ಶೂಟಿಂಗ್ ವಿಶ್ವಕಪ್: ಮಹಿಳಾ ಟ್ರ್ಯಾಪ್ ಟೀಂಗೆ ಚಿನ್ನ, ಪುರುಷ 25 ಮೀ. ರ್ಯಾಪಿಡ್ ಫೈರ್ ಟೀಂಗೆ ರಜತ ಹಾರ
ನವದೆಹಲಿಯಲ್ಲಿನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವಕಪ್ನಲ್ಲಿ ಭಾರತದ ಶ್ರೇಯಾಸಿ ಸಿಂಗ್, ಮನೀಷಾ ಕೀರ್ ಮತ್ತು ರಾಜೇಶ್ವರಿ ಕುಮಾರಿ ಮಹಿಳೆಯರ ಟ್ರ್ಯಾಪ್ ತಂಡದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
Published: 28th March 2021 02:27 PM | Last Updated: 28th March 2021 02:27 PM | A+A A-

ಸಂಗ್ರಹ ಚಿತ್ರ
ನವದೆಹಲಿ: ನವದೆಹಲಿಯಲ್ಲಿನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವಕಪ್ನಲ್ಲಿ ಭಾರತದ ಶ್ರೇಯಾಸಿ ಸಿಂಗ್, ಮನೀಷಾ ಕೀರ್ ಮತ್ತು ರಾಜೇಶ್ವರಿ ಕುಮಾರಿ ಮಹಿಳೆಯರ ಟ್ರ್ಯಾಪ್ ತಂಡ ಚಿನ್ನದ ಪದಕ ಗೆದ್ದಿದ್ದಾರೆ. ಫೈನಲ್ನಲ್ಲಿ ಭಾರತದ ಮಹಿಳಾ ತಂಡ 6-0 ಅಂಕಗಳಿಂದ ಕಝಕಿಸ್ಥಾನ ತಂಡವನ್ನು ಮಣಿಸಿದೆ.
ಐಎಸ್ಎಸ್ಎಫ್ ವಿಶ್ವಕಪ್ನಲ್ಲಿ ಭಾರತ ಪದಕಗಳ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದೆ ಮತ್ತು ಮಹಿಳಾ ಟ್ರ್ಯಾಪ್ ತಂಡದ ಚಿನ್ನವು ಆತಿಥೇಯರಿಗೆ 29ನೇ ಪದಕವಾಗಿದೆ.
ಇದಕ್ಕೆ ಮುನ್ನ ಐಎಸ್ಎಸ್ಎಫ್ ವಿಶ್ವಕಪ್ನಲ್ಲಿ 25 ಮೀ ರ್ಯಾಪಿಡ್ ಫೈರ್ ಪಿಸ್ತೂಲ್ ಟೀಂ ಸ್ಪರ್ಧೆಯಲ್ಲಿ ಭಾರತದ ವಿಜಯವೀರ್ ಸಿಧು, ಗುರ್ಪ್ರೀತ್ ಸಿಂಗ್ ಮತ್ತು ಆದರ್ಶ್ ಸಿಂಗ್ ಬೆಳ್ಳಿ ಪದಕ ಜಯಿಸಿದ್ದಾರೆ. ಇವರ ಎದುರಾಳಿಯಾಗಿದ್ದ ಯುಎಸ್ ಟೀಂ 10-2 ಅಂಕಗಳೊಂದಿಗೆ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ.