ಐಒಸಿಯ 'ಬಿಲೀವ್ ಇನ್ ಸ್ಪೋರ್ಟ್ಸ್' ಗೆ ಪಿವಿ ಸಿಂಧು, ಮಿಚೆಲ್ ಲಿ ರಾಯಭಾರಿಗಳಾಗಿ ಆಯ್ಕೆ

ವಿಶ್ವ ಚಾಂಪಿಯನ್ ಹಾಗೂ ಒಲಂಪಿಕ್ಸ್ ನಲ್ಲಿ ರಜತ ಪದಕ ವಿಜೇತೆ ಪಿ.ವಿ ಸಿಂಧು ಹಾಗೂ ವಿಶ್ವದ ನಂ.11 ಕೆನಡಾದ ಮಿಚೆಲ್ ಲಿ ಅವರನ್ನು ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿಯ ಬಿಲೀವ್ ಇನ್ ಸ್ಪೋರ್ಟ್ಸ್ ಅಭಿಯಾನದ ಅಥ್ಲೀಟ್ ರಾಯಭಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ. 
 ಪಿವಿ ಸಿಂಧು
 ಪಿವಿ ಸಿಂಧು

ನವದೆಹಲಿ: ವಿಶ್ವ ಚಾಂಪಿಯನ್ ಹಾಗೂ ಒಲಂಪಿಕ್ಸ್ ನಲ್ಲಿ ರಜತ ಪದಕ ವಿಜೇತೆ ಪಿ.ವಿ ಸಿಂಧು ಹಾಗೂ ವಿಶ್ವದ ನಂ.11 ಕೆನಡಾದ ಮಿಚೆಲ್ ಲಿ ಅವರನ್ನು ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿಯ ಬಿಲೀವ್ ಇನ್ ಸ್ಪೋರ್ಟ್ಸ್ ಅಭಿಯಾನದ ಅಥ್ಲೀಟ್ ರಾಯಭಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ. 

ಬ್ಯಾಡ್ಮಿಂಟನ್ ವಿಶ್ವ ಫೆಡರೇಷನ್ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಪ್ರಕಟಿಸಿದೆ. ಬಿಡಬ್ಲ್ಯುಎಫ್ ನ "ಐ ಆಮ್ ಬ್ಯಾಡ್ಮಿಂಟನ್" ಎಂಬ ಅಭಿಯಾನಕ್ಕೆ ಈ ಇಬ್ಬರೂ ಕಳೆದ ಏಪ್ರಿಲ್ ನಿಂದ ಜಾಗತಿಕ ರಾಯಭಾರಿಗಳಾಗಿದ್ದಾರೆ. 

"ಐಒಸಿಯಿಂದ ರಾಯಭಾರಿಗಳಾಗಿ ನಾಮನಿರ್ದೇಶನಗೊಂಡಿರುವುದು ಹೆಮ್ಮೆಯ ವಿಷಯ, ಸ್ಪರ್ಧೆಯಲ್ಲಿ ಮೋಸ ಅಥವಾ ನಕಾರಾತ್ಮಕ ತಂತ್ರಗಳನ್ನು ಅನುಸರಿಸುವುದರ ವಿರುದ್ಧ ನಾನು ನನ್ನ ಸಹ ಅಥ್ಲೀಟ್ ಗಳ ಜೊತೆಗೆ ನಿಲ್ಲುತ್ತೇನೆ ಎಂದು ಪಿ.ವಿ ಸಿಂಧು ಹೇಳಿದ್ದಾರೆ. 

ಸಿಂಧು ರಾಯಭಾರಿಯಾಗಿ ಆಯ್ಕೆಗೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಅಜಯ್ ಸಿಂಘಾನಿಯ "ಬ್ಯಾಡ್ಮಿಂಟನ್ ಕ್ರೀಡೆಯೆಡೆಗೆ ಸಿಂಧು ಅವರಿಗೆ ಇರುವ ಬದ್ಧತೆ, ಪ್ರಾಮಾಣಿಕತೆಯನ್ನು ಗುರುತಿಸಲಾಗಿದೆ" ಎಂದು ಹೇಳಿದ್ದಾರೆ. "ಸಿಂಧು ಅವರು ರಾಯಭಾರಿಯಾಗಿ ಆಯ್ಕೆಯಾಗಿರುವುದಕ್ಕೆ ಬಿಎಐ ಅತ್ಯಂತ ಸಂತೋಷಗೊಂಡಿದೆ" ಎಂದು ಅಜಯ್ ಸಿಂಘಾನಿಯ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com