ಇತರ ದೇಶಗಳ ಕೋವಿಡ್ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಬೇಡಿ: ಕ್ರೀಡಾಪಟುಗಳಿಗೆ ಕ್ರೀಡಾ ಸಚಿವ ಕಿರಣ್ ರಿಜಿಜು

ತರಬೇತಿ ಅಥವಾ ಸ್ಪರ್ಧೆಗಾಗಿ ಪ್ರಯಾಣಿಸುವಾಗ ವಿದೇಶಗಳ ಕೋವಿಡ್-19 ಪ್ರೋಟೋಕಾಲ್‌ಗಳನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸಬೇಡಿ ಎಂದು ಭಾರತೀಯ ಕ್ರೀಡಾಪಟುಗಳಿಗೆ ಕ್ರೀಡಾ ಸಚಿವ ಕಿರಣ್ ರಿಜಿಜು....
ಕಿರಣ್ ರಿಜಿಜು
ಕಿರಣ್ ರಿಜಿಜು

ನವದೆಹಲಿ: ತರಬೇತಿ ಅಥವಾ ಸ್ಪರ್ಧೆಗಾಗಿ ಪ್ರಯಾಣಿಸುವಾಗ ವಿದೇಶಗಳ ಕೋವಿಡ್-19 ಪ್ರೋಟೋಕಾಲ್‌ಗಳನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸಬೇಡಿ ಎಂದು ಭಾರತೀಯ ಕ್ರೀಡಾಪಟುಗಳಿಗೆ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.

ಕ್ರೊಯೇಷಿಯಾ ಒಲಿಂಪಿಕ್‌ಗೆ ತೆರಳುತ್ತಿರುವ ಶೂಟರ್‌ಗಳಿಗೆ ಶುಭ ಕೋರಿರುವ ಕಿರಣ್ ರಿಜಿಜು ಅವರು, "ಪ್ರಯಾಣ ಸುರಕ್ಷಿತವಾಗಿರಲಿ! ಇತರ ದೇಶಗಳ ಕೋವಿಡ್-19 ಪ್ರೋಟೋಕಾಲ್‌ಗಳನ್ನು ಎಂದಿಗೂ ಉಲ್ಲಂಘಿಸಬೇಡಿ. ತರಬೇತಿಯತ್ತ ಗಮನಹರಿಸಿ, ಕಾಳಜಿ ವಹಿಸಿ ಮತ್ತು ಸುರಕ್ಷಿತವಾಗಿರಿ. ನಮ್ಮ ಕ್ರೀಡಾಪಟುಗಳು ಮತ್ತು ತರಬೇತುದಾರರಿಗೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡಲಾಗುವುದು. ಆಲ್ ದಿ ಬೆಸ್ಟ್" ಎಂದು ಕೇಂದ್ರ ಸಚಿವ ಟ್ವೀಟ್ ಮಾಡಿದ್ದಾರೆ.

ಎಎಫ್ ಸಿ ಕಪ್ ಪ್ಲೇ ಆಫ್ ಹಂತದ ಪಂದ್ಯ ಆಡಲು ಮಾಲ್ಡಿವ್ಸ್ ನ ಮಾಲಿಗೆ ತೆರಳಿದ್ದ ಬೆಂಗಳೂರು ಎಫ್ ಸಿ ತಂಡ ಕೋಡಿವ್ ನಿಯಮಾವಳಿಗಳನ್ನು ಪಾಲಿಸದ ಕಾರಣ ತಂಡದ ಆತಿಥ್ಯ ವಹಿಸಲು ಸಾಧ್ಯವಿಲ್ಲ ಎಂದು ಮಾಲ್ಡಿವ್ಸ್ ಕ್ರೀಡಾ ಸಚಿವರು ಹೇಳಿದ್ದರು. ಬೆಂಗಳೂರು ತಂಡ ಕ್ಷಮೆಯಾಚಿಸಬೇಕಾಗಿ ಬಂದ ನಂತರ ಕಿರಣ್ ರಿಜಿಜು ಈ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ಎಫ್ ಸಿ ತಂಡ ಇಬ್ಬರು ಆಟಗಾರರು ಮತ್ತು ತಂಡದ ಸಹಾಯಕ ಸಿಬ್ಬಂದಿ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿ ಮಾಲೆ ಬೀದಿಗಳಲ್ಲಿ ನಡೆದುಕೊಂಡು ಹೋಗುತ್ತಿರುವ ಚಿತ್ರ ತೆಗೆದ ನಂತರ ಮಾಲ್ಡೀವ್ಸ್ ಕ್ರೀಡಾ ಸಚಿವ ಅಹ್ಮದ್ ಮಹ್ಲೂಫ್ ಅವರು ದ್ವೀಪ ರಾಷ್ಟ್ರದಿಂದ ಹೊರಹೋಗುವಂತೆ ಬೆಂಗಳೂರು ತಂಡಕ್ಕೆ ಸೂಚಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com