ರಷ್ಯಾ-ಉಕ್ರೇನ್ ಸಂಘರ್ಷ: ಪುಟಿನ್ ಸರ್ಕಾರಕ್ಕೆ ಮತ್ತೊಂದು ಜಾಗತಿಕ ಮುಖಭಂಗ; ಫಾರ್ಮುಲಾ ಒನ್ ಒಪ್ಪಂದ ರದ್ದು!!
ಉಕ್ರೇನ್ ಮೇಲಿನ ರಷ್ಯಾ ಮಿಲಿಟರಿ ದಾಳಿ ಮುಂದುವರೆದಿರುವಂತೆಯೇ ಇತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸರ್ಕಾರಕ್ಕೆ ಮತ್ತೊಂದು ಜಾಗತಿಕ ಮುಖಭಂಗವಾಗಿದ್ದು, ಫಾರ್ಮುಲಾ ಒನ್ ಟೂರ್ನಿ ಆಯೋಜನೆ ಒಪ್ಪಂದ ರದ್ದಾಗಿದೆ.
Published: 03rd March 2022 09:16 PM | Last Updated: 04th March 2022 01:45 PM | A+A A-

ಎಫ್1 ರೇಸಿಂಗ್
ಲಂಡನ್: ಉಕ್ರೇನ್ ಮೇಲಿನ ರಷ್ಯಾ ಮಿಲಿಟರಿ ದಾಳಿ ಮುಂದುವರೆದಿರುವಂತೆಯೇ ಇತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸರ್ಕಾರಕ್ಕೆ ಮತ್ತೊಂದು ಜಾಗತಿಕ ಮುಖಭಂಗವಾಗಿದ್ದು, ಫಾರ್ಮುಲಾ ಒನ್ ಟೂರ್ನಿ ಆಯೋಜನೆ ಒಪ್ಪಂದ ರದ್ದಾಗಿದೆ.
ಹೌದು.. ಉಕ್ರೇನ್ನ ಮೇಲೆ ರಷ್ಯಾ ಆಕ್ರಮಣಕ್ಕೆ ಜಾಗತಿಕ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಫಾರ್ಮುಲಾ ಒನ್ ರಷ್ಯಾ ಗ್ರ್ಯಾಂಡ್ ಪ್ರಿಕ್ಸ್ನೊಂದಿಗಿನ ತನ್ನ ಒಪ್ಪಂದವನ್ನು ರದ್ದು ಮಾಡಿದೆ. ಅಂತೆಯೇ ಭವಿಷ್ಯದಲ್ಲಿ ರಷ್ಯಾದಲ್ಲಿ ಎಫ್1 ರೇಸ್ ಗಳ ಆಯೋಜನೆ ಇರುವುದಿಲ್ಲ ಎಂದು ಗುರುವಾರ ಫಾರ್ಮುಲಾ ಒನ್ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಮೇಲೆ ಯುದ್ಧ: ಫೀಫಾ ವಿಶ್ವಕಪ್ ಟೂರ್ನಿಯಿಂದ ರಷ್ಯಾ ಬಹಿಷ್ಕಾರ!
ಇದೇ ಸೆಪ್ಟೆಂಬರ್ 25ರಿಂದ ರಷ್ಯನ್ ಗ್ರಾಂಡ್ ಪ್ರಿಕ್ಸ್ ಸ್ಪರ್ಧೆ ನಡೆಯಬೇಕಿತ್ತು. ಆದರೆ ಉಕ್ರೇನ್ ಮೇಲೆ ರಷ್ಯಾ ದಾಳಿ ಹಿನ್ನಲೆಯಲ್ಲಿ ಕಳೆದೆರಡು ವಾರಗಳಿಂದ ನಡೆದ ಸತತ ಸಭೆಗಳ ಬಳಿಕ ಫಾರ್ಮುಲಾ ಒನ್ ಟೂರ್ನಿ ಆಯೋಜನೆ ರದ್ದು ಮಾಡಿತ್ತು. ಅಲ್ಲದೆ ರಷ್ಯಾದಲ್ಲಿನ ಭವಿಷ್ಯದ ಟೂರ್ನಿಗಳ ಮೇಲೂ ಕೆಂಗಣ್ಣು ಬೀರಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಎಫ್1 2025 ರವರೆಗೆ ರಷ್ಯಾದಲ್ಲಿ ಫಾರ್ಮುಲಾ ಒನ್ ಟೂರ್ನಿ ಆಯೋಜನೆ ಮಾಡದಂತೆ ಎಲ್ಲ ಸರಣಿಗಳನ್ನೂ ರದ್ದು ಮಾಡಿದೆ.
ಇದನ್ನೂ ಓದಿ: ಮನಕಲಕುವ ದೃಶ್ಯ: ಲೈವ್ ಮ್ಯಾಚ್ ನಲ್ಲಿ ಕಣ್ಣೀರಿಟ್ಟ ಉಕ್ರೇನ್ ಆಟಗಾರ; ಎದ್ದು ನಿಂತ ಅಭಿಮಾನಿಗಳು!
ಇತ್ತೀಚೆಗಷ್ಟೇ ನಾಲ್ಕು ಬಾರಿ F1 ಚಾಂಪಿಯನ್ ಸೆಬಾಸ್ಟಿಯನ್ ವೆಟ್ಟೆಲ್ ಸೇರಿದಂತೆ ಹಲವು ಸ್ಟಾರ್ ಎಫ್ 1 ರೇಸರ್ ಗಳು ರಷ್ಯಾ ಟೂರ್ನಿಯಿಂದ ಹಿಂದಕ್ಕೆ ಸರಿದಿದ್ದರು. ಅಲ್ಲದೆ ಭವಿಷ್ಯದಲ್ಲಿ ರಷ್ಯಾಗೆ ತಾವು ಟೂರ್ನಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.