ಟೋಕಿಯೊ ಪ್ಯಾರಾಲಿಂಪಿಕ್ಸ್: ಅರ್ಚರಿಯಲ್ಲಿ ಭಾರತಕ್ಕೆ ಮೊದಲ ಪದಕ, ಕಂಚು ಗೆದ್ದ ಹರ್ವಿಂದರ್ ಸಿಂಗ್
ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಅರ್ಚರಿಯಲ್ಲಿ ಭಾರತಕ್ಕೆ ಮೊದಲ ಪದಕ ಲಭಿಸಿದೆ. ಶುಕ್ರವಾರ ನಡೆದ ಪುರುಷರ ವೈಯಕ್ತಿಕ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ದಕ್ಷಿಣ ಕೊರಿಯಾದ ಕಿಮ್ ಮಿನ್ ಸು ವಿರುದ್ಧ ಗೆಲುವು ಸಾಧಿಸಿದ ಹರ್ವಿಂದರ್ ಸಿಂಗ್ ಕಂಚಿನ ಪದಕ ಗಳಿಸಿದರು.
Published: 03rd September 2021 08:05 PM | Last Updated: 03rd September 2021 09:52 PM | A+A A-

ಹರ್ವಿಂದರ್ ಸಿಂಗ್
ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಅರ್ಚರಿಯಲ್ಲಿ ಭಾರತಕ್ಕೆ ಮೊದಲ ಪದಕ ಲಭಿಸಿದೆ. ಶುಕ್ರವಾರ ನಡೆದ ಪುರುಷರ ವೈಯಕ್ತಿಕ ರಿಕರ್ವ್ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ದಕ್ಷಿಣ ಕೊರಿಯಾದ ಕಿಮ್ ಮಿನ್ ಸು ವಿರುದ್ಧ ಗೆಲುವು ಸಾಧಿಸಿದ ಹರ್ವಿಂದರ್ ಸಿಂಗ್ ಕಂಚಿನ ಪದಕ ಗಳಿಸಿದರು.
ಸೆಮಿ ಫೈನಲ್ ನಲ್ಲಿ ಅಮೆರಿಕದ ಕೆವಿನ್ ಮಥರ್ ಎದುರು 6-4 ಅಂತರದಿಂದ ಸೋತ ಸಿಂಗ್, ಕೊರಿಯಾದ ಕಿಮ್ ಮಿನ್ ಸು ವಿರುದ್ಧ 6-5 ಅಂತರದ ಗೆಲುವು ಸಾಧಿಸಿದರು.
ಸೆಮಿ ಫೈನಲ್ ನಲ್ಲಿ ಸಿಂಗ್ ಎದುರು ಗೆಲುವು ಸಾಧಿಸಿದ ಮಥರ್ ಫೈನಲ್ ನಲ್ಲಿ ಚೀನಾದ ಝಾವೋ ಎಲ್ ಎದುರು 6-4 ಅಂತರದಿಂದ ಗೆದ್ದು ಚಿನ್ನದ ಪದಕ ಗೆದ್ದರು. ವಿಶ್ವದ ನಂಬರ್ 23 ಶ್ರೇಯಾಂಕದ ಸಿಂಗ್ 2018ರಲ್ಲಿ ನಡೆದ ಏಷ್ಯಾನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದಿದ್ದರು.
ಪಾಟಿಯಾಲಾದ ಪಂಜಾಬ್ ವಿವಿಯ ಅರ್ಥಶಾಸ್ತ್ರದಲ್ಲಿ ಸ್ಕಾಲರ್ ಆಗಿರುವ ಸಿಂಗ್, ಮಧ್ಯಮ ಕುಟುಂಬದಿಂದ ಬಂದಿದ್ದಾರೆ.ಕೇವಲ ಒಂದೂವರೆ ವರ್ಷವಿದ್ದಾಗ ಡೆಂಘೀ ತಗುಲಿತ್ತು. ಆಗ ಸ್ಥಳೀಯ ವೈದ್ಯರು ವ್ಯತಿರಿಕ್ತವಾದ ಇಂಜೆಕ್ಷನ್ ನೀಡಿದ್ದರಿಂದ ಅವರು ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದಾರೆ.