ಫುಟ್ಬಾಲ್ ಪಂದ್ಯಗಳಿಗೆ ಕಂಠೀರವ ಕ್ರೀಡಾಂಗಣದ ಬಳಕೆ ಇಲ್ಲ: ಸಚಿವ ಡಾ. ಕೆ.ಸಿ. ನಾರಾಯಣಗೌಡ
ಕಂಠೀರವ ಕ್ರೀಡಾಂಗಣ ವಿಚಾರದಲ್ಲಿ ಜೆಎಸ್ ಡಬ್ಲ್ಯೂ ಮಾಲೀಕತ್ವದ ಬೆಂಗಳೂರು ಫುಟ್ಬಾಲ್ ಕ್ಲಬ್ ಮತ್ತು ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ನಡುವಣ ವಿವಾದವೇರ್ಪಟ್ಟಿದೆ. ಫುಟ್ಬಾಲ್ ಪಂದ್ಯಾವಳಿಗಳಿಗೆ ಕಂಠೀರವ ಕ್ರೀಡಾಂಗಣವನ್ನು ಬಳಸುವುದಿಲ್ಲ ಎಂದು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ತಿಳಿಸಿದ್ದಾರೆ.
Published: 25th February 2022 11:00 AM | Last Updated: 25th February 2022 12:56 PM | A+A A-

ಕಂಠೀರವ ಕ್ರೀಡಾಂಗಣ
ಬೆಂಗಳೂರು: ಕಂಠೀರವ ಕ್ರೀಡಾಂಗಣ ವಿಚಾರದಲ್ಲಿ ಜೆಎಸ್ ಡಬ್ಲ್ಯೂ ಮಾಲೀಕತ್ವದ ಬೆಂಗಳೂರು ಫುಟ್ಬಾಲ್ ಕ್ಲಬ್ ಮತ್ತು ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ನಡುವಣ ವಿವಾದವೇರ್ಪಟ್ಟಿದೆ.
ಫುಟ್ಬಾಲ್ ಪಂದ್ಯಾವಳಿಗಳಿಗೆ ಕಂಠೀರವ ಕ್ರೀಡಾಂಗಣವನ್ನು ಬಳಸುವುದಿಲ್ಲ ಎಂದು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ತಿಳಿಸಿದ್ದಾರೆ. ಇಂಡಿಯನ್ ಸೂಪರ್ ಲೀಗ್ ನ ಮುಂದಿನ ಆವೃತ್ತಿಗಾಗಿ ಮಾತುಕತೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಸಚಿವರು ಈ ರೀತಿಯ ಹೇಳಿಕೆ ನೀಡಿದ್ದಾರೆ.
ಸದ್ಯ ನಡೆಯುತ್ತಿರುವ ಒಂದು ಸೇರಿದಂತೆ ಕಳೆದ ಎರಡು ಆವೃತ್ತಿಗಳನ್ನು ಗೋವಾದಲ್ಲಿ ಬಯೋಬಬಲ್ ನಲ್ಲಿ ನಡೆಸಲಾಗಿತ್ತು. ಸಚಿವರ ಹೇಳಿಕೆ ಬೆಂಗಳೂರಿನಲ್ಲಿ ಪಂದ್ಯ ನಡೆಯುವ ಬಗ್ಗೆ ಅನುಮಾನ ಹುಟ್ಟಿಸಿದೆ. ಆದರೆ, ಗೌಡ ಅವರ ಹೇಳಿಕೆ ಬಗ್ಗೆ ಏನೂ ಗೊತ್ತಿಲ್ಲ ಎಂದು ಕ್ಲಬ್ ಸಿಇಒ ಮಂದರ್ ತಮ್ಹಾನೆ ಹೇಳಿದ್ದಾರೆ
ಇದನ್ನೂ ಓದಿ: ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಹೊಸ ಸಿಂಥೆಟಿಕ್ ಟ್ರ್ಯಾಕ್, ಸಚಿವರಿಂದ ಪರಿಶೀಲನೆ
ಕಂಠೀರವ ಕ್ರೀಡಾಂಗಣ ರಾಜ್ಯ ಸರ್ಕಾರದ ಅಧೀನದಲ್ಲಿ ಬರುತ್ತದೆ. ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಥ್ಲೆಟಿಕ್ಸ್ ಗಳಿಗೆ ಸ್ಟೇಡಿಯಂನಲ್ಲಿ ತರಬೇತಿ ನೀಡಲಾಗುತ್ತದೆ. ಈ ಹಿಂದೆ ಬೆಂಗಳೂರು ತಂಡ ತವರೂ ನೆಲದಲ್ಲಿ ಆಡಿದ ಪಂದ್ಯಗಳಲ್ಲಿ ಖುಷಿ ನೀಡಿಲ್ಲ. ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೆಟಿಕ್ಸ್ ಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಕೆಎಎ ಕಾರ್ಯದರ್ಶಿ ರಾಜವೇಲು ಸ್ಪಷ್ಪಪಡಿಸಿದ್ದಾರೆ.
ಕ್ರೀಡಾಂಗಣವನ್ನು ಬಹು ಉದ್ದೇಶಕ್ಕೆ ಬಳಸಬಾರದು, ಫುಟ್ಬಾಲ್ ಆಡಬೇಕೆಂದರೆ ಫುಟ್ಬಾಲ್ ಸ್ಟೇಡಿಯಂಗೆ ಹೋಗಿ ಆಡಲಿ, ಕಂಠೀರವ ಕ್ರೀಡಾಂಗಣದಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೆಟಿಕ್ಸ್ ಗಳಿಗೆ ಆದ್ಯತೆ ನೀಡಬೇಕು, ಡಿವೈಇಎಸ್ ಅನುಮತಿ ಪಡೆದ ನಂತರ ಜೆಎಸ್ ಡಬ್ಲೂ ಪಂದ್ಯದ ದಿನ ಅದಕ್ಕೂ ಒಂದು ದಿನ ಮುಂಚೆ ಸ್ಟೇಡಿಯಂ ಬಳಸಿಕೊಳ್ಳಲಿ, ಆದರೆ ಇತರ ದಿನಗಳಲ್ಲಿ ನಿರ್ಬಂಧ ವಿಧಿಸಬೇಕು ಎಂದು ಅವರು ಹೇಳಿದ್ದಾರೆ.
ಫುಟ್ಬಾಲ್ ಗೆ ಅವಕಾಶ ನೀಡುವುದಿಲ್ಲ ಎಂದು ಅಥ್ಲೆಟಿಕ್ ಅಸೋಸಿಯೇಷನ್ ಕಳೆದ ವರ್ಷಕ್ಕೆ ಸರ್ಕಾರಕ್ಕೆ ಪತ್ರ ಬರೆದಿತ್ತು. ಆದರೆ, ಈ ವಿಚಾರವಾಗಿ ಅಂತಿಮ ನಿರ್ಧಾರ ಇನ್ನೂ ಹೊರಬಿದ್ದಿಲ್ಲ.