3 ತಿಂಗಳ ಅವಧಿಯಲ್ಲಿ 2ನೇ ಬಾರಿಗೆ ವಿಶ್ವ ಚಾಂಪಿಯನ್ ಕಾರ್ಲಸನ್ ರನ್ನು ಮಣಿಸಿದ ಭಾರತದ ಲಿಟಲ್ ಗ್ರಾಂಡ್ ಮಾಸ್ಟರ್ ಪ್ರಜ್ಞಾನಂದ!!
ಈ ಹಿಂದೆ ಚೆಸ್ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ ಸನ್ ರನ್ನು ಮಣಿಸಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಭಾರತದ ಲಿಟಲ್ ಗ್ರಾಂಡ್ ಮಾಸ್ಟರ್ ಪ್ರಜ್ಞಾನಂದ ಕೇವಲ 3 ತಿಂಗಳ ಅವಧಿಯಲ್ಲಿ ಮತ್ತೊಮ್ಮೆ ಕಾರ್ಲ್ ಸನ್ ರನ್ನು ಮಣಿಸಿದ್ದಾರೆ.
Published: 21st May 2022 03:20 PM | Last Updated: 21st May 2022 03:20 PM | A+A A-

ಪ್ರಜ್ಞಾನಂದಗ ಗೆಲುವು
ಮುಂಬೈ: ಈ ಹಿಂದೆ ಚೆಸ್ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ ಸನ್ ರನ್ನು ಮಣಿಸಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಭಾರತದ ಲಿಟಲ್ ಗ್ರಾಂಡ್ ಮಾಸ್ಟರ್ ಪ್ರಜ್ಞಾನಂದ ಕೇವಲ 3 ತಿಂಗಳ ಅವಧಿಯಲ್ಲಿ ಮತ್ತೊಮ್ಮೆ ಕಾರ್ಲ್ ಸನ್ ರನ್ನು ಮಣಿಸಿದ್ದಾರೆ.
ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದ ರಮೇಶಬಾಬು ಅವರು ಕೇವಲ ಮೂರು ತಿಂಗಳ ಅಂತರದಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸೆನ್ ವಿರುದ್ಧ ಎರಡನೇ ಗೆಲುವು ದಾಖಲಿಸಿದ್ದಾರೆ. ಶುಕ್ರವಾರ ನಡೆದ ಚೆಸ್ಸಬಲ್ ಮಾಸ್ಟರ್ಸ್ ಆನ್ಲೈನ್ ರ್ಯಾಪಿಡ್ ಚೆಸ್ ಪಂದ್ಯಾವಳಿಯ 5 ನೇ ಸುತ್ತಿನಲ್ಲಿ ಇಬ್ಬರು ಆಟಗಾರರು ಭೇಟಿಯಾದರು. ಈ ಪಂದ್ಯದಲ್ಲಿ ಪ್ರಗ್ನಾನಂದ ಮತ್ತು ಕಾರ್ಲ್ಸೆನ್ (Carlsen) ನಡುವೆ ತೀವ್ರ ನಿಕಟವಾದ ಸ್ಪರ್ಧೆ ಇತ್ತು. ಆದರೆ ಕಾರ್ಲ್ಸನ್ ಅವರು ತಮ್ಮ 40ನೇ ನಡೆಯಲ್ಲಿ ಪಂದ್ಯವನ್ನು ಕಳೆದುಕೊಂಡರು. ಕಾರ್ಲ್ಸೆನ್ ತನ್ನ ಕುದುರೆಯನ್ನು ತಪ್ಪಾಗಿ ನಡೆಸಿದರು. ಈ ಪ್ರಮಾದವನ್ನು ಕೂಡಲೇ ಗಮನಿಸಿದ ಪ್ರಗ್ನಾನಂದ ಅವರು ಚೆಕ್ ಅನ್ನು ಘೋಷಿಸುವಲ್ಲಿ ಸಮಯ ವ್ಯರ್ಥ ಮಾಡಲಿಲ್ಲ. ಪಂದ್ಯದ ನಂತರ, ಪ್ರಗ್ನಾನಂದ ಅವರು ಈವೆಂಟ್ನಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿರುವುದಾಗಿ ಹೇಳಿದರು. ಆದಾಗ್ಯೂ ಈ 16ರ ಹರೆಯದ ಪ್ರಗ್ನಾನಂದಗೆ ತನ್ನ ಆಟದ ಗುಣಮಟ್ಟದ ಬಗ್ಗೆ ಸಂತೋಷವಾಗಿಲ್ಲ. ಅವರು ತಾನು ಇನ್ನಷ್ಟು ತೀಕ್ಷ್ಣವಾಗಬೇಕಿದೆ ಎಂದು ಹೇಳಿದ್ದಾರೆ.
