ಲಸಿಕೆ ಪಡೆಯದಿದ್ದರೆ ಫ್ರೆಂಚ್ ಓಪನ್ ನಿಂದಲೂ ಜೊಕೊವಿಕ್ ಗೆ ನಿರ್ಬಂಧ: ಫ್ರಾನ್ಸ್
ಫ್ರಾನ್ಸ್ ನ ನೂತನ ಲಸಿಕೆ ಪಾಸ್ ಕಾನೂನಿನಿಂದ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ಫ್ರಾನ್ಸ್ ಕ್ರೀಡಾ ಸಚಿವಾಲಯ ಸೋಮವಾರ ಹೇಳಿದ ನಂತರ ನೊವಾಕ್ ಜೊಕೊವಿಕ್ ಫ್ರೆಂಚ್ ಓಪನ್‌ನಿಂದಲೂ ನಿರ್ಬಂಧಿಸುವ ಸಾಧ್ಯತೆಯಿದೆ.
Published: 17th January 2022 07:46 PM | Last Updated: 18th January 2022 12:55 PM | A+A A-

ನೊವಾಕ್ ಜೊಕೊವಿಕ್
ಪ್ಯಾರಿಸ್: ಫ್ರಾನ್ಸ್ ನ ನೂತನ ಲಸಿಕೆ ಪಾಸ್ ಕಾನೂನಿನಿಂದ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ಫ್ರಾನ್ಸ್ ಕ್ರೀಡಾ ಸಚಿವಾಲಯ ಸೋಮವಾರ ಹೇಳಿದ ನಂತರ ನೊವಾಕ್ ಜೊಕೊವಿಕ್ ಫ್ರೆಂಚ್ ಓಪನ್‌ನಿಂದಲೂ ನಿರ್ಬಂಧಿಸುವ ಸಾಧ್ಯತೆಯಿದೆ.
ಕೋವಿಡ್ -19 ವಿರುದ್ಧದ ಲಸಿಕೆ ಹಾಕಿಸಿಕೊಳ್ಳದ ವಿಶ್ವದ ನಂಬರ್ ಒನ್ ಜೊಕೊವಿಕ್, ವೀಸಾ ರದ್ದತಿ ಕೇಸ್ ನ್ನು ಫೆಡರಲ್ ನ್ಯಾಯಾಲಯ ರದ್ದುಗೊಳಿಸಿದ ನಂತರ ವರ್ಷದ ಮೊದಲ ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಯ ಮುನ್ನವೇ ಭಾನುವಾರ ಆಸ್ಟ್ರೇಲಿಯಾದಿಂದ ಅವರನ್ನು ಗಡಿಪಾರು ಮಾಡಿತ್ತು.
ಇದನ್ನೂ ಓದಿ: ಲಸಿಕೆ ಪಡೆಯದ ಜೊಕೊವಿಕ್ ಗೆ ಆಸ್ಟ್ರೇಲಿಯಾದಿಂದ ಗಡಿಪಾರು: ದುಬೈಗೆ ಬಂದಿಳಿದ ಟೆನಿಸ್ ತಾರೆ!
ರೆಸ್ಟೋರೆಂಟ್, ಕೆಫೆ, ಸಿನಿಮಾ ಮತ್ತು ದೂರ ಪ್ರಯಾಣದ ರೈಲು ಸಂಚಾರಕ್ಕಾಗಿ ಲಸಿಕೆ ಪ್ರಮಾಣ ಪತ್ರ ಜನರಿಗೆ ಅಗತ್ಯ ಎಂದು ಫ್ರಾನ್ಸ್ ಲಸಿಕಾ ಪಾಸ್ ಕಾನೂನನ್ನು ಫ್ರಾನ್ಸ್ ಸಂಸತ್ ಭಾನುವಾರ ಅಂಗೀಕರಿಸಿತ್ತು. ನಿಯಮ ಸರಳವಾಗಿದೆ. ಶೀಘ್ರದಲ್ಲಿಯೇ ಕಾನೂನು ರಚಿಸಿ, ಲಸಿಕಾ ಪಾಸ್ ತಕ್ಷಣ ಲಸಿಕೆ ಪಾಸ್ ಹೇರಲಾಗುವುದು ಎಂದು ಫ್ರಾನ್ಸ್ ಕ್ರೀಡಾ ಸಚಿವಾಲಯ ತಿಳಿಸಿದೆ.
ಇದು ಎಲ್ಲಾ ಕ್ರೀಡಾಪಟುಗಳು ಅಥವಾ ಪ್ರೇಕ್ಷಕರಿಗೂ ಅನ್ವಯವಾಗಲಿದೆ. ಇದು ಮುಂದಿನ ಆದೇಶದವರೆಗೂ ಜಾರಿಯಲ್ಲಿರುತ್ತದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.