ಶೂಟಿಂಗ್ ವಿಶ್ವಕಪ್: ಮಹಿಳೆಯರ 25 ಮೀ ಪಿಸ್ತೂಲ್‌ನಲ್ಲಿ ಚಿಂಕಿಗೆ ಚಿನ್ನ; ಪುರುಷರ 50 ಎಂ ರೈಫಲ್ ನಲ್ಲಿ ಐಶ್ವರಿ ಪ್ರತಾಪ್ ಗೆ ಸ್ವರ್ಣ ಪದಕ

ಐಎಸ್ಎಸ್ಎಫ್ ವಿಶ್ವಕಪ್ ನ 25 ಮೀಟರ್ ಪಿಸ್ತೂಲ್ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ಶೂಟರ್ ಚಿಂಕಿ ಯಾದವ್ ಚಿನ್ನದ ಪದಕ ಗೆದ್ದಿದ್ದಾರೆ.

Published: 24th March 2021 02:45 PM  |   Last Updated: 24th March 2021 03:15 PM   |  A+A-


ಚಿಂಕಿ ಯಾದವ್ ಹಾಗೂ ಐಶ್ವರಿ ಪ್ರತಾಪ್ ಸಿಂಗ್

Posted By : Raghavendra Adiga
Source : PTI

ನವದೆಹಲಿ: ಐಎಸ್ಎಸ್ಎಫ್ ವಿಶ್ವಕಪ್ ನ 25 ಮೀಟರ್ ಪಿಸ್ತೂಲ್ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ಶೂಟರ್ ಚಿಂಕಿ ಯಾದವ್ ಚಿನ್ನದ ಪದಕ ಗೆದ್ದಿದ್ದಾರೆ.

ಅಂತಿಮ ಸುತ್ತಿನಲ್ಲಿ ರಾಹಿ ಸರ್ನೋಬತ್ ಮತ್ತು ಮನು ಭಾಕರ್ ಕೂಡ ಇದ್ದು ಅವರು ಕ್ರಮವಾಗಿ ಬೆಳ್ಳಿ ಹಗೂ ಕಂಚಿನ ಪದಕ ಗಳಿಸಿಕೊಂಡರು.  ಮೂವರು ಶೂಟರ್‌ಗಳು ಈಗಾಗಲೇ ಟೋಕಿಯೊ ಒಲಿಂಪಿಕ್ಸ್ ಕೋಟಾವನ್ನು ಖಚಿತಪಡಿಸಿಕೊಂಡಿದ್ದಾರೆ.

ಚಿಂಕಿ ಅವರ ಗೆಲುವಿನೊಂದಿಗೆ ಭಾರತದ ಪ್ರಸ್ತುತ ಚಿನ್ನದ ಪದಕಗಳ ಸಂಖ್ಯೆ 9 ಕ್ಕೆ ಏರಿದೆ.

ಪುರುಷರ 50 ಮೀ ರೈಫಲ್ ನಲ್ಲಿ  ಐಶ್ವರಿ ಪ್ರತಾಪ್‌ ಸಿಂಗ್‌ ಗೆ ಸ್ವರ್ಣ

ಡಾ.ಕರ್ಣಿ ಸಿಂಗ್ ಶೂಟಿಂಗ್ ರೇಂಜ್ ನಲ್ಲಿ ನಡೆದ ಪುರುಷರ 50 ಎಂ ರೈಫಲ್ 3 ಪೊಜಿಷನ್ ಇವೆಂಟ್ ನಲ್ಲಿ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಬುಧವಾರ ಚಿನ್ನದ ಪದಕ ಗೆದ್ದಿದ್ದಾರೆ.

3 ಪೊಜಿಷನ್ ಇವೆಂಟ್ ಸ್ಪರ್ಧೆಯಲ್ಲಿ ಶೂಟಿಂಗ್ ವಿಶ್ವಕಪ್ ಚಿನ್ನ ಗೆದ್ದ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆಗೆ ಪಾತ್ರರಾದ 20 ವರ್ಷದ ಶೂಟರ್ ಐಶ್ವರಿ ಪ್ರತಾಪ್ 462.5 ಅಂಕಗಳೊಂಡನೆ ಈ ಸಾಧನೆ ಮಾಡಿದ್ದಾರೆ.

ಪಂದ್ಯಾವಳಿಯಲ್ಲಿ ಭಾರತ ಒಂಬತ್ತು ಚಿನ್ನ , 4 ಬೆಳ್ಳಿ ಮತ್ತು 5 ಕಂಚಿನ ಪದಕ ಗಳಿಸಿಕೊಂಡಿದೆ.

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp