ಶೂಟಿಂಗ್‌ ವಿಶ್ವಕಪ್: 50 ಮೀ. ರೈಫಲ್ ನಲ್ಲಿ ಭಾರತದ ಮಹಿಳಾ ತಂಡಕ್ಕೆ ಬೆಳ್ಳಿ

ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ ಪಂದ್ಯಾವಳಿಯ 50 ಮೀಟರ್ ರೈಫಲ್ 3 ಪೊಸಿಷನ್ ತಂಡದಲ್ಲಿ ಭಾರತದ ಮೂವರು ಅಂಜುಮ್ ಮೌದ್ಗಿಲ್, ಶ್ರೇಯಾ ಸಕ್ಷೆನಾ ಮತ್ತು ಗಾಯತ್ರಿ ನಿತ್ಯಾನಂದಂ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ.

Published: 25th March 2021 03:26 PM  |   Last Updated: 25th March 2021 03:26 PM   |  A+A-


anjum1

ಅಂಜುಮ್ ಮೌದ್ಗಿಲ್

Posted By : Lingaraj Badiger
Source : PTI

ನವದೆಹಲಿ: ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ ಪಂದ್ಯಾವಳಿಯ 50 ಮೀಟರ್ ರೈಫಲ್ 3 ಪೊಸಿಷನ್ ತಂಡದಲ್ಲಿ ಭಾರತದ ಮೂವರು ಅಂಜುಮ್ ಮೌದ್ಗಿಲ್, ಶ್ರೇಯಾ ಸಕ್ಷೆನಾ ಮತ್ತು ಗಾಯತ್ರಿ ನಿತ್ಯಾನಂದಂ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ.

ಚಿನ್ನದ ಪದಕ ಗಳಿಸಬೇಕಾದ ಪಂದ್ಯದಲ್ಲಿ ಭಾರತ ತಂಡ 43 ಅಂಕ ಗಳಿಸಿ ಸೋಲು ಅನುಭವಿಸುವ ಮೂಲಕ ಬೆಳಕ್ಕೆ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ. ಭಾರತದ ಮಹಿಳೆಯರ ವಿರುದ್ಧ ಪೋಲಿಷ್ ತಂಡ 47 ಅಂಕ ಗಳಿಸುವ ಮೂಲಕ ಚಿನ್ನದ ಪದಕ ಗೆದ್ದಿದೆ.

ಇದಕ್ಕೂ ಮೊದಲು ಭಾರತ ಮೊದಲ ಮತ್ತು ಎರಡನೇ ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ 1304 ಮತ್ತು 864 ಅಂಕಗಳನ್ನು ಗಳಿಸಿತ್ತು.

ಪೋಲಿಷ್ ತಂಡವು ಅನೆಟಾ ಸ್ಟ್ಯಾಂಕಿವಿಕ್ಜ್, ಅಲೆಕ್ಸಂಡ್ರಾ ಸುಟ್ಕೊ ಮತ್ತು ನಟಾಲಿಯಾ ಕೊಚನ್ಸ್ಕಾ ಅವರನ್ನು ಒಳಗೊಂಡಿತ್ತು.

ಈ ಬೆಳ್ಳಿ ಪದಕದೊಂದಿಗೆ ಭಾರತ 9 ಚಿನ್ನ, ಆರು ಬೆಳ್ಳಿ ಮತ್ತು ಐದು ಕಂಚಿನ ಪದಕಗಳು ಸೇರಿ ಒಟ್ಟು 20 ಪದಕಗಳನ್ನು ಗಳಿಸಿದೆ.

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp