ಐಎಸ್‌ಎಸ್‌ಎಫ್ ವಿಶ್ವಕಪ್: ಭಾರತಕ್ಕೆ ಮತ್ತೆರಡು ಚಿನ್ನ, ರ್ಯಾಪಿಡ್ ಫೈರ್ ನಲ್ಲಿ ವಿಜಯವೀರ್ ಗೆ ಬೆಳ್ಳಿ

ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಆತಿಥೇಯ ಭಾರತ ಶುಕ್ರವಾರ ಮತ್ತೆ ಎರಡು ಚಿನ್ನದ ಪದಕ ಗಳಿಸಿದ ನಂತರ ತನ್ನ ಪದಕಗಳ ಸಂಖ್ಯೆಯನ್ನು 25ಕ್ಕೆ ಹೆಚ್ಚಿಸಿಕೊಂಡಿದೆ. ಇದರ ಪೈಕಿ 12 ಚಿನ್ನ, ಏಳು ಬೆಳ್ಳಿ ಮತ್ತು ಆರು ಕಂಚಿನ ಪದಕಗಳು ಸೇರಿದೆ.

Published: 27th March 2021 10:36 AM  |   Last Updated: 27th March 2021 10:36 AM   |  A+A-


ಐಎಸ್‌ಎಸ್‌ಎಫ್ ವಿಶ್ವಕಪ್: ಭಾರತಕ್ಕೆ ಮತ್ತೆರಡು ಚಿನ್ನ

Posted By : Raghavendra Adiga
Source : Online Desk

ನವದೆಹಲಿ: ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಆತಿಥೇಯ ಭಾರತ ಶುಕ್ರವಾರ ಮತ್ತೆ ಎರಡು ಚಿನ್ನದ ಪದಕ ಗಳಿಸಿದ ನಂತರ ತನ್ನ ಪದಕಗಳ ಸಂಖ್ಯೆಯನ್ನು 25ಕ್ಕೆ ಹೆಚ್ಚಿಸಿಕೊಂಡಿದೆ. ಇದರ ಪೈಕಿ 12 ಚಿನ್ನ, ಏಳು ಬೆಳ್ಳಿ ಮತ್ತು ಆರು ಕಂಚಿನ ಪದಕಗಳು ಸೇರಿದೆ.

ಕರ್ಣಿ ಸಿಂಗ್ ಶೂಟಿಂಗ್ ರೇಂಜ್ ನಲ್ಲಿ ತೇಜಸ್ವಿನಿ ಸಾವಂತ್ ಮತ್ತು ಸಂಜೀವ್ ರಜಪೂತ್ ಕೋಡಿ ಚಿನ್ನ ಗೆದ್ದ ನಂತರ ಚೈನ್ ಸಿಂಗ್, ಸ್ವಪ್ನಿಲ್ ಕುಸಲೆ ಮತ್ತು ನೀರಜ್ ಕುಮಾರ್ ಅವರನ್ನೊಳಗೊಂಡ ಪುರುಷರ 3ಪಿ ತಂಡ ಕೂಡ ಚಿನ್ನದ ಪದಕ ಸಾಧನೆ ಮಾಡಿದೆ.

ಇದೇ ದಿನ ಭಾರತ ಬೆಳ್ಳಿ ಮತ್ತು ಕಂಚಿನ ಪದಕವನ್ನು ಜಯಿಸಿದೆ.ಪುರುಷರ ರ್ಯಾಪಿಡ್ ಫೈರ್ ಪಿಸ್ತೂಲ್ ಈವೆಂಟ್‌ನಲ್ಲಿ ವಿಜಯವೀರ್ ಸಿಧು ಬೆಳ್ಳಿ ಪದಕ ಗಳಿಸಿಕೊಂಡರು. ಅಲ್ಲದೆ ಸುನಿಧಿ ಚೌಹಾನ್ ಮತ್ತು ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಜೊಡಿಯು ಮಿಶ್ರ 3 ಪಿ ಟೀಂ ನ ಕಂಚಿನ ಪದಕಕ್ಕೆ ಕೊರಳೊಡ್ಡಿತು.

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp