ಅಂತರಾಷ್ಟ್ರೀಯ ಹಾಕಿ ಫೆಡರೇಶನ್ ಅಧ್ಯಕ್ಷ ನರೀಂದರ್ ಬಾತ್ರಾ ರಾಜೀನಾಮೆ

ಅಂತರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್‌ಐಹೆಚ್) ಅಧ್ಯಕ್ಷ ಮತ್ತು ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ) ಸದಸ್ಯ ನರೀಂದರ್ ಬಾತ್ರಾ ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ನರೀಂದರ್ ಬಾತ್ರಾ
ನರೀಂದರ್ ಬಾತ್ರಾ

ನವದೆಹಲಿ: ಅಂತರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್‌ಐಹೆಚ್) ಅಧ್ಯಕ್ಷ ಮತ್ತು ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ) ಸದಸ್ಯ ನರೀಂದರ್ ಬಾತ್ರಾ ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ, ಬಾತ್ರಾ ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು ಮತ್ತು ಅವರು ಮತ್ತೆ ಆ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಖಚಿತಪಡಿಸಿದ್ದರು.

ಹಾಕಿ ಇಂಡಿಯಾದ 35 ಲಕ್ಷ ರೂಪಾಯಿ ದುರುಪಯೋಗದ ಆರೋಪದ ಮೇಲೆ ಬಾತ್ರಾ ವಿರುದ್ಧ ಕೇಂದ್ರ ತನಿಖಾ ಸಂಸ್ಥೆ(ಸಿಬಿಐ)ಯು ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಾಥಮಿಕ ವಿಚಾರಣೆಯನ್ನು ಪ್ರಾರಂಭಿಸಿದೆ. ವಿಚಾರಣೆ ಪ್ರಾಥಮಿಕ ಅಪರಾಧದ ಮೊದಲ ಹೆಜ್ಜೆಯಾಗಿದೆ.

ನಾನು ಭಾರತೀಯ ಒಲಿಂಪಿಕ್ ಅಸೋಸಿಯೇಷನ್​(IOA) ಅಧ್ಯಕ್ಷರಾಗಿ ಮುಂದಿನ ಅವಧಿಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ನಾನು ಈ ಜವಾಬ್ಗಾರಿಯನ್ನು ಹೊಸ ಆಲೋಚನೆಗಳೊಂದಿಗೆ ಬರುವವರಿಗೆ ಬಿಟ್ಟುಕೊಡುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಭಾರತೀಯ ಕ್ರೀಡೆಗಳು ಹೆಚ್ಚು ಎತ್ತರಕ್ಕೆ ಏರಲಿವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com