Magnus Carlsen blunders and Praggnanandhaa beats the World Champion again! https://t.co/J2cgFmhKbT #ChessChamps #ChessableMasters pic.twitter.com/mnvL1BbdVn
— chess24.com (@chess24com) May 20, 2022
ಕಾರ್ಲ್ಸನ್ ವಿರುದ್ಧದ ಗೆಲುವಿನ ನಂತರ ಪ್ರಗ್ನಾನಂದ ಅವರು ನಾಕೌಟ್ ಹಂತಕ್ಕೆ ಮುನ್ನಡೆಯುವ ಅವಕಾಶವನ್ನು ಜೀವಂತವಾಗಿರಿಸಿಕೊಂಡರು. ಪಂದ್ಯಾವಳಿಯ 2ನೇ ದಿನದಂದು ಚೀನಾದ ವೈ ಯಿ ನಂತರ ಕಾರ್ಲ್ಸೆನ್ ಲೀಡರ್ ಬೋರ್ಡ್ನಲ್ಲಿ 2 ನೇ ಸ್ಥಾನದಲ್ಲಿದ್ದರೆ ಪ್ರಜ್ಞಾನಂದ ಅವರು ತಮ್ಮ ಮೊತ್ತವನ್ನು 12 ಅಂಕಗಳಿಗೆ ಏರಿಕೆ ಮಾಡಿಕೊಂಡರು. ವಿಶ್ವದ ಅತ್ಯಂತ ಕಿರಿಯ ಗ್ರ್ಯಾಂಡ್ ಮಾಸ್ಟರ್ ಅಭಿಮನ್ಯು ಮಿಶ್ರಾ ಕೂಡ 16 ಮಂದಿ ಪಂದ್ಯಾವಳಿಯ ಭಾಗವಾಗಿದ್ದಾರೆ.
16 ವರ್ಷ ವಯಸ್ಸಿನ ಪ್ರಗ್ನಾನಂದ ಅವರು ಫೆಬ್ರವರಿಯಲ್ಲಿ ಆನ್ಲೈನ್ ರ್ಯಾಪಿಡ್ ಚೆಸ್ ಪಂದ್ಯಾವಳಿಯಾದ ಏರ್ಥಿಂಗ್ಸ್ ಮಾಸ್ಟರ್ಸ್ನಲ್ಲಿ ಮ್ಯಾಗ್ನಸ್ ಕಾರ್ಲ್ಸೆನ್ ಅವರನ್ನು ಮೊದಲ ಬಾರಿಗೆ ಸೋಲಿಸಿದ್ದರು. ಆ ಮೂಲಕ ಪ್ರಗ್ನಾನಂದ ಅವರು ಕಾರ್ಲ್ಸೆನ್ರ 3-ಪಂದ್ಯಗಳ ಗೆಲುವಿನ ಓಟವನ್ನು ಕೊನೆಗೊಳಿಸಿದ್ದರು.
ತಮಿಳುನಾಡಿನ ಚೆಸ್ ಪ್ರತಿಭೆ ಪ್ರಗ್ನಾನಂದ ಅವರು 2018 ರಲ್ಲಿ ಅಸ್ಕರ್ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ಆ ಸಮಯದಲ್ಲಿ ಗ್ರ್ಯಾಂಡ್ ಮಾಸ್ಟರ್ ಪಟ್ಟವನ್ನು ಸಾಧಿಸಿದ ಎರಡನೇ ಕಿರಿಯ ವ್ಯಕ್ತಿಯಾಗಿದ್ದರು. ಆದರೆ ಪ್ರಸ್ತುತ ಅಭಿಮನ್ಯು ಮಿಶ್ರಾ (Abhimanyu Mishra), ಸೆರ್ಗೆಯ್ ಕರ್ಜಾಕಿನ್ (Sergey Karjakin) ಅವರಿಂದಾಗಿ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಇದಕ್ಕೂ ಮೊದಲು ಪ್ರಗ್ನಾನಂದ್ 2013 ರಲ್ಲಿ ವಿಶ್ವ ಯೂತ್ ಚೆಸ್ ಚಾಂಪಿಯನ್ಶಿಪ್ U-8 ಪ್ರಶಸ್ತಿಯನ್ನು ಗೆದ್ದಿದ್ದರು. ಇದು ಅವರಿಗೆ 7 ನೇ ವಯಸ್ಸಿನಲ್ಲಿ FIDE ಮಾಸ್ಟರ್ ಪ್ರಶಸ್ತಿಯನ್ನು ತಂದುಕೊಟ್ಟಿತು.