ಫ್ರೆಂಚ್ ಓಪನ್: ಥ್ರಿಲ್ಲರ್ ಗೇಮ್ ನಲ್ಲಿ ವಿಶ್ವದ ನಂ.1 ಜಾಕೋವಿಚ್ ವಿರುದ್ಧ ನಡಾಲ್ ಗೆ ಜಯ, ಸೆಮೀಸ್ ಗೆ ಲಗ್ಗೆ!!
ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಇಂದು ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್‌ನ ರಫೆಲ್ ನಡಾಲ್ ಅವರು ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ನೊವಾಕ್ ಜೊಕೊವಿಚ್ ರನ್ನು ಮಣಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
Published: 01st June 2022 11:38 AM | Last Updated: 01st June 2022 11:38 AM | A+A A-

ನಡಾಲ್ ಗೆ ಜಯ
ಪ್ಯಾರಿಸ್: ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಇಂದು ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್‌ನ ರಫೆಲ್ ನಡಾಲ್ ಅವರು ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ನೊವಾಕ್ ಜೊಕೊವಿಚ್ ರನ್ನು ಮಣಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸರ್ಬಿಯಾದ ಜೊಕೊವಿಚ್ ಅವರನ್ನು ನಡಾಲ್ 6-2, 4-6, 6-2, 7-6 ಸೆಟ್‌ಗಳಿಂದ ಮಣಿಸಿದರು. ಆ ಮೂಲಕ 13 ಬಾರಿಯ ಚಾಂಪಿಯನ್ ಆಗಿರುವ ನಡಾಲ್ ಈ ಗೆಲುವಿನ ಮೂಲಕ ಫ್ರೆಂಚ್ ಓಪನ್ ಟೂರ್ನಿಯಲ್ಲಿ 15ನೇ ಬಾರಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
What a set! What a comeback!
Is 14 next for @RafaelNadal ?#RolandGarros pic.twitter.com/0Wa4mjZoau— Roland-Garros (@rolandgarros) May 31, 2022
ಮೊದಲ ಸೆಟ್‌ನಲ್ಲಿ ಜೊಕೊವಿಕ್ ವಿರುದ್ಧ ನಡಾಲ್ ಮುನ್ನಡೆ ಸಾಧಿಸಿದರೆ, ಜೊಕೊವಿಕ್ ಎರಡನೇ ಸೆಟ್‌ನಲ್ಲಿ ಪಾರಮ್ಯ ಮೆರೆದರು. ಆದರೆ, ದಿಟ್ಟ ಆಟವಾಡಿದ ನಡಾಲ್ ಮೂರು ಮತ್ತು ನಾಲ್ಕನೇ ಸುತ್ತಿನಲ್ಲಿ ಮುನ್ನಡೆ ಸಾಧಿಸುವ ಮೂಲಕ ಗೆಲುವಿನ ನಗೆ ಬೀರಿದರು.
ಜಾಕೊವಿಚ್, ಕಳೆದ ವರ್ಷ ನಡೆದಿದ್ದ ಫ್ರೆಂಚ್ ಓಪನ್ ಟೂರ್ನಿಯಲ್ಲಿ ನಡಾಲ್ ಅವರನ್ನು ಸೋಲಿಸಿ ಪ್ರಶಸ್ತಿಗೆ ಮುತ್ತಿಕ್ಕಿದ್ದರು.