ಥಾಮಸ್ ಕಪ್ 2022: ಭಾರತಕ್ಕೆ ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟ; ಇಂಡೋನೇಷ್ಯಾ ವಿರುದ್ಧ 3-0 ಗೆಲುವು
ಥಾಮಸ್ ಕಪ್ 2022 ಫೈನಲ್ ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಂಡವು 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು 3-0 ಅಂತರದಿಂದ ಸೋಲಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ.
Published: 15th May 2022 03:47 PM | Last Updated: 16th May 2022 01:25 PM | A+A A-

ಭಾರತ ತಂಡ
ನವದೆಹಲಿ: ಥಾಮಸ್ ಕಪ್ 2022 ಫೈನಲ್ ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಂಡವು 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು 3-0 ಅಂತರದಿಂದ ಸೋಲಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ.
ಈ ತಂಡವನ್ನು ಸೋಲಿಸುವ ಮೂಲಕ ಭಾರತ ಇತಿಹಾಸ ನಿರ್ಮಿಸಿ ಚೊಚ್ಚಲ ಬಾರಿಗೆ ಥಾಮಸ್ ಕಪ್ ಪ್ರಶಸ್ತಿ ಗೆದ್ದುಕೊಂಡಿತು.
ಭಾರತದ ಪರ ಲಕ್ಷ್ಯ ಸೇನ್ ಅವರು ಇಂಡೋನೇಷ್ಯಾದ ಆಂಥೋನಿ ಗಿಂಟಿಂಗ್ ಅವರನ್ನು 21-8 17-21 16-21 ರಿಂದ ಸೋಲಿಸಿ ತಂಡಕ್ಕೆ ಪ್ರಮುಖ 1-0 ಮುನ್ನಡೆ ನೀಡಿದರು.
ಇದಾದ ಬಳಿಕ ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್ ಮತ್ತು ಚಿರಾಗ್ ಜೋಡಿ 18-21, 23-21, 21-19 ಅಂತರದಲ್ಲಿ ಗೆದ್ದು ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟರು. ನಂತರ ಮೂರನೇ ಪಂದ್ಯದಲ್ಲಿ ಕಿಡಂಬಿ ಶ್ರೀಕಾಂತ್ 21-15, 23-21 ನೇರ ಗೇಮ್ ಗಳಿಂದ ಜೋನಾಥನ್ ಅವರನ್ನು ಸೋಲಿಸಿ ತಂಡಕ್ಕೆ ಐತಿಹಾಸಿಕ ಜಯದೊಂದಿಗೆ 3-0 ಮುನ್ನಡೆ ತಂದುಕೊಟ್ಟರು.