ಖೇಲೋ ಇಂಡಿಯಾ ಯೂನಿರ್ವಸಿಟಿ ಗೇಮ್ಸ್; ಕ್ರೀಡಾಪಟುಗಳಿಗೆ ನೆರವಾಗುವ ಆ್ಯಪ್ ಬಿಡುಗಡೆ
ಏಪ್ರಿಲ್ 24 ರಿಂದ ಮೇ 3ರವರೆಗೆ ಬೆಂಗಳೂರಿನ ಐದು ಕ್ರೀಡಾಂಗಣಗಳಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಗಾಗಿ ಕರ್ನಾಟಕ ಸರ್ಕಾರ ಜೈನ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ '' ಖೇಲೋ ಇಂಡಿಯಾ ಯೂನಿ ಆ್ಯಪ್ ಸಿದ್ದಪಡಿಸಿದೆ.
Published: 20th April 2022 12:33 AM | Last Updated: 21st April 2022 01:06 PM | A+A A-

ಖೇಲೋ ಇಂಡಿಯಾ ವಿವಿ ಗೇಮ್ಸ್ ಗಾಗಿ ಅಭಿವೃದ್ಧಿಪಡಿಸಿರುವ ಆ್ಯಪ್
ಬೆಂಗಳೂರು: ಏಪ್ರಿಲ್ 24 ರಿಂದ ಮೇ 3ರವರೆಗೆ ಬೆಂಗಳೂರಿನ ಐದು ಕ್ರೀಡಾಂಗಣಗಳಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಗಾಗಿ ಕರ್ನಾಟಕ ಸರ್ಕಾರ ಜೈನ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ '' ಖೇಲೋ ಇಂಡಿಯಾ ಯೂನಿ ಆ್ಯಪ್ ಸಿದ್ದಪಡಿಸಿದೆ.
ಭಾರತದ ಕ್ರೀಡಾ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶೇಷ ತಂತ್ರಜ್ಞಾನದಿಂದ ವಿನ್ಯಾಸಗೊಳಿಸಿರುವ ಈ ಆ್ಯಪ್, ಪ್ಲೇ ಸ್ಟೋರ್ ಮತ್ತು ಗೂಗಲ್ ಪ್ಲೇಗಳಲ್ಲಿ ಲಭ್ಯವಿದ್ದು, ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು.
ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ವಿವಿಧ ವಿಶ್ವವಿದ್ಯಾಲಯಗಳು, ಕ್ರೀಡಾಪಟುಗಳು, ಕ್ರೀಡೆಗಳು, ಸಂಪೂರ್ಣ ವೇಳಾಪಟ್ಟಿ, ಕ್ರೀಡಾಪಟುಗಳ ವೈಯಕ್ತಿಕ ವೇಳಾಪಟ್ಟಿ, ಸ್ಕೋರ್ ಕಾರ್ಡ್, ವಸತಿ ವಿವರ, ಸಾರಿಗೆ ಸೌಲಭ್ಯ, ಆಹಾರ ಸೌಲಭ್ಯ, ಕ್ರೀಡಾಂಗಣ ನಕ್ಷೆ ಮೊದಲಾದ ಮಾಹಿತಿ ಲಭ್ಯವಿರುತ್ತದೆ.
ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಕ್ರೀಡಾಪಟುಗಳಿಗೆ ಒಂದೇ ಹಂತದಲ್ಲಿ ಎಲ್ಲ ಮಾಹಿತಿ ದೊರೆಯುವಂತೆ ಈ ಆ್ಯಪ್ ವಿನ್ಯಾಸಗೊಳಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ.