
ಚರಣ್ಜೀತ್ ಸಿಂಗ್
ಡೆಹ್ರಾಡೂನ್: ಎರಡು ಬಾರಿ ಒಲಂಪಿಕ್ಸ್ ಪದಕ ಗೆದ್ದಿದ್ದ, ಪದ್ಮ ಶ್ರೀ ಪ್ರಶಸ್ತಿ ವಿಜೇತ ಹಾಕಿ ಲೆಜೆಂಡ್ ಆಟಗಾರ ಚರಣ್ಜೀತ್ ಸಿಂಗ್ (92) ಗುರುವಾರ ಇಹಲೋಕ ತ್ಯಜಿಸಿದ್ದಾರೆ.
ಮಾಜಿ ಹಾಕಿ ಆಟಗಾರ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿದ್ದರು.
On behalf of Hockey India, we mourn the loss of a great figure of Indian Hockey, Shri Charanjit Singh.
May his soul Rest in Peace pic.twitter.com/PTb38lHDS6— Hockey India (@TheHockeyIndia) January 27, 2022
ಅರ್ಜುನ ಪ್ರಶಸ್ತಿ ವಿಜೇತರೂ ಆಗಿರುವ ಚರಣ್ ಜೀತ್ ಸಿಂಗ್ 1964 ರ ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡವನ್ನು ಮುನ್ನಡೆಸಿದ್ದರು. ಹಾಗೂ 1960 ರಲ್ಲಿ ರೋಮ್ ನಲ್ಲಿ ನಡೆದ ಒಲಂಪಿಕ್ಸ್ ನಲ್ಲಿ ಸ್ವರ್ಣ ಪದಕ ಗೆದ್ದ ಭಾರತ ತಂಡದ ಭಾಗವಾಗಿದ್ದರು.
1929 ರ ನವೆಂಬರ್ 20 ರಂದು ಜನಿಸಿದ್ದ ಚರಣ್ಜೀತ್ ಸಿಂಗ್ ಡೆಹ್ರಾಡೂನ್ ನ ಕರ್ನಲ್ ಬ್ರೌನ್ ಕೇಂಬ್ರಿಡ್ಜ್ ಶಾಲೆ ಹಾಗೂ ಪಂಜಾಬ್ ವಿವಿಯಲ್ಲಿ ಕಲಿತಿದ್ದರು. ಅಂತಾರಾಷ್ಟ್ರೀಯ ಹಾಕಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಬಳಿಕ ಅವರು ಶಿಮ್ಲಾದ ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದಲ್ಲಿ ಭೌತಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.