ಟೋಕಿಯೋ ಒಲಿಂಪಿಕ್ಸ್ ರದ್ದುಪಡಿಸಿ: ಜಪಾನ್‍ ಸರ್ಕಾರಕ್ಕೆ ಅಧಿಕೃತ ಮಾಧ್ಯಮ ಪಾಲುದಾರ ಸಂಸ್ಥೆ ಒತ್ತಾಯ

ಒಲಿಂಪಿಕ್ಸ್ ಮತ್ತು ಪ್ಯಾರಲಂಪಿಕ್ಸ್‍ ಕ್ರೀಡಾಕೂಟಗಳನ್ನು ರದ್ದು ಪಡಿಸುವಂತೆ ಕ್ರೀಡಾಕೂಟಗಳ ಅಧಿಕೃತ ಮಾಧ್ಯಮ ಪಾಲುದಾರ ಸಂಸ್ಥೆಯಲ್ಲಿ ಒಂದಾದ ಜಪಾನ್‍ ದಿನಪತ್ರಿಕೆ ಆಶಿ ಶಿಮ್ ಬುಮ್‍ ಒತ್ತಾಯಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಾಸ್ಕೊ: ಮುಂದಿನ ಒಲಿಂಪಿಕ್ಸ್ ಮತ್ತು ಪ್ಯಾರಲಂಪಿಕ್ಸ್‍ ಕ್ರೀಡಾಕೂಟಗಳನ್ನು ರದ್ದು ಪಡಿಸುವಂತೆ ಒತ್ತಾಯಿಸಿರುವ ಕ್ರೀಡಾಕೂಟಗಳ ಅಧಿಕೃತ ಮಾಧ್ಯಮ ಪಾಲುದಾರ ಸಂಸ್ಥೆಯಲ್ಲಿ ಒಂದಾದ ಜಪಾನ್‍ ದಿನಪತ್ರಿಕೆ ಆಶಿ ಶಿಮ್ ಬುಮ್‍, ಕೋವಿಡ್ ಸಾಂಕ್ರಾಮಿಕ ಬೆದರಿಕೆಗಳ ನಡುವೆ ದೇಶದ ನಾಗರಿಕರ ಸುರಕ್ಷತೆ ಮತ್ತು ಆರೋಗ್ಯ ವ್ಯವಸ್ಥೆ ಮೇಲಿನ ಒತ್ತಡ ನಿವಾರಿಸಲು ಈ ಕ್ರಮ ಅತ್ಯಗತ್ಯವಾಗಿದೆ ಎಂದು ಪ್ರಧಾನಿ ಯೊಶಿಹಿದೆ ಸುಗಾ ಅವರರಿಗೆ ಪತ್ರ ಬರೆದಿದೆ.

ಒಲಿಂಪಿಕ್ಸ್ ರದ್ದುಪಡಿಸುವಂತೆ ದೇಶದ ಅನೇಕ ಸಮುದಾಯಗಳೂ ಒತ್ತಾಯಿಸಿವೆ. ಟೋಕಿಯೋ ಸೇರಿದಂತೆ ಜಪಾನ್‍ ನ ಅನೇಕ ದ್ವೀಪಗಳಲ್ಲಿ ಕೋವಿಡ್‍ ನ ತುರ್ತು ಪರಿಸ್ಥಿತಿ ಇರುವುದರಿಂದ ಕ್ರೀಡಾಕೂಟ ನಡೆಸುವುದು ಸೂಕ್ತವಲ್ಲ ಎಂದು ದೇಶದ ಎಲ್ಲ ವಲಯಗಳಿಂದ ಅಭಿಪ್ರಾಯ ವ್ಯಕ್ತವಾಗಿದೆ.

ಜಪಾನ್‍ ರಾಜಧಾನಿ ಟೋಕಿಯೋದಲ್ಲಿ ತುರ್ತು ಪರಿಸ್ಥಿತಿ ಇದ್ದರೂ ಒಲಿಂಪಿಕ್ಸ್ ನಡೆಯಲಿದೆ ಎಂದು ಕಳೆದ ವಾರ ಕ್ರೀಡಾಕೂಟದ ಸಮನ್ವಯ ಆಯೋಗದ ಅಧ್ಯಕ್ಷತೆ ವಹಿಸಿರುವ ಜಾನ್‍ ಕೋಟ್ಸ್ ಹೇಳಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com