ನೊವಾಕ್ ಜೊಕೊವಿಕ್ ವೀಸಾ ರದ್ದು; ಆಸ್ಟ್ರೇಲಿಯ ಓಪನ್‍ನಲ್ಲಿ ಆಡುವುದು ಅನುಮಾನ
ವಿಶ್ವದ ನಂಬರ್ ಒನ್ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ವೀಸಾವನ್ನು ಆಸ್ಟ್ರೇಲಿಯಾ ರದ್ದುಗೊಳಿಸಿದ್ದು, ಆಸ್ಟ್ರೇಲಿಯನ್ ಓಪನ್‍ನಲ್ಲಿ ಭಾಗವಹಿಸುವುದು ಅನುಮಾನವಾಗಿದೆ.ನೊವಾಕ್ ಜೊಕೊವಿಕ್ ವೀಸಾವನ್ನು ಆಸ್ಟ್ರೇಲಿಯಾದ ವಲಸೆ ಸಚಿವ ಅಲೆಕ್ಸ್ ಹಾಕ್ಸ್ ಅವರು ರದ್ದುಗೊಳಿಸಿದ್ದಾರೆ.
Published: 14th January 2022 03:00 PM | Last Updated: 14th January 2022 04:10 PM | A+A A-

ನೊವಾಕ್ ಜೊಕೊವಿಕ್
ಮೆಲ್ಬೋರ್ನ್: ವಿಶ್ವದ ನಂಬರ್ ಒನ್ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ವೀಸಾವನ್ನು ಆಸ್ಟ್ರೇಲಿಯಾ ರದ್ದುಗೊಳಿಸಿದ್ದು, ಆಸ್ಟ್ರೇಲಿಯನ್ ಓಪನ್‍ನಲ್ಲಿ ಭಾಗವಹಿಸುವುದು ಅನುಮಾನವಾಗಿದೆ. ನೊವಾಕ್ ಜೊಕೊವಿಕ್ ವೀಸಾವನ್ನು ಆಸ್ಟ್ರೇಲಿಯಾದ ವಲಸೆ ಸಚಿವ ಅಲೆಕ್ಸ್ ಹಾಕ್ಸ್ ಅವರು ರದ್ದುಗೊಳಿಸಿದ್ದಾರೆ.
ಸೋಮವಾರ (ಜನವರಿ 17) ಪ್ರಾರಂಭವಾಗುವ ವರ್ಷದ ಮೊದಲ ಗ್ರ್ಯಾಂಡ್ ಸ್ಲಾಮ್‍ನಲ್ಲಿ ಭಾಗವಹಿಸುವ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ‘ಆರೋಗ್ಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ಆಧಾರದ ಮೇಲೆ ವೀಸಾವನ್ನು ರದ್ದುಗೊಳಿಸಿದ್ದೇನೆ’ ಎಂದು ವಲಸೆ ಸಚಿವ ಅಲೆಕ್ಸ್ ಹಾಕ್ ಟ್ವಿಟರ್ ನಲ್ಲಿ ಹೇಳಿದ್ದಾರೆ.
Alex Hawke, the Australian Minister for Immigration, has cancelled @DjokerNole's Australian visa "on the basis that it was in the public interest to do so"@AustralianOpen @tapasjournalist pic.twitter.com/Q5fOg8QVoq
— DD News (@DDNewslive) January 14, 2022
ವಿಶ್ವ ನಂ. 1 ಟೆನಿಸ್ ತಾರೆಯ ಕಾನೂನು ತಂಡವು ಆಸ್ಟ್ರೇಲಿಯನ್ ಓಪನ್‍ನಲ್ಲಿ ಉಳಿಯಲು ಮತ್ತು ಆಡಲು ಅವಕಾಶ ನೀಡುವ ಪ್ರಯತ್ನದಲ್ಲಿ ಸಚಿವರ ನಿರ್ಧಾರದ ವಿರುದ್ಧ ತಡೆಯಾಜ್ಞೆ ಸಲ್ಲಿಸಲು ಉದ್ದೇಶಿಸಿದೆ.
ಸರ್ಕಾರದ ನಡೆಯಿಂದಾಗಿ ಜೊಕೊವಿಕ್ ಹೊಸ ವೀಸಾವನ್ನು ಪಡೆಯಲು ಮೂರು ವರ್ಷಗಳ ಕಾಲ ಕಾಯಬೇಕಾಗುತ್ತದೆ. ಅಂದರೆ ಮೂರು ವರ್ಷಗಳ ಕಾಲ ನಿಷೇಧ ಹೇರಲಾಗುತ್ತದೆ. ಜನವರಿ 6 ರಂದು ಮೆಲ್ಬೋರ್ನ್‍ಗೆ ಆಗಮಿಸಿದ ಸ್ವಲ್ಪ ಸಮಯದ ನಂತರ ಜೊಕೊವಿಕ್ ವೀಸಾವನ್ನು ಆಸ್ಟ್ರೇಲಿಯನ್ ಗಡಿ ಫೋರ್ಸ್ ಅಧಿಕಾರಿಗಳು ತಡೆಹಿಡಿದರು. ಲಸಿಕೆ ವಿನಾಯಿತಿ ಪಡೆಯಲು ಸೂಕ್ತ ಸಾಕ್ಷ್ಯವನ್ನು ಒದಗಿಸಲು ವಿಫಲರಾಗಿದ್ದಾರೆ’ ಎಂದು ಕಾರಣ ತಿಳಿಸಿದರು.
ಕೋವಿಡ್‍ಗೆ ಒಳಪಟ್ಟ ಕಾರಣ ಲಸಿಕೆ ಪಡೆದುಕೊಂಡಿರಲಿಲ್ಲ ಎಂದು ವೈದ್ಯಕಿಯ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ನಂತರ ಜೊಕೊವಿಕ್ ಅನ್ನು ಇರಿಸಿದ್ದ ಸ್ಥಳದಿಂದ ಕಳುಹಿಸಿಕೊಡಲಾಗಿತ್ತು.