ಟೋಕಿಯೊ ಪ್ಯಾರಾಲಿಂಪಿಕ್ಸ್: ಫೈನಲ್ ಗೆ ಪ್ರಮೋದ್ ಭಗತ್, ಸಿಂಗರಾಜ್, ಮನೀಶ್ ನರ್ವಾಲ್; ಭಾರತಕ್ಕೆ ಮತ್ತಷ್ಟು ಪದಕಗಳು ಖಚಿತ
ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತಷ್ಟು ಪದಕಗಳು ಲಭಿಸುವುದು ಖಚಿತವಾಗಿದ್ದು, ಇಂದು ಭಾರತದ ಮೂವರು ಸ್ಪರ್ಧಿಗಳು ಫೈನಲ್ ಗೇರಿದ್ದಾರೆ.
Published: 04th September 2021 08:34 AM | Last Updated: 04th September 2021 01:19 PM | A+A A-

ಪ್ರಮೋದ್ ಭಗತ್
ಟೋಕಿಯೊ: ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತಷ್ಟು ಪದಕಗಳು ಲಭಿಸುವುದು ಖಚಿತವಾಗಿದ್ದು, ಇಂದು ಭಾರತದ ಮೂವರು ಸ್ಪರ್ಧಿಗಳು ಫೈನಲ್ ಗೇರಿದ್ದಾರೆ.
ಭಾರತದ ಶಟ್ಲರ್ ಪ್ರಮೋದ್ ಭಗತ್, ಶೂಟಿಂಗ್ ವಿಭಾಗದಲ್ಲಿ ಸಿಂಗರಾಜ್ ಮತ್ತು ಮನೀಷ್ ನರ್ವಾಲ್ ಜೋಡಿ ಫೈನಲ್ ಗೇರಿದೆ. ಆ ಮೂಲಕ ಕ್ರೀಡಾಕೂಟದಲ್ಲಿ ಮತ್ತಷ್ಟು ಪದಕಗಳು ಭಾರತಕ್ಕೆ ಖಚಿತವಾಗಿದೆ.
And here's the deft chip that sealed Pramod Bhagat's place in the SL3 #Badminton final.#Paralympics
pic.twitter.com/3vnvslWqOz— Doordarshan Sports (@ddsportschannel) September 4, 2021
ಶನಿವಾರ ನಡೆದ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್ಎಲ್ 3 ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಪ್ರಮೋದ್ ಭಗತ್ ಜಪಾನ್ ನ ಡೈಸುಕೆ ಫುಜಿಹರಾ ಅವರನ್ನು 21-11, 21-16 ನೇರ ಸೆಟ್ ಗಳ ಅಂತರದಲ್ಲಿ ಮಣಿಸಿ ಫೈನಲ್ ಗೇರಿದರು. ಆರಂಭದಿಂದಲೂ ಆಕ್ರಮಣಕಾರಿ ಪ್ರದರ್ಶನ ನೀಡಿದ ಪ್ರಮೋದ್ ಭಗತ್ ಎದುರಾಳಿಗೆ ಯಾವುದೇ ರೀತಿಯ ಅವಕಾಶ ನೀಡದೇ ಎದುರಾಳಿ ಮೇಲೆ ಸವಾರಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಸೆಮೀಸ್ ನಲ್ಲಿ ಸೋತ ಮನೋಜ್ ಸರ್ಕಾರ್
ಮತ್ತೊಂದು ಪಂದ್ಯದಲ್ಲಿ ಸೆಮೀಫೈನಲ್ ಗೇರಿದ್ದ ಭಾರತದ ಮನೋಜ್ ಸರ್ಕಾರ್, ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ್ದು, ಇಂದು ಕಂಚಿನ ಪದಕಕ್ಕಾಗಿ ಹೋರಾಡಲಿದ್ದಾರೆ.
ಶೂಟಿಂಗ್ ನಲ್ಲಿದ ಪದಕ ಖಚಿತ
ಇನ್ನು ಶೂಟಿಂಗ್ ಪಿ4 50 ಮೀಟರ್ ಪಿಸ್ತೂಲ್ ಎಸ್ ಹೆಚ್ 1 ವಿಭಾಗದಲ್ಲಿ ಭಾರತದ ಸಿಂಗರಾಜ್ ಮತ್ತು ಮನೀಶ್ ನರ್ವಾಲ್ ಜೋಡಿ ಫೈನಲ್ ಪ್ರವೇಶ ಮಾಡಿದೆ. ಮನೀಶ್ 533-7x ಮತ್ತು ಸಿಂಗರಾಜ್ 536-4x ಅಂಕಗಳೊಂದಿಗೆ ಫೈನಲ್ ಗೇರಿದ್ದಾರೆ.