ಮನಕಲಕುವ ದೃಶ್ಯ: ಲೈವ್ ಮ್ಯಾಚ್ ನಲ್ಲಿ ಕಣ್ಣೀರಿಟ್ಟ ಉಕ್ರೇನ್ ಆಟಗಾರ; ಎದ್ದು ನಿಂತ ಅಭಿಮಾನಿಗಳು!
ರಷ್ಯಾ-ಉಕ್ರೇನ್ ಯುದ್ಧವು ಪ್ರಪಂಚದ ಪ್ರತಿಯೊಬ್ಬರನ್ನು ಕದಲಿಸುತ್ತಿದೆ. ತಮ್ಮ ಸ್ವಾರ್ಥಕ್ಕಾಗಿ ಹೋರಾಡುವ ಮೂಲಕ ಉಕ್ರೇನ್ನಲ್ಲಿ ಮುಗ್ಧ ಜನರಿಗೆ ಕಿರುಕುಳ ನೀಡುವ ರಷ್ಯಾದ ಧೋರಣೆಯು ಗಂಭೀರವಾಗಿ ದೋಷಿಸುತ್ತಿದ್ದಾರೆ.
Published: 28th February 2022 11:21 AM | Last Updated: 28th February 2022 01:15 PM | A+A A-

ಓಲೆಕ್ಸಾಂಡರ್ ಜಿಂಚೆಂಕೊ
ಉಕ್ರೇನ್: ರಷ್ಯಾ-ಉಕ್ರೇನ್ ಯುದ್ಧವು ಪ್ರಪಂಚದ ಪ್ರತಿಯೊಬ್ಬರನ್ನು ಕದಲಿಸುತ್ತಿದೆ. ತಮ್ಮ ಸ್ವಾರ್ಥಕ್ಕಾಗಿ ಹೋರಾಡುವ ಮೂಲಕ ಉಕ್ರೇನ್ನಲ್ಲಿ ಮುಗ್ಧ ಜನರಿಗೆ ಕಿರುಕುಳ ನೀಡುವ ರಷ್ಯಾದ ಧೋರಣೆಯು ಗಂಭೀರವಾಗಿ ದೋಷಿಸುತ್ತಿದ್ದಾರೆ. ಕ್ರೀಡಾಲೋಕವು ಕೂಡ ಉಕ್ರೇನ್ಗೆ ಬೆಂಬಲವಾಗಿ ನಿಂತಿದೆ ಮತ್ತು ಒಗ್ಗಟ್ಟನ್ನು ಪ್ರದರ್ಶಿಸಿದೆ.
ಪ್ರೀಮಿಯರ್ ಲೀಗ್ನ ಅಂಗವಾಗಿ ಶನಿವಾರ ಮ್ಯಾಂಚೆಸ್ಟರ್ ಸಿಟಿ ಮತ್ತು ಎವರ್ಟನ್ ನಡುವಿನ ಪಂದ್ಯ ಇತ್ತೀಚೆಗೆ ನಡೆಯಿತು. ಉಕ್ರೇನ್ನ ಓಲೆಕ್ಸಾಂಡರ್ ಜಿಂಚೆಂಕೊ ಮ್ಯಾಂಚೆಸ್ಟರ್ ಸಿಟಿಯನ್ನು ಪ್ರತಿನಿಧಿಸುತ್ತಿದ್ದಾರೆ. ಪಂದ್ಯದ ಮಧ್ಯೆ ತಮ್ಮ ದೇಶದ ಪರಿಸ್ಥಿತಿ ನೆನೆಸಿಕೊಂಡು ಡಿಫೆಂಡರ್ ಓಲೆಕ್ಸಾಂಡರ್ ಒಮ್ಮೆಲೇ ಭಾವುಕರಾದರು. ಪಂದ್ಯದ ನಡುವೆ ಒಲೆಕ್ಸಾಂಡರ್ ಕಣ್ಣೀರಿಟ್ಟ ಘಟನೆ ಮ್ಯಾಚ್ ವೀಕ್ಷಿಸಲು ಬಂದಿದ್ದ ಅಭಿಮಾನಿಗಳನ್ನು ಗದ್ಗದಿತರಾಗಿ ಮಾಡಿತು.
ಇದರೊಂದಿಗೆ ಉಭಯ ತಂಡಗಳ ಅಭಿಮಾನಿಗಳು ಆಟಗಾರನಿಗೆ ಸಾಂತ್ವನ ಹೇಳಿ ಒಗ್ಗಟ್ಟಿನಿಂದ ಎದ್ದು ನಿಂತು ಬೆಂಬಲ ವ್ಯಕ್ತಪಡಿಸಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪಂದ್ಯದ ಆರಂಭಕ್ಕೂ ಮುನ್ನ ಮ್ಯಾಂಚೆಸ್ಟರ್ ಸಿಟಿ ಆಟಗಾರರ ಉಕ್ರೇನ್ ಮೇಲಿನ ದಾಳಿಯನ್ನು ವಿರೋಧಿಸಿ ಅವರು ಉಕ್ರೇನಿಯನ್ ಧ್ವಜವನ್ನು ಮುದ್ರಿಸಿದ್ದ ತಮ್ಮ ಟೀ ಶರ್ಟ್ಗಳನ್ನ ಧರಿಸಿದ್ದರು ಜೊತೆಗೆ ಅದರೆ ಮೇಲೆ 'ನೋ ವಾರ್' ಬರೆದು ಒಗ್ಗಟ್ಟನ್ನು ವ್ಯಕ್ತಪಡಿಸಿದರು. ಮತ್ತೊಂದೆಡೆ ಎವರ್ಟನ್ ಆಟಗಾರರು ಉಕ್ರೇನ್ ಧ್ವಜವನ್ನು ಹೊದ್ದುಕೊಂಡು ಬೆಂಬಲಿಸಿದರು.
Heartbreaking to see Oleksandr Zinchenko in tears before kick-off as both teams show their support for Ukraine pic.twitter.com/bZYNyziMSh
— Football Daily (@footballdaily) February 26, 2022