ಫ್ರೆಂಚ್ ಕಪ್: ಮೆಸ್ಸಿ ಸೇರಿದಂತೆ ಪ್ಯಾರಿಸ್ ಸೆಂಟ್ ಜರ್ಮನಿ ತಂಡದ ನಾಲ್ವರಿಗೆ ಕೋವಿಡ್-19
ಫುಟ್ ಬಾಲ್ ದಿಗ್ಗಜ, ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ ಅವರಿಗೆ ಕೋವಿಡ್ -19 ಸೋಂಕು ದೃಢಪಟ್ಟಿದೆ. ಫ್ರೆಂಚ್ ಕಪ್ ನಲ್ಲಿ ಆಡುತ್ತಿರುವ ಫ್ಯಾರಿಸ್ ಈಗ ಪ್ಯಾರಿಸ್ ಸೆಂಟ್ ಜರ್ಮನ್ ತಂಡದ ಏಳು ಬಾರಿ ಬ್ಯಾಲನ್ ಡಿ ಓಆರ್ ಪ್ರಶಸ್ತಿ ಗಳಿಸಿರುವ ಲಿಯೊನೆಲ್ ಮೆಸ್ಸಿ ಸೇರಿದಂತೆ ನಾಲ್ವರು ಆಟಗಾರರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.
Published: 02nd January 2022 08:17 PM | Last Updated: 02nd January 2022 08:19 PM | A+A A-

ಲಿಯೊನೆಲ್ ಮೆಸ್ಸಿ
ಪ್ಯಾರಿಸ್: ಫುಟ್ ಬಾಲ್ ದಿಗ್ಗಜ, ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ ಅವರಿಗೆ ಕೋವಿಡ್ -19 ಸೋಂಕು ದೃಢಪಟ್ಟಿದೆ. ಫ್ರೆಂಚ್ ಕಪ್ ನಲ್ಲಿ ಆಡುತ್ತಿರುವ ಫ್ಯಾರಿಸ್ ಈಗ ಪ್ಯಾರಿಸ್ ಸೆಂಟ್ ಜರ್ಮನ್ ತಂಡದ ಏಳು ಬಾರಿ ಬ್ಯಾಲನ್ ಡಿ ಓಆರ್ ಪ್ರಶಸ್ತಿ ಗಳಿಸಿರುವ ಲಿಯೊನೆಲ್ ಮೆಸ್ಸಿ ಸೇರಿದಂತೆ ನಾಲ್ವರು ಆಟಗಾರರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.
ಭಾನುವಾರ ತಂಡದ ವೈದ್ಯಕೀಯ ಸುದ್ದಿಯಲ್ಲಿ ಮೆಸ್ಸಿ, ಯುವಾನ್ ಬರ್ನಾಟ್, ಹೆಚ್ಚುವರಿ ಗೋಲ್ ಕೀಪರ್ ಸೆರ್ಗಿಯೊ ರಿಕೊ ಮತ್ತು 19 ವರ್ಷದ ಮಿಡ್‌ಫೀಲ್ಡರ್ ನೇಥನ್ ಬಿಟುಮಜಲಾ ಅವರಿಗೆ ಸೋಂಕು ಕಾಣಿಸಿಕೊಂಡಿರುವುದಾಗಿ ಪ್ಯಾರಿಸ್ ಸೆಂಟ್ ಜರ್ಮನ್ ತಂಡ ತಿಳಿಸಿದೆ.
ಸೋಮವಾರ ನಡೆಯಲಿರುವ ಫ್ರೆಂಚ್ ಕಪ್ ನಲ್ಲಿ ಮೆಸ್ಸಿ ಆಡಲು ಸಾಧ್ಯವಿಲ್ಲ. ಮುಂದಿನ ಭಾನುವಾರ ನಡೆಯಲಿರುವ ಲೀಗ್-1 ಟೂರ್ನಿಯ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ.