ಏಷ್ಯಾ ಕಪ್: 20 ಆಟಗಾರರ ತಂಡ ಪ್ರಕಟಿಸಿದ ಹಾಕಿ ಇಂಡಿಯಾ, ರೂಪಿಂದರ್ ಪಾಲ್ ಗೆ ನಾಯಕತ್ವ
ಹಾಕಿ ಇಂಡಿಯಾ, ಇಂಡೋನೇಷ್ಯಾದ ಜಕಾರ್ತಾನಲ್ಲಿ ನಡೆಯಲಿರುವ ಏಷ್ಯಾಕಪ್ ಹಾಕಿ ಟೂರ್ನಮೆಂಟ್ ಗೆ 20 ಆಟಗಾರರ ಭಾರತ ತಂಡವನ್ನು ಸೋಮವಾರ ಪ್ರಕಟಿಸಿದ್ದು, ಇತ್ತೀಚೆಗೆ ನಿವೃತ್ತಿಯಿಂದ ಹೊರಬಂದ...
Published: 09th May 2022 06:31 PM | Last Updated: 09th May 2022 06:58 PM | A+A A-

ರೂಪಿಂದರ್ ಪಾಲ್ ಸಿಂಗ್
ನವದೆಹಲಿ: ಹಾಕಿ ಇಂಡಿಯಾ, ಇಂಡೋನೇಷ್ಯಾದ ಜಕಾರ್ತಾನಲ್ಲಿ ನಡೆಯಲಿರುವ ಏಷ್ಯಾಕಪ್ ಹಾಕಿ ಟೂರ್ನಮೆಂಟ್ ಗೆ 20 ಆಟಗಾರರ ಭಾರತ ತಂಡವನ್ನು ಸೋಮವಾರ ಪ್ರಕಟಿಸಿದ್ದು, ಇತ್ತೀಚೆಗೆ ನಿವೃತ್ತಿಯಿಂದ ಹೊರಬಂದ ಅನುಭವಿ ಡ್ರ್ಯಾಗ್-ಫ್ಲಿಕ್ಕರ್ ರೂಪಿಂದರ್ ಪಾಲ್ ಸಿಂಗ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
ಈ ಕಳೆದ ವರ್ಷ ನಡೆದ ಒಲಿಂಪಿಕ್ಸ್ನ ಬಳಿಕ ರೂಪಿದರ್ ಸಿಂಗ್ ನಿವೃತ್ತಿ ಪಡೆದುಕೊಂಡಿದ್ದರು. ಆದರೆ ಕೆಲ ಸಮಯದ ಹಿಂದೆ ನಿವೃತ್ತಿಯನ್ನು ವಾಪಾಸ್ ಪಡೆದುಕೊಂಡಿದ್ದರು.
ಇದನ್ನು ಓದಿ: ಅಮೆರಿಕ: 30 ವರ್ಷ ಹಳೆಯ 5 ಸಾವಿರ ಮೀಟರ್ ರಾಷ್ಟ್ರೀಯ ದಾಖಲೆಯನ್ನು ಮುರಿದ ಭಾರತದ ಅಥ್ಲೀಟ್ ಅವಿನಾಶ್ ಸೇಬಲ್
ಮೇ 23 ರಿಂದ ಜೂನ್ 1 ರವರೆಗೆ ನಡೆಯಲಿರುವ ಈ ಪ್ರತಿಷ್ಠಿತ ಏಷ್ಯಾ ಕಪ್, ವಿಶ್ವಕಪ್ ಅರ್ಹತಾ ಪಂದ್ಯವಾಗಿದೆ.
ಅನುಭವಿ ಆಟಗಾರರಾದ ಮನ್ಪ್ರೀತ್ ಸಿಂಗ್, ಹರ್ಮನ್ಪ್ರೀತ್ ಸಿಂಗ್ ಮತ್ತು ಪಿಆರ್ ಶ್ರೀಜಿತ್ ಈ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಹೊಸ ಆಟಗಾರರು ತುಂಬಿರುವ ಈ ತಂಡದಲ್ಲಿ ಬಿರೇಂದರ್ ಲಕ್ರಾ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಈ ತಂಡದಲ್ಲಿ ಹತ್ತು ಆಟಗಾರರು ಭಾರತ ಹಿರಿಯರ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಇವರಲ್ಲಿ ಜೂನಿಯರ್ ವಿಶ್ವಕಪ್ನಲ್ಲಿ ಪ್ರತಿನಿಧಿಸಿದ್ದ ಯಶ್ದೀಪ್ ಸಿವಾಚ್, ಅಭಿಶೇಕ್ ಲಕ್ರಾ, ಮಂಜೀತ್, ವಿಷ್ಣುಕಾಂತ್ ಸಿಂಗ್ ಮತ್ತು ಉತ್ತಮ್ ಸಿಂಗ್ ಸೇರಿದ್ದಾರೆ. ಅಲ್ಲದೆ ಮರೀಸ್ವರನ್ ಸಕ್ತಿವೇಲ್, ಶೇಷೇ ಗೌಡ ಬಿಎಂ, ಪವನ್ ರಾಜ್ಭಾರ್, ಆಭರಣ್ ಸುದೇವ್ ಮತ್ತು ಎಸ್ ಕಾರ್ತಿ ಮೊದಲ ಬಾರಿಗೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.