ಥಾಯ್ಲೆಂಡ್ ಓಪನ್: ಚೀನಾ ಆಟಗಾರ್ತಿ ಎದುರು ಸೋತು ಸೆಮಿಸ್ನಿಂದ ಹೊರಬಿದ್ದ ಪಿ.ವಿ ಸಿಂಧು!
ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು ಥಾಯ್ಲೆಂಡ್ ಓಪನ್ನ ಸೆಮಿಫೈನಲ್ನಲ್ಲಿ ಚೀನಾದ ಚೆನ್ ಯು ಫೀ ವಿರುದ್ಧ ಸೋತಿದ್ದಾರೆ. ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಯು ಫೀ 21-17, 21-16 ನೇರ ಸೆಟ್ಗಳಿಂದ ಸಿಂಧು ಅವರನ್ನು ಸೋಲಿಸಿದರು.
Published: 21st May 2022 04:51 PM | Last Updated: 21st May 2022 04:51 PM | A+A A-

ಪಿ.ವಿ.ಸಿಂಧು
ಬ್ಯಾಂಕಾಕ್: ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು ಥಾಯ್ಲೆಂಡ್ ಓಪನ್ನ ಸೆಮಿಫೈನಲ್ನಲ್ಲಿ ಚೀನಾದ ಚೆನ್ ಯು ಫೀ ವಿರುದ್ಧ ಸೋತಿದ್ದಾರೆ. ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಯು ಫೀ 21-17, 21-16 ನೇರ ಸೆಟ್ಗಳಿಂದ ಸಿಂಧು ಅವರನ್ನು ಸೋಲಿಸಿದರು.
ಗೇಮ್ನ ಆರಂಭಿಕ ಕ್ಷಣಗಳಲ್ಲಿ 10-15 ರಿಂದ ಯು ಫೀಗೆ ಹಿನ್ನಡೆಯಾದ ನಂತರ, ಸಿಂಧು ಪುನರಾಗಮನ ಮಾಡಿದರು.ಗೇಮ್ ಅನ್ನು 15-17 ಗೆ ತರಲು ಪ್ರಯತ್ನಿಸಿದರಾದರೂ ಚೀನಿ ಆಟಗಾರ್ತಿ ಮೊದಲ ಗೇಮ್ ಅನ್ನು 21-17 ರಿಂದ ಗೆದ್ದರು.
ಎರಡನೇ ಗೇಮ್ನಲ್ಲಿ ಸಿಂಧು 10-5 ರಿಂದ ಮುನ್ನಡೆ ಸಾಧಿಸಲು ಉತ್ತಮವಾಗಿ ಆರಂಭ ಪಡೆದುಕೊಂಡರು. ಆದರೆ ಎದುರಾಳಿ ಯು ಫೀ ಗೇಮ್ನ ದ್ವಿತೀಯಾರ್ಧದಲ್ಲಿ ಮರಳಿ ಸಿಂಧುವನ್ನು 21-16 ರಿಂದ ಸೋಲಿಸಿ ಫೈನಲ್ಗೆ ಮುನ್ನಡೆದರು.
ಈ ಸೋಲಿನೊಂದಿಗೆ ಸಿಂಧು ಥಾಯ್ಲೆಂಡ್ ಓಪನ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಫೈನಲ್ನಲ್ಲಿ ಯು ಫೀ ತೈವಾನ್ನ ತೈ ತ್ಸು ಯಿಂಗ್ ಅಥವಾ ಥಾಯ್ಲೆಂಡ್ನ ರಚನೋಕ್ ಇಂಟನಾನ್ ಅವರನ್ನು ಎದುರಿಸಲಿದ್ದಾರೆ.