ನೊವಾಕ್ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ ನಲ್ಲಿ ಆಡಲು ಫೆಡರಲ್ ಕೋರ್ಟ್ ಅನುಮತಿ
ಸೆರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ವೀಸಾವನ್ನು ರದ್ದುಪಡಿಸುವ ಆಸ್ಟ್ರೇಲಿಯಾ ಸರ್ಕಾರದ ನಿರ್ಧಾರವನ್ನು ಫೆಡರಲ್ ಕೋರ್ಟ್ ರದ್ದುಗೊಳಿಸಿದ್ದು, ಆಸ್ಟ್ರೇಲಿಯನ್ ಓಪನ್ ನಲ್ಲಿ ಆಡಲು ಅನುಮತಿ ನೀಡಿದೆ.
Published: 10th January 2022 02:08 PM | Last Updated: 10th January 2022 02:28 PM | A+A A-

ನೊವಾಕ್ ಜೊಕೊವಿಕ್
ಮೆಲ್ಬರ್ನ್: ಸೆರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ವೀಸಾವನ್ನು ರದ್ದುಪಡಿಸುವ ಆಸ್ಟ್ರೇಲಿಯಾ ಸರ್ಕಾರದ ನಿರ್ಧಾರವನ್ನು ಫೆಡರಲ್ ಕೋರ್ಟ್ ರದ್ದುಗೊಳಿಸಿದ್ದು, ಆಸ್ಟ್ರೇಲಿಯನ್ ಓಪನ್ ನಲ್ಲಿ ಆಡಲು ಅನುಮತಿ ನೀಡಿದೆ.
ಕೋವಿಡ್-19 ಸೋಂಕಿಗೆ ಒಳಗಾದ ಜನರಿಗೆ ವ್ಯಾಕ್ಸಿನೇಷನ್ ನಿಯಮಕ್ಕೆ ಆರು ತಿಂಗಳ ಕಾಲ ತಾತ್ಕಾಲಿಕ ವಿನಾಯಿತಿ ನೀಡಬಹುದು ಎಂದು ಕೋರ್ಟ್ ತೀರ್ಪು ನೀಡಿದೆ. ಇದರಿಂದ ಮುಂಬರುವ ಆಸ್ಟ್ರೇಲಿಯನ್ ಓಪನ್ ನಲ್ಲಿ ದಾಖಲೆಯ 21ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆಲ್ಲುವ ಹಾಲಿ ಚಾಂಪಿಯನ್ ಕನಸು ಮತ್ತೆ ಚಿಗುರಿದೆ.
ಇದನ್ನೂ ಓದಿ: ಕೊರೋನಾ ಪಾಸಿಟಿವ್ ಬಂದ 24 ಗಂಟೆಗಳಲ್ಲೇ ಬೆಲ್‍ಗ್ರೇಡ್ ಕಾರ್ಯಕ್ರಮದಲ್ಲಿ ನೊವಾಕ್ ಜೊಕೊವಿಕ್ ಭಾಗಿ
ಫೆಡರಲ್ ಸಕ್ರ್ಯೂಟ್ ಕೋರ್ಟ್ ನ್ಯಾಯಾಧೀಶ ಆಂಥೋನಿ ಕೆಲ್ಲಿ ಜೊಕೊವಿಕ್ ಅವರನ್ನು ತಕ್ಷಣವೇ ಹೋಟೆಲ್ ನಿಂದ ಬಿಡುಗಡೆ ಮಾಡಲು ಆದೇಶಿಸಿದರು. ಬುಧವಾರ ತಡವಾಗಿ ಮೆಲ್ಬೊರ್ನ್ ಗೆ ಆಗಮಿಸಿದ ಸ್ವಲ್ವ ಸಮಯದ ನಂತರ ಆಸ್ಟ್ರೇಲಿಯಾ ಸರ್ಕಾರ ಜೊಕೊವಿಕ್ ವೀಸಾವನ್ನು ರದ್ದುಗೊಳಿಸಿತ್ತು.
ಕೋವಿಡ್-19 ಲಸಿಕೆಗೆ ವಿನಾಯಿತಿ ನೀಡಿರುವ ವೈದ್ಯಕೀಯ ಪುರಾವೆಗಳು ಸಲ್ಲಿಸಿಲ್ಲ ಎಂದು ಜೊಕೊವಿಕ್ ಅವರನ್ನು ಬಂಧನದಲ್ಲಿ ಇರಿಸಲಾಗಿತ್ತು. ಇದನ್ನು ವಿರೋಧಿಸಿ ಫೆಡರಲ್ ಕೋರ್ಟ್ ಮೆಟ್ಟಿಲೇರಿದ ಜೊಕೊವಿಕ್, ಕಳೆದ ತಿಂಗಳು ಕೊರೋನಾವೈರಸ್ ಸೋಂಕಿಗೆ ಒಳಗಾಗಿದ್ದ ಕಾರಣಕ್ಕೆ ಲಸಿಕೆ ಹಾಕಿಸಿಲ್ಲ ಎಂದು ವಾದಿಸಿದರು.