ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಲಿರುವ ಸುಧೀರ್ ಸಕ್ಸೇನಾ

ಇಟಲಿಯಲ್ಲಿ ನಡೆಯಲಿರುವ ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ದೆಹಲಿಯ ಸುಧೀರ್ ಸಕ್ಸೇನಾ ಪ್ರತಿನಿಧಿಸಲಿದ್ದಾರೆ.
ಸುಧೀರ್ ಸಕ್ಸೇನಾ
ಸುಧೀರ್ ಸಕ್ಸೇನಾ

ನವದೆಹಲಿ: ಇಟಲಿಯಲ್ಲಿ ನಡೆಯಲಿರುವ ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ದೆಹಲಿಯ ಸುಧೀರ್ ಸಕ್ಸೇನಾ ಪ್ರತಿನಿಧಿಸಲಿದ್ದಾರೆ.

ಇಟಲಿಯ ವೆನಿಸ್ ನಲ್ಲಿ ಅಕ್ಟೋಬರ್ 15 ರಿಂದ 25 ರವರೆಗೆ ನಡೆಯಲಿರುವ ಈ ಸ್ಪರ್ಧೆಯಲ್ಲಿ ದೇಶದ ಒಟ್ಟು 30 ಬಾಕ್ಸರ್ ಗಳು ಭಾಗವಹಿಸಲಿದ್ದು, ಆಯಾ ತೂಕ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಇಂಡಿಯಾ ಕಿಕ್ ಬಾಕ್ಸಿಂಗ್ ಅಧ್ಯಕ್ಷ ಸಂತೋಷ್ ಅಗರ್ ವಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ ದೇಶದ ಎಲ್ಲಾ ಬಾಕ್ಸರ್ ಗಳನ್ನು ಅಭಿನಂದಿಸಿದ್ದಾರೆ.

ಅದೇ ಸಮಯದಲ್ಲಿ, ಸುಧೀರ್ ಪ್ರಾತಿನಿಧ್ಯದ ಜವಾಬ್ದಾರಿಯನ್ನು ಪಡೆದ ಕಾರಣ ಅವರ ಮನೆಯಲ್ಲಿ ಸಂತೋಷದ ವಾತಾವರಣವಿದೆ. ಸುಧೀರ್ ಅವರು ಖಂಡಿತವಾಗಿಯೂ ದೇಶಕ್ಕಾಗಿ ಚಿನ್ನದ ಪದಕ ತರುವ ವಿಶ್ವಾಸವಿದೆ” ಎಂದು ತಿಳಿಸಿದ್ದಾರೆ.

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮತ್ತು ಹಣಕಾಸಿನ ಕೊರತೆಯ ಹೊರತಾಗಿಯೂ ವಿವಿಧ ದೇಶಗಳ ಆಟಗಾರರೊಂದಿಗೆ ಹೋರಾಡುತ್ತಿರುವ ಸುಧೀರ್ ಇದುವರೆಗೆ ದೇಶಕ್ಕಾಗಿ ಒಂದು ಚಿನ್ನ, ಎರಡು ಬೆಳ್ಳಿ ಮತ್ತು ಎರಡು ಕಂಚು ಗೆದ್ದಿದ್ದಾರೆ.

12 ರಾಷ್ಟ್ರೀಯ ಪದಕಗಳು ಮತ್ತು 40 ಕ್ಕೂ ಹೆಚ್ಚು ರಾಜ್ಯ ಮಟ್ಟದ ಪದಕಗಳನ್ನು ಗೆದ್ದಿರುವ ಸುಧೀರ್ ಈಗಲೂ ಕ್ರೀಡೆಗಾಗಿ ಶ್ರಮಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com