ವಿಂಟರ್ ಬಯಾಥ್ಲಾನ್ ಚಾಂಪಿಯನ್ ಶಿಪ್ ನಲ್ಲಿ ಎರಡು ಬೆಳ್ಳಿ ಪದಕ ಗೆದ್ದ ಕೊಡಗು ಬಾಲಕಿ: ಕ್ರೀಡಾ ಸಚಿವ ಅಭಿನಂದನೆ
ಜಮ್ಮು-ಕಾಶ್ಮೀರದ ಗುಲ್ಮಾರ್ಗ್ ನಲ್ಲಿ ನಡೆದ ರಾಷ್ಟ್ರೀಯ ವಿಂಟರ್ ಬಯಾಥ್ಲಾನ್ ಚಾಂಪಿಯನ್ ಷಿಪ್ 2022ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಭವಾನಿ ತೆಕ್ಕಡ ನಂಜುಂಡ ಎಂಬ ಬಾಲಕಿ ಎರಡು ಬೆಳ್ಳಿಯ ಪದಕ ಗಳಿಸಿದ್ದಾರೆ.
Published: 23rd March 2022 01:38 PM | Last Updated: 23rd March 2022 03:17 PM | A+A A-

ರಾಷ್ಟ್ರೀಯ ವಿಂಟರ್ ಬಯಾಥ್ಲಾನ್ ಚಾಂಪಿಯನ್ಶಿಪ್-2022ನಲ್ಲಿ 2 ಬೆಳ್ಳಿ ಪದಕ ಗೆದ್ದ ಕೊಡಗಿನ ಭವಾನಿ ತೆಕ್ಕಡ
ಮಡಿಕೇರಿ: ಜಮ್ಮು-ಕಾಶ್ಮೀರದ ಗುಲ್ಮಾರ್ಗ್ ನಲ್ಲಿ ನಡೆದ ರಾಷ್ಟ್ರೀಯ ವಿಂಟರ್ ಬಯಾಥ್ಲಾನ್ ಚಾಂಪಿಯನ್ ಷಿಪ್ 2022ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಭವಾನಿ ತೆಕ್ಕಡ ನಂಜುಂಡ ಎಂಬ ಬಾಲಕಿ ಎರಡು ಬೆಳ್ಳಿಯ ಪದಕ ಗಳಿಸಿದ್ದಾರೆ.
ಭವಾನಿ ವೃತ್ತಿಪರ ಸ್ಕೈಯರ್ ಆಗಿದ್ದು, ಅನೇಕ ಸ್ಕೈಯಿಂಗ್ ಚಾಂಪಿಯನ್ಶಿಪ್ಗಳಲ್ಲಿ ಭಾಗವಹಿಸಿದ್ದಾರೆ. ಬಯಾಥ್ಲಾನ್ ಚಾಂಪಿಯನ್ಶಿಪ್ನಲ್ಲಿ, ಭವಾನಿ ಕ್ರಾಸ್ ಕಂಟ್ರಿ ಸ್ಕೀಯಿಂಗ್ ಮತ್ತು ರೈಫಲ್ ಶೂಟಿಂಗ್ ಅನ್ನು ಸಂಯೋಜನೆಯ 10 ಕಿಮೀ ಮತ್ತು 5 ಕಿಮೀ ಓಟದಲ್ಲಿ ಭಾಗವಹಿಸಿದ್ದರು.
ಎರಡೂ ಪಂದ್ಯಗಳಲ್ಲಿ ಬೆಳ್ಳಿ ಪದಕಗಳನ್ನು ಗೆದ್ದು, ವಿಂಟರ್ ಬಯಾಥ್ಲಾನ್ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದ ಮೊದಲ ದಕ್ಷಿಣ ಭಾರತೀಯಳೆನಿಸಿಕೊಂಡಿದ್ದಾರೆ.
ಕ್ರೀಡಾ ಸಚಿವ ಅಭಿನಂದನೆ: ಭವಾನಿ ತೆಕ್ಕಡ ಅವರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ ನಾರಾಯಣ ಗೌಡ ಅಭಿನಂದಿಸಿದ್ದಾರೆ.ಭವಾನಿಯವರ ಪ್ರತಿಭೆ ಗುರುತಿಸಿದ್ದ ರಾಜ್ಯ ಸರ್ಕಾರ, ಅವರಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ ನೀಡಿತ್ತು.
ಕರ್ನಾಟಕದ ಭವಾನಿ ತೆಕ್ಕಡ ನಂಜುಂಡ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ರಾಷ್ಟ್ರೀಯ ವಿಂಟರ್ ಬಯಾಥ್ಲಾನ್ ಚಾಂಪಿಯನ್ಶಿಪ್ನಲ್ಲಿ 2 ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ನಮಗೆ ಹೆಮ್ಮೆ ತಂದಿದ್ದಾರೆ ಎಂದು ಕ್ರೀಡಾ ಸಚಿವರು ಅಭಿನಂದನೆ ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ ಗುಲ್ಮಾರ್ಗ್ನಲ್ಲಿ ನಡೆದ ರಾಷ್ಟ್ರೀಯ ವಿಂಟರ್ ಬಯಾಥ್ಲಾನ್ ಚಾಂಪಿಯನ್ಶಿಪ್-2022ನಲ್ಲಿ ಕರ್ನಾಟಕದ ಪ್ರತಿನಿಧಿ, ಕೊಡಗಿನ ಭವಾನಿ ತೆಕ್ಕಡ ಅವರು 2 ಬೆಳ್ಳಿ ಪದಕ ಪಡೆದಿದ್ದಾರೆ.
— Dr.Narayana Gowda / ಡಾ.ನಾರಾಯಣ ಗೌಡ (@narayanagowdakc) March 22, 2022
ಭವಾನಿಯವರ ಪ್ರತಿಭೆ ಗುರುತಿಸಿದ್ದ ರಾಜ್ಯ ಸರ್ಕಾರ, ಅವರಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ ನೀಡಿತ್ತು.@CMofKarnataka @BJP4Karnataka
1/2 pic.twitter.com/7GTytDTATQ