ಐಪಿಎಲ್ 2022: ಮೂರು ವಿಕೆಟ್ ಗಳಿಂದ ಸಿಎಸ್ ಕೆ ಮಣಿಸಿ ಅಗ್ರಸ್ಥಾನಕ್ಕೇರಿದ ಗುಜರಾತ್ ಟೈಟನ್ಸ್!
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಪಿಎಲ್ 2022 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ ತಂಡ ಮೂರು ವಿಕೆಟ್ ಅಂತರದ ರೋಚಕ ಗೆಲುವು ಸಾಧಿಸಿದೆ.
Published: 18th April 2022 12:08 AM | Last Updated: 18th April 2022 01:28 PM | A+A A-

ಗುಜರಾತ್ ಟೈಟನ್ಸ್
ಮುಂಬೈ: ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಪಿಎಲ್ 2022 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ ತಂಡ ಮೂರು ವಿಕೆಟ್ ಅಂತರದ ರೋಚಕ ಗೆಲುವು ಸಾಧಿಸಿದೆ.
ಐಪಿಎಲ್ ನಲ್ಲಿ ಇದೇ ಮೊದಲ ಆಡುತ್ತಿರುವ ಗುಜರಾತ್ ಟೈಟನ್ಸ್, ಆಡಿರುವ ಆರು ಪಂದ್ಯಗಳಲ್ಲಿ ಐದು ಜಯದೊಂದಿಗೆ ಒಟ್ಟು 10 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿತು. ರುತುರಾಜ್ ಗಾಯಕ್ವಾಡ್ 43 ಎಸೆತಗಳಲ್ಲಿ 73 ರನ್ ಸಿಡಿಸಿದರೆ, ಅಂಬಾಟಿ ರಾಯುಡು 31 ಎಸೆತಗಳಲ್ಲಿ 46 ರನ್ ಗಳಿಸಿದರು. ಇನ್ನೂ ರವೀಂದ್ರ ಜಡೇಜಾ 12 ಎಸೆತಗಳಲ್ಲಿ 22 ರನ್ ಕಲೆಹಾಕಿದರು. ಗುಜರಾತ್ ಟೈಟನ್ಸ್ ಪರ ಅಲ್ವಾರಿ ಜೋಸೆಫ್ 2, ಮೊಹಮ್ಮದ್ ಶಮಿ ಹಾಗೂ ಯಶ್ ದಯಾಳ್ ತಲಾ ಒಂದು ವಿಕೆಟ್ ಪಡೆದರು.
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 169 ರನ್ ಗಳು ಗುರಿ ಬೆನ್ನತ್ತಿದ್ದ ಗುಜರಾತ್ ಟೈಟನ್ಸ್ 19.5 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 170 ರನ್ ಗಳಿಸುವುದರೊಂದಿಗೆ ಗೆಲುವಿನ ನಗೆ ಬೀರಿತು. ಗುಜರಾತ್ ಟೈಟನ್ಸ್ ಪರ ಡೇವಿಡ್ ಮಿಲ್ಲರ್ 51 ಎಸೆತಗಳಲ್ಲಿ 94 ರನ್ ಗಳಿಸಿದರೆ, ರಶೀದ್ ಖಾನ್ 40, ಅಭಿನವ್ ಮನೋಹರ್ 12 ರನ್ ಗಳಿಸಿದರು.
That feeling. THAT FEELING!pic.twitter.com/eWwKlb4xLU
— Gujarat Titans (@gujarat_titans) April 17, 2022
ಸಿಎಸ್ ಕೆ ಪರ ಡ್ವೇನ್ ಬ್ರಾವೋ 3 ವಿಕೆಟ್ ಪಡೆದರೆ, ಮಹೀಶ್ ತೀಕ್ಷಣ 2, ಮುಕೇಶ್ ಚೌಧರಿ 1 ವಿಕೆಟ್ ಪಡೆದರು.ಗುಜರಾತ್ ಟೈಟನ್ಸ್ ಪರ 94 ರನ್ ಗಳಿಸಿದ ಡೇವಿಡ್ ಮಿಲ್ಲರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.