ಎಫ್‌ಐಎಚ್ ನೇಷನ್ಸ್ ಕಪ್: ಚೊಚ್ಚಲ ಟ್ರೋಫಿ ಗೆದ್ದ ಭಾರತ ಮಹಿಳಾ ಹಾಕಿ ತಂಡ
ವೆಲೆನ್ಸಿಯಾದಲ್ಲಿ ನಡೆದ ಎಫ್‌ಐಎಚ್ ಮಹಿಳಾ ನೇಷನ್ಸ್ ಕಪ್ 2022ರ ಫೈನಲ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ಸ್ಪೇನ್ ಅನ್ನು 1-0 ಗೋಲುಗಳಿಂದ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
Published: 18th December 2022 04:26 PM | Last Updated: 18th December 2022 04:26 PM | A+A A-

ಮಹಿಳಾ ಹಾಕಿ ತಂಡ
ವೆಲೆನ್ಸಿಯಾದಲ್ಲಿ ನಡೆದ ಎಫ್‌ಐಎಚ್ ಮಹಿಳಾ ನೇಷನ್ಸ್ ಕಪ್ 2022ರ ಫೈನಲ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ಸ್ಪೇನ್ ಅನ್ನು 1-0 ಗೋಲುಗಳಿಂದ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಈ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ಭಾರತ FIH ಮಹಿಳಾ ಹಾಕಿ ಪ್ರೊ ಲೀಗ್ 2023-24ಗೆ ಅರ್ಹತೆ ಪಡೆದಿದೆ. ಅಂತಿಮ ಪಂದ್ಯದಲ್ಲಿ ಭಾರತದ ಪರ ಗುರ್ಜಿತ್ ಕೌರ್ (6ನೇ ನಿಮಿಷದಲ್ಲಿ) ಏಕೈಕ ಗೋಲು ದಾಖಲಿಸಿದರು.
ಸವಿತಾ ಪುನಿಯಾ ನೇತೃತ್ವದ ಭಾರತ ಮಹಿಳಾ ತಂಡ ಫೈನಲ್ ಪಂದ್ಯದಲ್ಲಿ ಭರ್ಜರಿ ಆರಂಭ ಪಡೆದಿತ್ತು. ಪಂದ್ಯದ ಆರನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ತಂಡದ ಖಾತೆ ತೆರೆದರು.
ಪಂದ್ಯದ ಎರಡನೇ ಕ್ವಾರ್ಟರ್‌ನಲ್ಲೂ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ ಭಾರತದ ಆಟಗಾರರು ಪಂದ್ಯದ 18ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಗಳಿಸಿದರು. ಆದರೆ, ಈ ಬಾರಿ ಗುರ್ಜಿತ್ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ವಿಫಲರಾದರು. ಇದಾದ ಬಳಿಕ ಪಂದ್ಯದ 22ನೇ ನಿಮಿಷದಲ್ಲಿ ಸ್ಪೇನ್ ತಂಡ ಪ್ರತಿದಾಳಿ ನಡೆಸಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದರೂ ಭಾರತದ ಬಲಿಷ್ಠ ರಕ್ಷಣಾ ಪಡೆ ತಮ್ಮ ಅವಕಾಶವನ್ನು ವಿಫಲಗೊಳಿಸಿತು.
ದ್ವಿತೀಯಾರ್ಧದ ಆರಂಭದಲ್ಲಿ ಸ್ಪೇನ್ ಆಕ್ರಮಣಕಾರಿ ಆಟವಾಡಿತು ಆದರೆ ಭಾರತೀಯ ಮಹಿಳೆಯರ ವಿರುದ್ಧ ಈ ಶೈಲಿಯನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪಂದ್ಯದ 32ನೇ ನಿಮಿಷದಲ್ಲಿ ಟೀಂ ಇಂಡಿಯಾ ಮತ್ತೊಂದು ಪೆನಾಲ್ಟಿ ಗಳಿಸಿತು. ಆದರೆ ಈ ವೇಳೆ ಗುರ್ಜಿತ್ ಗೋಲು ಹೊಡೆಯುವಲ್ಲಿ ವಿಫಲರಾದರು.
ಎಫ್‌ಐಎಚ್ ಮಹಿಳಾ ನೇಷನ್ಸ್ ಕಪ್ 2022 ಗೆದ್ದ ಭಾರತೀಯ ಮಹಿಳಾ ಹಾಕಿ ತಂಡದ ಪ್ರತಿ ಆಟಗಾರನಿಗೆ ರೂ 2 ಲಕ್ಷ ಮತ್ತು ಪ್ರತಿ ಸಹಾಯಕ ಸಿಬ್ಬಂದಿಗೆ ರೂ 1 ಲಕ್ಷವನ್ನು ಹಾಕಿ ಇಂಡಿಯಾ ಘೋಷಿಸಿದೆ.
That winning feeling for @thehockeyindia
— International Hockey Federation (@FIH_Hockey) December 17, 2022
Inside India’s bench for those final seconds and then the on-pitch celebrations #Pitchside
Watch all the highlights on the @watchdothockey app pic.twitter.com/VQjWWTviTZ