ನಿಮ್ಮ ಆಶೀರ್ವಾದವಿಲ್ಲದೆ ಗೆಲುವು ಅಪೂರ್ಣ: ಮೇರಿ ಕೋಮ್ ಜೊತೆ ನಿಖತ್ ಜರೀನ್ ಫೋಟೋ ವೈರಲ್
ಕಳೆದ ವಾರ ನಡೆದ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ನಿಖತ್ ಜರೀನ್ ಚಿನ್ನ ಗೆದ್ದು, ಪಂದ್ಯಾವಳಿಯ ಇತಿಹಾಸದಲ್ಲಿ ಚಿನ್ನದ ಪದಕವನ್ನು ಗಳಿಸಿದ ಐದನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Published: 25th May 2022 04:08 PM | Last Updated: 25th May 2022 04:29 PM | A+A A-

ಮೇರಿಕೋಮ್ ಜೊತೆ ನಿಖತ್ ಜರೀನ್
ನವದೆಹಲಿ: ಕಳೆದ ವಾರ ನಡೆದ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ನಿಖತ್ ಜರೀನ್ ಚಿನ್ನ ಗೆದ್ದು, ಪಂದ್ಯಾವಳಿಯ ಇತಿಹಾಸದಲ್ಲಿ ಚಿನ್ನದ ಪದಕವನ್ನು ಗಳಿಸಿದ ಐದನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಗೆಲುವಿನ ಸಂಭ್ರಮದಲ್ಲಿರುವ ಜರೀನ್ ಅವರು ವಿಶ್ವ ಚಾಂಪಿಯನ್ಶಿಪ್ನಲ್ಲಿ ಆರು ಚಿನ್ನದ ಪದಕಗಳನ್ನು ಗೆದ್ದಿರುವ ಭಾರತೀಯ ಬಾಕ್ಸಿಂಗ್ ದಂತಕಥೆ ಮೇರಿ ಕೋಮ್ ಅವರೊಂದಿಗಿನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ: ವಿಶ್ವ ಬಾಕ್ಸಿಂಗ್ ಚಾಂಪಿಯನ್ ಷಿಪ್: ಭಾರತದ ನಿಖತ್ ಜರೀನ್ ಚಾಂಪಿಯನ್!
“ನಿಮ್ಮ ಆಶೀರ್ವಾದವಿಲ್ಲದೆ ಯಾವುದೇ ಗೆಲುವು ಪೂರ್ಣಗೊಳ್ಳುವುದಿಲ್ಲ” ಎಂದು ಫೋಟೋ ಬಗ್ಗೆ ಬರೆದಿದ್ದಾರೆ. ಈ ಚಿತ್ರವು ವೈರಲ್ ಆಗಿದೆ.
ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ನಿಖತ್ ಜರೀನ್ ಅವರ ಬೃಹತ್ ಗೆಲುವಿನ ನಂತರ ಅವರನ್ನು ಅಭಿನಂದಿಸಿದ್ದರು. “ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಅಭಿನಂದನೆಗಳು. ನಿಮ್ಮ ಐತಿಹಾಸಿಕ ಪ್ರದರ್ಶನಗಳ ಬಗ್ಗೆ ನಿಮ್ಮ ಬಗ್ಗೆ ಹೆಮ್ಮೆ ಇದೆ ಮತ್ತು ನಿಮ್ಮ ಭವಿಷ್ಯದ ಪ್ರಯತ್ನಗಳಿಗೆ ಶುಭವಾಗಲಿ” ಎಂದು ಅವರು ಟ್ವೀಟ್ ಮಾಡಿದ್ದರು.
Photos - ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್: ಭಾರತದ ನಿಖತ್ ಜರೀನ್ ಗೆ ಚಿನ್ನದ ಕಿರೀಟ
ಟರ್ಕಿಯಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನ 52 ಕೆಜಿ ವಿಭಾಗದ ಫೈನಲ್ನಲ್ಲಿ, ಜರೀನ್ ಅವರು 5-0 ಅಂಕಗಳೊಂದಿಗೆ ಥಾಯ್ಲೆಂಡ್ನ ಜಿಟ್ಪಾಂಗ್ ಜುಟಾಮಾಸ್ ಅವರನ್ನು ಸೋಲಿಸಿದ್ದರು.
No victory is complete without your idol’s blessings@MangteC #HappyMorning#HappyMe#HappyUs pic.twitter.com/uXJFcK9nMu
— Nikhat Zareen (@nikhat_zareen) May 25, 2022