ಭಾರತದ ಕ್ರೀಡಾ ಇತಿಹಾಸದಲ್ಲಿಯೇ ಟೋಕಿಯೊ ಪ್ಯಾರಾಲಿಂಪಿಕ್ಸ್ ಗೆ ವಿಶೇಷ ಸ್ಥಾನ: ಪ್ರಧಾನಿ ಮೋದಿ
ಕ್ರೀಡಾಕೂಟದಲ್ಲಿ ಒಟ್ಟು 19 ಪದಕಗಳನ್ನು ಗೆದ್ದುಕೊಂಡ ಭಾರತ ಪದಕ ಪಟ್ಟಿಯಲ್ಲಿ 24ನೇ ಸ್ಥಾನ ಪಡೆದುಕೊಂಡ ಬೆನ್ನಲ್ಲೇ ಮೋದಿ ಕ್ರೀಡಾಕೂಟದಲ್ಲಿ ಪಾಲ್ಗೊಂದ ಕ್ರೀಡಾಪಟುಗಳನ್ನು ಶ್ಲಾಘಿಸಿದ್ದಾರೆ.
Published: 05th September 2021 08:12 PM | Last Updated: 06th September 2021 06:55 PM | A+A A-

ಪ್ರಧಾನಿ ನರೇಂದ್ರ ಮೋದಿ- ಸಂಗ್ರಹ ಚಿತ್ರ
ನವದೆಹಲಿ: ಭಾರತೀಯ ಕ್ರೀಡಾಪಟುಗಳು ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಅಪ್ರತಿಮ ಸಾಧನೆ ತೋರಿರುವುದನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಭಾರತದ ಕ್ರೀಡಾ ಇತಿಹಾಸದಲ್ಲಿಯೇ ಈ ಕ್ರೀಡಾಕೂಟ ವಿಶೇಷ ಸ್ಥಾನ ಪಡೆಯಲಿದೆ ಎಂಡು ಅವರು ಅಭಿಪ್ರಾಯ ಪಟ್ಟಿದ್ದಾರೆ. ಇದೇ ವೇಳೆ ಜಪಾನ್ ಸರ್ಕಾರದ ಆತಿಥ್ಯವನ್ನೂ ಮೋದಿ ಪ್ರಶಂಸಿಸಿದ್ದಾರೆ.
ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್ ಕ್ರೀಡಾಪಟುಗಳಿಗಾಗಿ ಪ್ರಧಾನಿ ಮೋದಿ ವಿಶೇಷ ಔತಣಕೂಟ: ಅನುರಾಗ್ ಠಾಕೂರ್
ಕ್ರೀಡಾಕೂಟದಲ್ಲಿ ಒಟ್ಟು 19 ಪದಕಗಳನ್ನು ಗೆದ್ದುಕೊಂಡ ಭಾರತ ಪದಕ ಪಟ್ಟಿಯಲ್ಲಿ 24ನೇ ಸ್ಥಾನ ಪಡೆದುಕೊಂಡ ಬೆನ್ನಲ್ಲೇ ಮೋದಿ ಕ್ರೀಡಾಕೂಟದಲ್ಲಿ ಪಾಲ್ಗೊಂದ ಕ್ರೀಡಾಪಟುಗಳನ್ನು ಶ್ಲಾಘಿಸಿದ್ದಾರೆ. ಇದುವರೆಗಿನ ಇತಿಹಾಸದಲ್ಲಿ ಪದಕ ಪಟ್ಟಿಯಲ್ಲಿ ಭಾರತ ಪಡೆದ ಅತ್ಯಧಿಕ ಸ್ಥಾನ ಇದಾಗಿದೆ.
ಇದನ್ನೂ ಓದಿ: ಟೋಕಿಯೊ ಪ್ಯಾರಾಲಿಂಪಿಕ್ಸ್: ಚಿನ್ನ, ಬೆಳ್ಳಿ ಪದಕ ಗೆದ್ದ ಮನೀಶ್ ನರ್ವಾಲ್, ಸಿಂಗರಾಜ್ ಗೆ ನಗದು ಬಹುಮಾನ ಘೋಷಿಸಿದ ಹರ್ಯಾಣ ಸರ್ಕಾರ
5 ಚಿನ್ನದ ಪದಕಗಳು, 8 ಬೆಳ್ಳಿ ಮತ್ತು 6 ಕಂಚು ಪದಕಗಳನ್ನು ಭಾರತ ಈ ಬಾರಿ ಗೆದ್ದುಕೊಂಡಿದೆ. ಕ್ರೀಡಾಪಟುಗಳ ತರಬೇತುದಾರರು ಹಾಗೂ ಅವರ ಕುಟುಂಬಸ್ಥರಿಗೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಟೋಕಿಯೊ ಪ್ಯಾರಾಲಿಂಪಿಕ್ಸ್: ಇತಿಹಾಸ ಬರೆದ ಭಾರತದ ಶೂಟರ್ ಗಳು, ಮನೀಶ್ ನರ್ವಾಲ್ ಗೆ ಚಿನ್ನ, ಸಿಂಗರಾಜ್ ಗೆ ಬೆಳ್ಳಿ ಪದಕ