ಕಿರಣ್ ರಿಜಿಜು - ಪಿಟಿ ಉಷಾ
ಕಿರಣ್ ರಿಜಿಜು - ಪಿಟಿ ಉಷಾ

ಭಾರತೀಯ ಒಲಂಪಿಕ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಪಿಟಿ ಉಷಾ ಆಯ್ಕೆ

ಭಾರತೀಯ ಒಲಂಪಿಕ್ ಸಂಸ್ಥೆ(ಐಒಎ)ಯ ನೂತನ ಅಧ್ಯಕ್ಷರಾಗಿ ಲೆಜೆಂಡರಿ ಅಥ್ಲೀಟ್ ಪಿಟಿ ಉಷಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಐಒಎ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಿಟಿ...

ನವದೆಹಲಿ: ಭಾರತೀಯ ಒಲಂಪಿಕ್ ಸಂಸ್ಥೆ(ಐಒಎ)ಯ ನೂತನ ಅಧ್ಯಕ್ಷರಾಗಿ ಲೆಜೆಂಡರಿ ಅಥ್ಲೀಟ್ ಪಿಟಿ ಉಷಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಐಒಎ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಿಟಿ ಉಷಾ ಅವರು ಪಾತ್ರರಾಗಿದ್ದಾರೆ.

ಐಒಎ ಅಧ್ಯಕ್ಷರಾಗಿ ಆಯ್ಕೆಯಾದ ಪಿಟಿ ಉಷಾ ಅವರನ್ನು ಈ ಹಿಂದೆ ಕೇಂದ್ರ ಕ್ರೀಡಾ ಸಚಿವರಾಗಿದ್ದ, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಅಭಿನಂದಿಸಿದ್ದಾರೆ.

"ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಲೆಜೆಂಡರಿ ಗೋಲ್ಡನ್ ಗರ್ಲ್ ಶ್ರೀಮತಿ ಪಿ ಟಿ ಉಷಾ ಅವರಿಗೆ ಅಭಿನಂದನೆಗಳು. ಪ್ರತಿಷ್ಠಿತ ಐಒಎಯ ಪದಾಧಿಕಾರಿಗಳಾಗಿರುವ ದೇಶದ ಎಲ್ಲಾ ಕ್ರೀಡಾ ವೀರರನ್ನು ನಾನು ಅಭಿನಂದಿಸುತ್ತೇನೆ! ದೇಶ ಅವರ ಬಗ್ಗೆ ಹೆಮ್ಮೆಪಡುತ್ತದೆ!, ಎಂದು ರಿಜಿಜು ಟ್ವೀಟ್ ಮಾಡಿದ್ದಾರೆ.

ಭಾರತೀಯ ಕ್ರೀಡಾ ಪ್ರಾಧಿಕಾರ ಕೂಡ ಕಿರಣ್ ರಿಜಿಜು ಅವರ ಟ್ವೀಟ್ ಅನ್ನು ರಿಟ್ವೀಟ್ ಮಾಡಿದೆ.

Related Stories

No stories found.

Advertisement

X
Kannada Prabha
www.kannadaprabha.com