೆ 52 ಲಕ್ಷ ರೂ. ನೀಡುವುದಾಗಿ ವ್ಯಕ್ತಿಯೊಬ್ಬ ಆಫರ್‌ ನೀಡಿದ್ದ ಎಂದು ಸರ್ಬಿಯಾದ ಮಾಡೆಲ್‌ ನಟಾಲಿಯಾ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. 

ಆದರೆ, ಜೊಕೊವಿಕ್ ಅವರ ಹೆಸರು ಕೆಡಿಸಲು ತಮಗೆ ಇಷ್ಟವಾಗಲಿಲ್ಲ, ಹಾಗಾಗಿ ಆಫರ್‌ ನಿರಾಕರಿಸಿದ್ದಾಗಿ ಆಕೆ ಹೇಳಿದ್ದಾರೆ. ಆದರೆ, ಮಾಡೆಲ್ ಹೊಗೆಡವಿದ ಅಂಶಗಳು ಸಂಚಲನ ಸೃಷ್ಟಿಸಿದ್ದು, ಕ್ರೀಡಾ ಜಗತ್ತು ಅಚ್ಚರಿಗೊಳಗಾಗಿದೆ.

ಮತ್ತೊಂದೆಡೆ ಸರ್ಬಿಯಾದ ತಾರಾ ಆಟಗಾರ ಸರಣಿ ಜಯಗಳ ಯಶಸ್ಸಿನ ಜೊತೆಗೆ, ಅವರ ಹೆಸರು ಹಾಗೂ ಖ್ಯಾತಿ ಹೆಚ್ಚುತ್ತಿದೆ. ಜೊಕೊವಿಚ್ ಇತ್ತೀಚೆಗೆ ಅಪರೂಪದ ಸಾಧನೆ ಮಾಡಿದ್ದಾರೆ. ಟೆನಿಸ್‌ ಜಗತ್ತಿನ ಚಾಂಪಿಯನ್‌ ಆಗಿ ಸ್ವಿಸ್ ದೈತ್ಯ ರೋಜರ್ ಫೆಡರರ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದು ಇತಿಹಾಸ ನಿರ್ಮಿಸಿದರು.

ಇನ್ನೂ ಫೆಬ್ರವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್‌ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಜೊಕೊವಿಕ್ ಮುಡಿಗೇರಿಸಿಕೊಂಡಿದ್ದರು. ಫೈನಲ್‌ನಲ್ಲಿ ರಷ್ಯಾದ ಆಟಗಾರ ಮೆಡ್ವೆಡೆವ್ ಅವರನ್ನು ಸೋಲಿಸಿ ಜೊಕೊ ದಾಖಲೆಯ ಒಂಬತ್ತು ಬಾರಿ ಆಸ್ಟ್ರೇಲಿಯಾದ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಟೆನಿಸ್ ಚಾಂಪಿಯನ್‌ ಆಗಿದ್ದರು.

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp