2022ರ ಲಾರೆಸ್ ವರ್ಲ್ಡ್ ಬ್ರೇಕ್ಥ್ರೂ ಆಫ್ ದಿ ಇಯರ್ ಪ್ರಶಸ್ತಿಗೆ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಆಯ್ಕೆ
ಒಲಿಂಪಿಕ್ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದ ಭಾರತದ ಮೊದಲ ವಿಜೇತ ನೀರಜ್ ಚೋಪ್ರಾ, 2022ರ ಲಾರೆಸ್ ವರ್ಲ್ಡ್ ಬ್ರೇಕ್ಥ್ರೂ ಆಫ್ ದಿ ಇಯರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Published: 02nd February 2022 06:23 PM | Last Updated: 02nd February 2022 06:23 PM | A+A A-

ನೀರಜ್ ಚೋಪ್ರಾ
ಸೆವಿಲ್ಲೆ: ಒಲಿಂಪಿಕ್ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದ ಭಾರತದ ಮೊದಲ ವಿಜೇತ ನೀರಜ್ ಚೋಪ್ರಾ, 2022ರ ಲಾರೆಸ್ ವರ್ಲ್ಡ್ ಬ್ರೇಕ್ಥ್ರೂ ಆಫ್ ದಿ ಇಯರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಎಮ್ಮಾ ರಾಡುಕಾನು, ಡೇನಿಯಲ್ ಮೆಡ್ವೆಡೆವ್, ಪೆಡ್ರಿ, ಯುಲಿಮಾರ್ ರೋಜಾಸ್, ಅರಿಯಾರ್ನೆ ಟಿಟ್ಮಸ್, ನೀರಜ್ ಛೋಪ್ರಾ ಸೇರಿದಂತೆ ಆರು ಮಂದಿ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ಈ ಮೂಲಕ ಈ ಪ್ರಶಸ್ತಿಗೆ ಭಾಜನರಾದ ಭಾರತದ ಮೂರನೇ ಕ್ರೀಡಾಪಟು ಎಂಬ ಖ್ಯಾತಿಗೆ ನೀರಜ್ ಭಾಜನರಾಗಿದ್ದಾರೆ. 2019ರಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಮತ್ತು 2000-2020 ರ ಲಾರೆಸ್ ಸ್ಪೋರ್ಟಿಂಗ್ ಮೂಮೆಂಟ್ ಪ್ರಶಸ್ತಿಯನ್ನು ಗೆದ್ದ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ನಂತರ ಲಾರೆಸ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮೂರನೇ ಭಾರತೀಯ ಅಥ್ಲೀಟ್ ನೀರಜ್.
ವಿಶ್ವದ ಪ್ರಮುಖ ಕ್ರೀಡಾ ಪತ್ರಕರ್ತರು ಮತ್ತು ಪ್ರಸಾರಕರ 1,300 ಕ್ಕೂ ಹೆಚ್ಚು ಸಮಿತಿಯು ಈ ವರ್ಷದ ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಗೆ ಪ್ರತಿ ಏಳು ವಿಭಾಗಗಳಲ್ಲಿ ನಾಮನಿರ್ದೇಶಿತರನ್ನು ಆಯ್ಕೆ ಮಾಡಿದೆ. ಸಾರ್ವಕಾಲಿಕ 71 ಶ್ರೇಷ್ಠ ಕ್ರೀಡಾ ಸಾಧಕರನ್ನು ಒಳಗೊಂಡಿರುವ ವಿಶ್ವದ ಅಂತಿಮ ಕ್ರೀಡಾ ತೀರ್ಪುಗಾರರ ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅಕಾಡೆಮಿ ಮತದಾನ ಮಾಡಲಿದೆ. ತದ ನಂತರ ವಿಜೇತರನ್ನು ಏಪ್ರಿಲ್ನಲ್ಲಿ ವಿಜೇತರು ಯಾರು ಎಂಬುದನ್ನು ಬಹಿರಂಗಪಡಿಸಲಾಗುತ್ತದೆ.
ಟೋಕಿಯೊದಲ್ಲಿ ಪುರುಷರ ಜಾವೆಲಿನ್ ನಲ್ಲಿ ಚಿನ್ನದ ಪದಕ ಗೆದ್ದ ಚೋಪ್ರಾ, ವೈಯಕ್ತಿಕ ಒಲಿಂಪಿಕ್ಸ್ ಚಿನ್ನ ಗೆದ್ದ ಇಬ್ಬರು ಭಾರತೀಯರಲ್ಲಿ ಒಬ್ಬರಾದರು. 2008 ರಲ್ಲಿ ಏರ್ ರೈಫಲ್ನಲ್ಲಿ ಅಭಿನವ್ ಬಿಂದ್ರಾ ಚಿನ್ನ ಗೆದ್ದಿದ್ದರು.