ಶೂಟಿಂಗ್ ವಿಶ್ವಕಪ್: ಪುರುಷ, ಮಹಿಳಾ ಟ್ರ್ಯಾಕ್ ಟೀಂಗೆ ಸ್ವರ್ಣ, ಅಗ್ರಸ್ಥಾನದೊಂದಿಗೆ ಅಭಿಯಾನ ಅಂತ್ಯಗೊಳಿಸಿದ ಭಾರತ

ಐಎಸ್‌ಎಸ್‌ಎಫ್ ವಿಶ್ವಕಪ್ ನಲ್ಲಿ ಭಾನುವಾರ ಭಾರತ ಅಗ್ರಶ್ರೇಣಿಯಲ್ಲಿ ತನ್ನ ಅಭಿಯಾನವನ್ನು ಮುಗಿಸಿದೆ. ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್ ನಲ್ಲಿ ಪುರುಷ ಹಾಗೂ ಮಹಿಳಾ ಟ್ರ್ಯಾಕ್ ಟೀಂ  ಚಿನ್ನ ಗೆದ್ದಿದೆ.

Published: 28th March 2021 08:23 PM  |   Last Updated: 28th March 2021 08:23 PM   |  A+A-


ಬಂಗಾರ ಪದಕ ಗೆದ್ದ ಮಹಿಳಾ ಹಾಗೂ ಪುರುಷರ ಟ್ರ್ಯಾಕ್ ಟೀಂ

Posted By : Raghavendra Adiga
Source : Online Desk

ನವದೆಹಲಿ: ಐಎಸ್‌ಎಸ್‌ಎಫ್ ವಿಶ್ವಕಪ್ ನಲ್ಲಿ ಭಾನುವಾರ ಭಾರತ ಅಗ್ರಶ್ರೇಣಿಯಲ್ಲಿ ತನ್ನ ಅಭಿಯಾನವನ್ನು ಮುಗಿಸಿದೆ. ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್ ನಲ್ಲಿ ಪುರುಷ ಹಾಗೂ ಮಹಿಳಾ ಟ್ರ್ಯಾಕ್ ಟೀಂ  ಚಿನ್ನ ಗೆದ್ದಿದೆ.

ಸ್ಪರ್ಧೆಯ ಕೊನೆಯ ದಿನದಂದು ಎರಡು ಚಿನ್ನದ ಪದಕ ಭಾರತಕ್ಕೆ ಒಲಿದು ಬಂದಿದೆ. ಭಾರತ 30 ಪದಕಗಳನ್ನು ಜಯಿಸಿದ್ದು ಅವುಗಳಲ್ಲಿ 15 ಚಿನ್ನ, ಒಂಬತ್ತು ಬೆಳ್ಳಿ ಮತ್ತು ಆರು ಕಂಚಿನ ಪದಕಗಳು ಸೇರಿದೆ.

ಶ್ರೇಯಾಸಿ ಸಿಂಗ್, ಮನೀಷಾ ಕೀರ್ ಮತ್ತು ರಾಜೇಶ್ವರಿ ಕುಮಾರಿ ಅವರನ್ನೊಳಗೊಂಡ ಮಹಿಳಾ ಟ್ರ್ಯಾಕ್ ಟೀಂಫೈನಲ್‌ನಲ್ಲಿ 6-0 ಅಂತರದಿಂದ ಕಝಕಿಸ್ಥಾನ ಟೀಂ ಅನ್ನು ಮಣಿಸಿದ್ದರೆ  ಕೈನಾನ್ ಚೆನೈ, ಪೃಥ್ವಿರಾಜ್ ತೊಂಡೈಮನ್ ಮತ್ತು ಲಕ್ಷೇ ಶಿಯೊರಾನ್ ಅವರನ್ನೊಳಗೊಂಡ ಪುರುಷತ ಟ್ರ್ಯಾಕ್ ಟೀಂ ಸ್ಲೊವಾಕಿಯಾವನ್ನು 6-4ರಿಂದ ಸೋಲಿಸಿ ಬಂಗಾರದ ಪದಕ ಜಯಿಸಿದೆ.

ಏತನ್ಮಧ್ಯೆ, ಭಾರತದ ಪುರುಷರ 25 ಮೀ. ರ್ಯಾಪಿಡ್ ಫೈರ್ ಪಿಸ್ತೂಲ್ ಟೀಂ ರಜತ ಪದಕ ಗಳಿಸಿಕೊಂಡಿದೆ.

ವಿಶ್ವಕಪ್ ನಡೆದ ಹತ್ತು ದಿನಗಳಲ್ಲಿ ಒಟ್ಟು 22 ದೇಶಗಳು ಪದಕಗಳನ್ನು ಗೆದ್ದವು. ಅದರಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದರೆ ಯುಎಸ್ ಎರಡನೇ ಸ್ಥಾನದಲ್ಲಿದೆ. ಪಂದ್ಯಾವಳಿಯಲ್ಲಿ 53 ದೇಶಗಳನ್ನು ಪ್ರತಿನಿಧಿಸುವ ಒಟ್ಟು 294 ಶೂಟರ್‌ಗಳು ಭಾಗವಹಿಸಿದ್ದರು, ಇದು ಕಳೆದ ವರ್ಷ ಕೊರೋನಾ ಪ್ರೇರಿತ ಲಾಕ್‌ಡೌನ್ ನಂತರ ದೇಶದಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಕ್ರೀಡಾಕೂಟವಾಗಿದೆ.

Stay up to date on all the latest ಕ್ರೀಡೆ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp