
ಭಾರತದ ಮಹಿಳಾ ಶೂಟರ್ ರಾಹಿ ಸರ್ನೊಬಾತ್
ಕೈರೋ: ಭಾರತೀಯ ಮಹಿಳಾ ಶೂಟಿಂಗ್ ತಂಡ 25ಮೀ. ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದೆ. ಇದರೊಂದಿಗೆ ಭಾರತಕ್ಕೆ ಮೂರು ಚಿನ್ನ ಸಿಕ್ಕಂತಾಗಿದೆ. ಪುರುಷರ ತಂಡ ರಾಪಿಡ್ ಫೈರ್ ರೈಫಲ್ ಟೀಮ್ ಈವೆಂಟ್ ನಲ್ಲಿ ಐಎಸ್ ಎಸ್ಎಫ್ ಶೂಟಿಂಗ್ ವರ್ಲ್ಡ್ನಲ್ಲಿ ಜರ್ಮನಿ ವಿರುದ್ಧ 7-17 ಅಂಕ ಪಡೆದು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತು.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಸಂಘರ್ಷ: ಪುಟಿನ್ ಸರ್ಕಾರಕ್ಕೆ ಮತ್ತೊಂದು ಜಾಗತಿಕ ಮುಖಭಂಗ; ಫಾರ್ಮುಲಾ ಒನ್ ಒಪ್ಪಂದ ರದ್ದು!!
ಇಂಡೋನೇಷ್ಯಾ ವಿರುದ್ಧ 16-0 ಅಂತರದ ಮೇಲುಗೈ ಸಾಧಿಸಿದ ನಂತರ ಜೆಕ್ ಗಣರಾಜ್ಯ ಕಂಚಿನ ಪದಕವನ್ನು ಗೆದ್ದುಕೊಂಡಿತು. ಎರಡನೇ ಅರ್ಹತಾ ಹಂತದಲ್ಲಿ, ಭಾರತ 568 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ ಮತ್ತು ಜರ್ಮನಿ 567 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರತ-ಶ್ರೀಲಂಕಾ ನಡುವೆ ಡೇ-ನೈಟ್ ಟೆಸ್ಟ್; ಎಲ್ಲಾ ಟಿಕೆಟ್ ಸೋಲ್ಡ್ ಔಟ್!