ಆರ್ಲಿಯನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ: ಸೆಮಿಫೈನಲ್‌ಗೆ ಸೈನಾ ನೆಹ್ವಾಲ್‌, ಟೂರ್ನಿಯಿಂದ ಹೊರಬಿದ್ದ ಕಿಡಾಂಬಿ ಶ್ರೀಕಾಂತ್

ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಆರ್ಲಿಯನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್‌ ಸೆಮಿಫೈನಲ್‌ಗೇರಿದ್ದು, ಕಿಡಾಂಬಿ ಶ್ರೀಕಾಂತ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

Published: 26th March 2021 11:06 PM  |   Last Updated: 26th March 2021 11:06 PM   |  A+A-


Saina-Nehwal

ಸೈನಾ ನೆಹ್ವಾಲ್

Posted By : Srinivasamurthy VN
Source : PTI

ಪ್ಯಾರಿಸ್‌: ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಆರ್ಲಿಯನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್‌ ಸೆಮಿಫೈನಲ್‌ಗೇರಿದ್ದು, ಕಿಡಾಂಬಿ ಶ್ರೀಕಾಂತ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಶುಕ್ರವಾರ ನಡೆದ  ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೈನಾ ನೆಹ್ವಾಲ್ ಅಮೆರಿಕದ ಐರಿಸ್ ವಾಂಗ್ ಅವರನ್ನು  21-19, 17-21, 21-19 ನೇರ ಸೆಟ್ ಗಳಿಂದ ಮಣಿಸಿದರು. ಆ ಮೂಲಕ ಸೈನಾ ನೆಹ್ವಾಲ್ ಆರ್ಲಿಯನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ. 

ವಿಶ್ವ ಕ್ರಮಾಂಕದಲ್ಲಿ 20ನೇ ಸ್ಥಾನದಲ್ಲಿರುವ ಸೈನಾ, ಎರಡು ವರ್ಷಗಳ ಬಳಿಕ ಟೂರ್ನಿಯೊಂದರ ಸೆಮಿಫೈನಲ್ ಪ್ರವೇಶಿಸಿದ್ದಾರೆ. 2019ರ ಜನವರಿಯಲ್ಲಿ ಇಂಡೊನೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಅವರು ಪ್ರಶಸ್ತಿ ಜಯಿಸಿದ್ದರು. ಸೈನಾ ಮುಂದಿನ ಸೆಮಿ ಪೈನಲ್ ಪಂದ್ಯದಲ್ಲಿ, ಡೆನ್ಮಾರ್ಕ್‌ನ ಲಿನ್ ಕ್ರಿಸ್ಟೊಪರ್ಸನ್ ಹಾಗೂ ಭಾರತದ ಇರಾ ಶರ್ಮಾ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ಮತ್ತೊಂದು ಪಂದ್ಯದಲ್ಲಿ ಪುರುಷರ ವಿಭಾಗದ ಸಿಂಗಲ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಭಾರತದ ಕಿಡಾಂಬಿ ಶ್ರೀಕಾಂತ್ ಫ್ರಾನ್ಸ್ ನ ತೋಮಾ ಜೂನಿಯರ್ ಪೊಪೋವ್ ವಿರುದ್ಧ 19-21 17-21 ನೇರ ಸೆಟ್ ಗಳ ಅಂತರದಲ್ಲಿ ಸೋತು ಟೂರ್ನಿಯಿಂದ ಹೊರ ಬಿದ್ದಿದ್ದಾರೆ. 

ಅಂತೆಯೇ ಮಹಿಳಾ ಡಬಲ್ಸ್‌ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್‌.ಸಿಕ್ಕಿರೆಡ್ಡಿ ಜೋಡಿಯೂ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟರು. ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತೆ, ಕರ್ನಾಟಕದ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿರೆಡ್ಡಿ ಅವರು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 21–14, 21–18ರಿಂದ ಮೂರನೇ ಶ್ರೇಯಾಂಕದ, ಇಂಗ್ಲೆಂಡ್‌ನ ಕ್ಲೋ ಬಿರ್ಚ್‌ ಹಾಗೂ ಲಾರೆನ್ ಸ್ಮಿತ್ ಅವರನ್ನು ಪರಾಭವಗೊಳಿಸಿದರು. ಭಾರತದ ಜೋಡಿ ಇಲ್ಲಿ ಎಂಟನೇ ಶ್ರೇಯಾಂಕ ಪಡೆದಿದೆ. ಅಶ್ವಿನಿ ಹಾಗೂ ಸಿಕ್ಕಿ ಮುಂದಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಥಾಯ್ಲೆಂಡ್‌ನ ಜಾಂಗ್‌ಕೊಲ್ಪನ್‌ ಕಿತಿಥಾರಕುಲ್‌-ರವಿಂದಾ ಪ್ರಜೊಂಗ್ಜಾಯ್ ಅವರನ್ನು ಎದುರಿಸಲಿದ್ದಾರೆ.
 

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp