
ಸ್ಮೃತಿ ಮಂದನ
ಬರ್ಮಿಂಗ್ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತ ಮತ್ತೊಂದು ಗೆಲುವು ಸಾಧಿಸಿದೆ. ಪಾಕ್ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ.
ಬರ್ಮಿಂಗ್ಹ್ಯಾಮ್ ನ ಎಡ್ಜ್‌ಬಾಸ್ಟನ್ ನಲ್ಲಿ ನಡೆದ ಪಂದ್ಯದಲ್ಲಿ ಬಿಸ್ಮಾ ಮಾರೂಫ್ ನೇತೃತ್ವದ ಪಾಕ್ ತಂಡವನ್ನು ಭಾರತ ಕೇವಲ 99 ರನ್ ಗಳಿಗೆ ಕಟ್ಟಿ ಹಾಕಿತ್ತು.
100 ರನ್ ಗಳ ರನ್ ಚೇಸಿಂಗ್ ನಲ್ಲಿ ಭಾರತದ ಪರ ಸ್ಮೃತಿ ಮಂದನ ಅಜೇಯ 63 ರನ್ ಗಳಿಕೆಯ ನೆರವಿನಿಂದ ಭಾರತ ಸುಲಭವಾಗಿ ಜಯ ಗಳಿಸಿತು. ಭಾರತದ ಪರ ಸ್ನೇಹ್ ರಾಣಾ ಹಾಗೂ ರಾಧಾ ಯಾದವ್ ತಲಾ 2 ವಿಕೆಟ್ ಪಡೆದು ಉತ್ತಮ ಬೌಲರ್ ಎನಿಸಿದರು. ಪಾಕಿಸ್ತಾನದ ಪರ ಮುನೀಬಾ ಅಲಿ 30 ಎಸೆತಗಳಲ್ಲಿ 32 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.