ಅಖಿಲ ಭಾರತ ಫುಟ್ ಬಾಲ್ ಫೆಡರೇಶನ್ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಶಾಜಿ ಪ್ರಭಾಕರನ್ ನೇಮಕ
ದೆಹಲಿ ಫುಟ್ ಬಾಲ್ ಅಧ್ಯಕ್ಷ ಮತ್ತು ಧೀರ್ಘ ಕಾಲದಿಂದ ಆಡಳಿತಾಧಿಕಾರಿಯಾಗಿರುವ ಶಾಜಿ ಪ್ರಭಾಕರನ್ ಅವರನ್ನು ಅಖಿಲ ಭಾರತ ಫುಟ್ ಬಾಲ್ ಫೆಡರೇಶನ್ ನ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಶನಿವಾರ ನೇಮಕಗೊಂಡಿದ್ದಾರೆ.
Published: 03rd September 2022 03:29 PM | Last Updated: 03rd September 2022 04:39 PM | A+A A-

ಶಾಜಿ ಪ್ರಭಾಕರನ್
ನವದೆಹಲಿ: ದೆಹಲಿ ಫುಟ್ ಬಾಲ್ ಅಧ್ಯಕ್ಷ ಮತ್ತು ಧೀರ್ಘ ಕಾಲದಿಂದ ಆಡಳಿತಾಧಿಕಾರಿಯಾಗಿರುವ ಶಾಜಿ ಪ್ರಭಾಕರನ್ ಅವರನ್ನು ಅಖಿಲ ಭಾರತ ಫುಟ್ ಬಾಲ್ ಫೆಡರೇಶನ್ ನ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಶನಿವಾರ ನೇಮಕಗೊಂಡಿದ್ದಾರೆ.
ಪುಟ್ ಬಾಲ್ ಹೌಸ್ ನಲ್ಲಿ ಎಐಎಫ್ ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ನೇತೃತ್ವದಲ್ಲಿ ನಡೆದ ಅಖಿಲ ಭಾರತ ಪುಟ್ ಬಾಲ್ ಫೆಡರೇಶನ್ ನ ನೂತನ ಕಾರ್ಯಕಾರಿ ಸಮಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಅಖಿಲ ಭಾರತ ಪುಟ್ ಬಾಲ್ ಫೆಡರೇಶನ್ ನ ನೂತನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಪ್ರಭಾಕರನ್ ಅವರ ಹೆಸರನ್ನು ಚೌಬೆ ಸೂಚಿಸಿದರು. ಇತರ ಎಲ್ಲಾ ಸದಸ್ಯರನ್ನು ಇದನ್ನು ಸರ್ವಾನುಮತದಿಂದ ಅನುಮೋದಿಸಿದರು ಎಂದು ಎಐಎಫ್ ಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಎಐಎಫ್‌ಎಫ್‌ನ ನೂತನ ಅಧ್ಯಕ್ಷರಾಗಿ ಕಲ್ಯಾಣ್ ಚೌಬೆ ಆಯ್ಕೆ; ಉಪಾಧ್ಯಕ್ಷ ಸ್ಥಾನ ಗೆದ್ದ ಕಾಂಗ್ರೆಸ್ ಶಾಸಕ ಎನ್ಎ ಹ್ಯಾರಿಸ್!
ಸುಪ್ರೀಂಕೋರ್ಟ್ ನಿರ್ದೇಶನದಿಂದ ಇದೇ ಮೊದಲ ಬಾರಿಗೆ ಆರು ಮಂದಿ ಮಾಜಿ ಆಟಗಾರರು ಸಮಿತಿಯ ಭಾಗವಾಗಿದ್ದಾರೆ. ನಾವು ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ. ಭಾರತೀಯ ಫುಟ್ ಬಾಲ್ ನ್ನು ಎಲ್ಲರೂ ಒಟ್ಟಾಗಿ ತೆಗೆದುಕೊಂಡು ಹೋಗಲು ಯಾವುದೇ ವೈಯಕ್ತಿಕ ಪ್ರತಿಷ್ಠೆ ಅಡ್ಡಿಯಾಗಬರಾದು, ಯಶಸ್ಸು ಸಾಧಿಸುವಲ್ಲಿ ಶಿಸ್ತು ಪ್ರಮುಖವಾದ ಅಂಶವಾಗಿದೆ ಎಂದು ಎಐಎಫ್ ಎಫ್ ಅಧ್ಯಕ್ಷರು ಹೇಳಿದ್ದಾರೆ.