ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್: 3 ಚಿನ್ನ, 4 ಬೆಳ್ಳಿ, 1 ಕಂಚಿನ ಪದಕದೊಂದಿಗೆ ಭಾರತಕ್ಕೆ ಅಗ್ರಸ್ಥಾನ

ಇಲ್ಲಿ ನಡೆಯುತ್ತಿರುವ ಐಎಸ್ ಎಸ್ ಎಫ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಶೂಟರ್ ಗಳು ಅದ್ಬುತ ಪ್ರದರ್ಶನದೊಂದಿಗೆ ಗುರುವಾರ ಭಾರತ ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತು.
ಪದಕದೊಂದಿಗೆ ಭಾರತದ ಶೂಟರ್ ಗಳಾದ ಮೆಹುಲ್ ಘೋಷ್, ಶಾಹು ತುಷಾರ್ ಮಾನೆ
ಪದಕದೊಂದಿಗೆ ಭಾರತದ ಶೂಟರ್ ಗಳಾದ ಮೆಹುಲ್ ಘೋಷ್, ಶಾಹು ತುಷಾರ್ ಮಾನೆ

ಚಾಂಗ್ ವೋನ್: ಇಲ್ಲಿ ನಡೆಯುತ್ತಿರುವ ಐಎಸ್ ಎಸ್ ಎಫ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಶೂಟರ್ ಗಳು ಅದ್ಬುತ ಪ್ರದರ್ಶನದೊಂದಿಗೆ ಗುರುವಾರ ಭಾರತ ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತು. ಈ ಟೂರ್ನಿಯಲ್ಲಿ ಭಾರತ ಮೂರು ಚಿನ್ನ, ನಾಲ್ಕು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಸೇರಿದಂತೆ ಒಟ್ಟಾರೆ 8 ಪದಕಗಳನ್ನು ಗೆದ್ದುಕೊಂಡಿತು.  ಕೊರಿಯಾ ಮತ್ತು ಸೆರ್ಬಿಯಾ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.

10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಅರ್ಜುನ್ ಬಾಬುತಾ, ಶಾಹು ತುಷಾರ್ ಮಾನೆ ಮತ್ತು ಪಾರ್ಥ್ ಮಖಿಜಾ ಅವರು ಕೊರಿಯಾವನ್ನು 17-15 ಅಂತರದಲ್ಲಿ ಸೋಲಿಸುವುದರೊಂದಿಗೆ ದೇಶ ಮೂರನೇ ಚಿನ್ನದ ಪದಕ ಪಡೆಯಲು ನೆರವಾದರು. 

ಅರ್ಜುನ್, ಮಖಿಜಾ ಮತ್ತು ಮಾನೆ ಕೊರಿಯಾದ ಸೆಯುಂಘೋ ಬ್ಯಾಂಗ್, ಸಾಂಗ್ಡೊ ಕಿಮ್ ಮತ್ತು ಹಜುನ್ ಪಾರ್ಕ್ ಒಳಗೊಂಡ ತಂಡದ ಎದುರು ನೇರ ಹೋರಾಟ ನಡೆಸುವುದರೊಂದಿಗೆ ಫೈನಲ್ ನಲ್ಲಿ ಪ್ರಥಮ ಬಹುಮಾನ ಪಡೆದುಕೊಂಡರು. ಇದು ವಿಶ್ವಕಪ್ ನಲ್ಲಿ ಅರ್ಜುನ್ ಮತ್ತು ಶಾಹು ಅವರ ಎರಡನೇ ಚಿನ್ನದ ಪದಕವಾಗಿದೆ. 

ಎಲವೆನಿಲ್ ವಲವಿರಾನ್, ಮೆಹುಲಿ ಘೋಷ್ ಮತ್ತು ರಮಿತಾ ಅವರ ಜೋಡಿ ದೇಶಕ್ಕೆ ಬೆಳ್ಳಿಯನ್ನು ತಂದುಕೊಟ್ಟಿದೆ. ಪುರುಷರ 10 ಮೀಟರ್ ಏರ್ ಪಿಸ್ತೂಲ್ ಟೀಮ್ ಈವೆಂಟ್ ಫೈನಲ್ ನಲ್ಲಿ ಭಾರತ ತಂಡ ಇಟಲಿಯ ಪಾಲೊ ಮೊನ್ನಾ, ಅಲೆಸ್ಸಿಯೊ ಟೊರಾಚಿ ಮತ್ತು ಲುಕಾ ಟೆಸ್ಕೊನಿ ವಿರುದ್ಧ ಹೋರಾಟ ನಡೆಸಿ 15-17 ರಿಂದ ಸೋಲುವುದರೊಂದಿಗೆ ದೇಶಕ್ಕೆ ಮತ್ತೊಂದು ಬೆಳ್ಳಿಯನ್ನು ತಂದುಕೊಟ್ಟಿತು.

10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ಸ್ಪರ್ಧೆಯಲ್ಲಿ ಕೊರಿಯಾದ ವಿರುದ್ಧ ರಿದಮ್ ಸಂಗ್ ವಾನ್, ಯುವಿಕಾ ತೋಮರ್ ಮತ್ತು ಪಾಲಕ್ ಅವರು 2-10 ಗೆಲುವಿನಿಂದ ಭಾರತ ತಂಡಕ್ಕೆ ಇಂದು ಮೂರನೇ ಬೆಳ್ಳಿಯ ಪದಕ ಬಂದಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com