ಲಸಿಕೆ ಪಡೆಯದ ಜೊಕೊವಿಕ್ ಗೆ ಆಸ್ಟ್ರೇಲಿಯಾದಿಂದ ಗಡಿಪಾರು: ದುಬೈಗೆ ಬಂದಿಳಿದ ಟೆನಿಸ್ ತಾರೆ!
ಆಸ್ಟ್ರೇಲಿಯಾ ಗಡಿಪಾರು ಮಾಡಿದ ಬಳಿಕ ನೊವಾಕ್ ಜೊಕೊವಿಕ್ ದುಬೈಗೆ ಬಂದಿಳಿದಿದ್ದಾರೆ. ಆಸ್ಟ್ರೇಲಿಯಾ ಫೆಡರಲ್ ನ್ಯಾಯಾಲಯವು ಪಬ್ಲಿಕ್ ಗ್ರೌಂಡ್ಸ್ ಆಧಾರದ ಮೇಲೆ ಟೆನಿಸ್ ತಾರೆ ಜೊಕೊವಿಕ್ ವೀಸಾ ರದ್ದುಗೊಳಿಸಿರುವುದನ್ನು ಸರ್ವಾನುಮತದಿಂದ ಎತ್ತಿಹಿಡಿದಿತ್ತು.
Published: 17th January 2022 12:24 PM | Last Updated: 17th January 2022 01:16 PM | A+A A-

ನೊವಾಕ್ ಜೊಕೊವಿಕ್
ದುಬೈ: ಆಸ್ಟ್ರೇಲಿಯಾ ಗಡಿಪಾರು ಮಾಡಿದ ಬಳಿಕ ನೊವಾಕ್ ಜೊಕೊವಿಕ್ ದುಬೈಗೆ ಬಂದಿಳಿದಿದ್ದಾರೆ. ಆಸ್ಟ್ರೇಲಿಯಾ ಫೆಡರಲ್ ನ್ಯಾಯಾಲಯವು ಪಬ್ಲಿಕ್ ಗ್ರೌಂಡ್ಸ್ ಆಧಾರದ ಮೇಲೆ ಟೆನಿಸ್ ತಾರೆ ಜೊಕೊವಿಕ್ ವೀಸಾ ರದ್ದುಗೊಳಿಸಿರುವುದನ್ನು ಸರ್ವಾನುಮತದಿಂದ ಎತ್ತಿಹಿಡಿದಿತ್ತು. ಕೋರ್ಟ್ ತೀರ್ಪಿನ ಬಳಿಕ ಜೊಕೊವಿಕ್ ತಾನು ಅತ್ಯಂತ ನಿರಾಶೆಗೊಂಡಿದ್ದೇನೆ ಎಂದು ಹೇಳಿದ್ದರು.
ಅತ್ತ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯನ್ ಓಪನ್ ನಡೆಯುತ್ತಿದ್ದಂತೆ, ಇತ್ತ ಪುರುಷರ ಹಾಲಿ ಚಾಂಪಿಯನ್ ಆಗಿರುವ ಜೊಕೊವಿಕ್ ಎಮಿರೇಟ್ಸ್ ವಿಮಾನದ ಮೂಲಕ ಮಾಸ್ಕ್ ಧರಿಸಿ, 2 ಬ್ಯಾಗ್‌ಗಳನ್ನು ಹೊತ್ತುಕೊಂಡು ದುಬೈಗೆ ಬಂದಿಳಿದಿದ್ದಾರೆ.
ಆಸ್ಟ್ರೇಲಿಯಾ ಫೆಡರಲ್ ಕೋರ್ಟ್ ನ ತೀರ್ಪಿನ ಬಳಿಕ ಅತ್ಯಂತ ನಿರಾಶಗೊಂಡಿದ್ದ ಜೊಕೊವಿಕ್, ಮೆಲ್ಬೋರ್ನ್‌ನ ಟುಲ್ಲಾಮರೀನ್ ವಿಮಾನ ನಿಲ್ದಾಣದಿಂದ ಎಮಿರೇಟ್ಸ್ ಫ್ಲೈಟ್ EK409 ಸ್ಥಳೀಯ ಸಮಯ ರಾತ್ರಿ 10:51ಕ್ಕೆ ದುಬೈಗೆ ಟೇಕ್ ಆಫ್ ಆದರು. ಆತನೊಂದಿಗೆ ಸಹಾಯಕರು ಹಾಗೂ ಅಧಿಕಾರಗಳು ಇದ್ದರು.
ಇದನ್ನೂ ಓದಿ: 'ಆಸ್ಟ್ರೇಲಿಯನ್ ಓಪನ್' ನಲ್ಲಿ ಆಡುವ ಕನಸು ಭಗ್ನ: ನೊವಾಕ್ ಜೊಕೊವಿಕ್ ಗಡೀಪಾರಿಗೆ ಫೆಡರಲ್ ಕೋರ್ಟ್ ಆದೇಶ
ಕಳೆದ 11 ದಿನಗಳಲ್ಲಿ ಎರಡು ಬಾರಿ ಆಸ್ಟ್ರೇಲಿಯಾದ ಸರ್ಕಾರವು ಜೊಕೊವಿಕ್ ಅವರ ವೀಸಾವನ್ನು ಕ್ಯಾನ್ಸಲ್ ಮಾಡಿ, ಬಂಧನದಲ್ಲಿರಿಸಿತ್ತು. ಕೊರೊನಾ ಲಸಿಕೆ ಪಡೆಯದೆ ನೊವಾಕ್ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಭಾಗವಹಿಸಲು ಪಟ್ಟು ಹಿಡಿದಿದ್ದರು.
ಆದರೆ, ಆಸ್ಟ್ರೇಲಿಯಾ ಸರ್ಕಾರ ವ್ಯಾಕ್ಸಿನ್ ಪಡೆಯ ಜೊಕೊವಿಕ್ ಗೆ ಯಾವುದೇ ರೀತಿಯ ವಿನಾಯಿತಿ ನೀಡದೆ ವೀಸಾ ಕ್ಯಾನ್ಸಲ್ ಮಾಡಿತ್ತು. ಅಲ್ಲದೆ ಕೋರ್ಟ್ ನಲ್ಲಿ ಸೋಲು ಕಂಡ ನಂತರ ಆಸ್ಟ್ರೇಲಿಯಾ ಸರ್ಕಾರ ನೊವಾಕ್ ಅವರನ್ನು ಗಡಿಪಾರು ಮಾಡಿತ್ತು.